ಇನ್ಫೋಸಿಸ್‌ಗೆ 5,129 ಕೋಟಿ ಲಾಭ, ಇದು ಸುಗ್ಗಿಯ ಕಾಲ

Posted By:
Subscribe to Oneindia Kannada

ಬೆಂಗಳೂರಿನಲ್ಲೇ ಹುಟ್ಟಿಕೊಂಡ, ಭಾರತದ ಎರಡನೇ ಅತಿ ದೊಡ್ಡ ಐಟಿ ಕಂಪೆನಿ ಇನ್ಫೋಸಿಸ್ ಡಿಸೆಂಬರ್ ತ್ರೈ ಮಾಸಿಕದಲ್ಲಿ 5,129 ಕೋಟಿ ರುಪಾಯಿ ನಿವ್ವಳ ಲಾಭವನ್ನು ದಾಖಲಿಸಿದೆ. 3,599 ಕೋಟಿ ರುಪಾಯಿ ಲಾಭವಾಗಬಹುದು ಎಂದು ತಜ್ಞರು ಅಂದಾಜಿಸಿದ್ದರು. ಆದರೆ ನಿರೀಕ್ಷೆಗೂ ಮೀರಿ ಲಾಭ ಬಂದಿದೆ.

ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಸಂಬಳ ಬಹಿರಂಗ!

ಸೆಪ್ತೆಂಬರ್ ತ್ರೈ ಮಾಸಿಕಕ್ಕೆ ಇನ್ಫೋಸಿಸ್ 3,726 ಕೋಟಿ ರುಪಾಯಿ ನಿವ್ವಳ ಲಾಭ ಪಡೆದಿತ್ತು. ಅಂದಹಾಗೆ ಡಿಸೆಂಬರ್ ತ್ರೈಮಾಸಿಕ ಅಂತ್ಯಕ್ಕೆ ಇನ್ಫೋಸಿಸ್ ನ ಆದಾಯ 17,794 ಕೋಟಿ ರುಪಾಯಿ ಬಂದಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 1.3ರಷ್ಟು ಹಾಗೂ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 3ರಷ್ಟು ಆದಾಯ ಪ್ರಮಾಣ ಹೆಚ್ಚಾಗಿದೆ.

ಸಂಕ್ರಾಂತಿ ವಿಶೇಷ ಪುಟ

Infosys Q3 net profit 5129 crore

ಷೇರು ಮಾರುಕಟ್ಟೆಯ ಶುಕ್ರವಾರದ ವಹಿವಾಟಿನಲ್ಲಿ ದಿನಾಂತ್ಯಕ್ಕೆ ಸೆನ್ಸೆಕ್ಸ್ ನಲ್ಲಿ ಇನ್ಫೋಸಿಸ್ ಷೇರಿನ ಬೆಲೆ 1078.40 ಹಾಗೂ ನಿಫ್ಟಿ 1078.45 ಇದೆ. ಇನ್ನು ವಾರ್ಷಿಕ ಗರಿಷ್ಠ ಮಟ್ಟವಾದ ರು. 1089 ಸೆನ್ಸೆಕ್ಸ್ ನಲ್ಲಿ ಹಾಗೂ ನಿಫ್ಟಿಯಲ್ಲಿ 1085.90 ತಲುಪಿತು. ಒಟ್ಟಾರೆ ಇನ್ಫೋಸಿಸ್ ನ ತ್ರೈ ಮಾಸಿಕ ಫಲಿತಾಂಶ ನಿರೀಕ್ಷೆಗೂ ಮೀರಿ ಸಕಾರಾತ್ಮಕವಾಗಿ ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Infosys, India's second-largest IT player, reported on Friday a 37.6 per cent sequential growth in net profit at Rs 5,129 crore for the December quarter.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X