ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಉದ್ಯೋಗಿಗಳಿಗೆ ಬಡ್ತಿ, ಸಂಬಳ ಏರಿಕೆ ಗಿಫ್ಟ್

By Mahesh
|
Google Oneindia Kannada News

ಬೆಂಗಳೂರು, ಅ.14: ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ತನ್ನ ಉದ್ಯೋಗಿಗಳ ಸಂಬಳ ಏರಿಕೆ ಮಾಡಿದೆ. ಪ್ರಸಕ್ತ ಅರ್ಥಿಕ ವರ್ಷದಲ್ಲಿ 20 ಸಾವಿರಕ್ಕೂ ಅಧಿಕ ನೇಮಕಾತಿ ಘೋಷಿಸಿದ ಬೆನ್ನಲ್ಲೇ ಹಾಲಿ ಉದ್ಯೋಗಿಗಳ ಸಂಬಳ, ವೇರಿಯಬಲ್ ಪೇ ಹೆಚ್ಚಿಸಲಾಗಿದೆ.

ಉತ್ತಮ ಕಾರ್ಯ ನಿರ್ವಹಣೆ ತೋರಿದ 2,000ಕ್ಕೂ ಅಧಿಕ ಉದ್ಯೋಗಿಗಳಿಗೆ ಬಡ್ತಿ ನೀಡಲಾಗಿದೆ. ಹಲವರಿಗೆ ವೇರಿಯಬಲ್ ಪೇ ಅಧಿಕಗೊಂಡಿದೆ. ಒಟ್ಟಾರೆ, 2,067 ಉದ್ಯೋಗಿಗಳಿಗೆ ಬಡ್ತಿ ಸಿಕ್ಕಿದೆ. ಎರಡನೇ ತ್ರೈಮಾಸಿಕ ವರದಿ ನಿರೀಕ್ಷೆಗೂ ಮೀರಿದ ಫಲಿತಾಂಶ ನೀಡಿದ್ದಲ್ಲದೆ ಪ್ರತಿಸ್ಪರ್ಧಿ ಟಾಟಾ ಕನ್ಸಲ್ಟೆನ್ಸಿ ಗಿಂತ ಉತ್ತಮ ಫಲಿತಾಂಶ ಪಡೆದುಕೊಂಡಿದೆ. [ಇನ್ಫೋಸಿಸ್ ನಿಂದ 20 ಸಾವಿರ ನೇಮಕಾತಿ ಘೋಷಣೆ!]

Infosys promotes more than 2,000, gives 100% variable

ಹೀಗಾಗಿ ಜುಲೈ-ಸೆಪ್ಟೆಂಬರ್ ತ್ರೈಮಾಸಿಕ ಅವಧಿಗೆ ಶೇ 80 ರಿಂದ ಶೇ 100ರಷ್ಟು ವೇರಿಯಬಲ್ ಪೇಔಟ್ ಸಿಕ್ಕಿದೆ. ಕಳೆದ ಡಿಸೆಂಬರ್ ತಿಂಗಳ ನಂತರ ಇದೇ ಮೊದಲ ಬಾರಿಗೆ ಶೇ 100ರಷ್ಟು ವೇರಿಯಬಲ್ ಪೇ ಸಿಗುತ್ತಿದೆ.[Q2: ಇನ್ಫಿಗೆ ನಿರೀಕ್ಷೆಗೂ ಮೀರಿದ ಲಾಭ, ಭರ್ಜರಿ ಆದಾಯ]

ಒಟ್ಟಾರೆ ಏಪ್ರಿಲ್ ತಿಂಗಳಿನಿಂದ ಇಲ್ಲಿ ತನಕ 4,711 ಉದ್ಯೋಗಿಗಳಿಗೆ ಬಡ್ತಿ ಸಿಕ್ಕಿದೆ. ಜೂನ್ ತ್ರೈಮಾಸಿಕದ ನಂತರ 2,600 ಕ್ಕೂ ಅಧಿಕ ಜನರಿಗೆ ಬಡ್ತಿ ಸಿಕ್ಕಿರುವುದು ವಿಶೇಷ. ಸತತವಾಗಿ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ, ಉದ್ಯೋಗಿಗಳಿಗೆ ಬಡ್ತಿ ನೀಡುತ್ತಿರುವುದರಿಂದ ಆಟ್ರಿಷನ್ ಪ್ರಮಾಣ ಕಳೆದ ತ್ರೈಮಾಸಿಕದಲ್ಲಿ ಶೇ 14 ಹಾಗೂ ಒಟ್ಟಾರೆ ಶೇ 19.9ಕ್ಕೆ ಇಳಿದಿದೆ.

English summary
Infosys has handed out 2,000-odd promotions to its top-performing employees and increased variable payouts, following consecutive quarters of industry-leading growth.Infosys has so far given 4,711 promotions since the current financial year started in April, including more than 2,600 during the quarter ended in June, a company spokeswoman said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X