ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Infosys Hiring 2022: ಫ್ರೆಶರ್ಸ್‌ಗಳಿಗೆ ಸಿಹಿಸುದ್ದಿ, ಭರ್ಜರಿ ನೇಮಕಾತಿ ಘೋಷಿಸಿದ ಇನ್ಫೋಸಿಸ್

|
Google Oneindia Kannada News

ಬೆಂಗಳೂರು, ಏಪ್ರಿಲ್ 14: ಬೆಂಗಳೂರು ಮೂಲದ ಐಟಿ ದಿಗ್ಗಜ ಇನ್ಫೋಸಿಸ್ ತನ್ನ ನೇಮಕಾತಿ ಪ್ರಕ್ರಿಯೆ ಮುಂದುವರೆಸುತ್ತಿದೆ. ನಾಲ್ಕನೇ ತ್ರೈಮಾಸಿಕ ವರದಿ ಪ್ರಕಟಿಸಿದ ಬೆನ್ನಲ್ಲೇ ಪ್ರಸಕ್ತ ಆರ್ಥಿಕ ವರ್ಷದಲ್ಲೇ 50 ಸಾವಿರಕ್ಕೂ ಅಧಿಕ ಫ್ರೆಶರ್ಸ್ ನೇಮಕಾತಿಯನ್ನು ಘೋಷಿಸಿದೆ. ಕಳೆದ ಎರಡು ತ್ರೈಮಾಸಿಕದಲ್ಲಿ 45 ಸಾವಿರ ತನಕ ನೇಮಕಾತಿ ಸಾಧ್ಯತೆ ಬಗ್ಗೆ ಘೋಷಿಸಲಾಗಿತ್ತು. ಆದರೆ, ಈಗ ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.

ಒಟ್ಟಾರೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ 50 ಸಾವಿರಕ್ಕೂ ಅಧಿಕ ಫ್ರೆಶರ್ಸ್ ಸೇರಿದಂತೆ 80, 000 ಹೊಸ ನೇಮಕಾತಿ ಘೋಷಿಸಲಾಗಿದೆ. ಮೂರನೇ ತ್ರೈಮಾಸಕ ಅವಧಿಯಲ್ಲಿ ಶೇ 25.5 ರಷ್ಟಿದ್ದ ಕಂಪನಿಯ ಕ್ಷೀಣತೆ(attrition) ದರ ಈ ತ್ರೈಮಾಸಿಕದಲ್ಲಿ ಶೇ 27.7ಕ್ಕೇರಿದೆ.

ರಷ್ಯಾದಿಂದ ಇನ್ಫೋಸಿಸ್ ಅಧಿಕೃತವಾಗಿ ಹೊರಕ್ಕೆ: ಸಲೀಲ್ ಪರೇಖ್ ರಷ್ಯಾದಿಂದ ಇನ್ಫೋಸಿಸ್ ಅಧಿಕೃತವಾಗಿ ಹೊರಕ್ಕೆ: ಸಲೀಲ್ ಪರೇಖ್

ಇತರೆ ಪ್ರಮುಖ ಐಟಿ ಕಂಪನಿಗಳಿಗೆ ಹೋಲಿಸಿದರೆ ಅತಿ ಹೆಚ್ಚು ಆಟ್ರಿಷನ್ ದರ ಇನ್ಫೋಸಿಸ್ ಸಂಸ್ಥೆಯಲ್ಲೇ ದಾಖಲಿಸಲಾಗುತ್ತಿದೆ. ಹೀಗಾಗಿ, ಸಮತೋಲನ ಕಾಯ್ದುಕೊಳ್ಳಲು ಹೊಸ ನೇಮಕಾತಿ ಹಾಗೂ ನೇಮಕಗೊಂಡ ಉದ್ಯೋಗಿಗಳನ್ನು ಕಾಯ್ದುಕೊಳ್ಳಲು ಇನ್ಫೋಸಿಸ್ ಯೋಜನೆ ಹಾಕಿಕೊಂಡಿದೆ.

ಸಿಒಒ ಪ್ರವೀಣ್ ರಾವ್

ಸಿಒಒ ಪ್ರವೀಣ್ ರಾವ್

"ಮಾರುಕಟ್ಟೆ ಅವಕಾಶದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ಸಲುವಾಗಿ, ನಾವು ನಮ್ಮ ಕಾಲೇಜು ಪದವೀಧರರ ನೇಮಕಾತಿ ಕಾರ್ಯಕ್ರಮವನ್ನು ಮುಂದುವರೆಸುತ್ತಿದ್ದು, ವಾರ್ಷಿಕ 50,000 ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅದೇ ಸಮಯದಲ್ಲಿ, ನಾವು ಆರೋಗ್ಯ ಮತ್ತು ಕ್ಷೇಮ ಕ್ರಮಗಳು, ಪುನಶ್ಚೇತನ ಕಾರ್ಯಕ್ರಮಗಳು, ಸೂಕ್ತ ಪರಿಹಾರ ಮಧ್ಯಸ್ಥಿಕೆಗಳು ಮತ್ತು ವರ್ಧಿತ ವೃತ್ತಿ ಬೆಳವಣಿಗೆ ಅವಕಾಶಗಳನ್ನು ಒಳಗೊಂಡಂತೆ ಉದ್ಯೋಗಿಗಳ ಮೌಲ್ಯ ಪ್ರತಿಪಾದನೆಯನ್ನು ಬಲಪಡಿಸುವುದನ್ನು ಮುಂದುವರಿಸುತ್ತೇವೆ,'' ಎಂದು ಸಿಒಒ ಪ್ರವೀಣ್ ರಾವ್ ಪ್ರತಿಕ್ರಿಯಿಸಿದ್ದಾರೆ.

ಡಿಜಿಟಲ್ ಸೇವೆಗೆ ಹೆಚ್ಚಿನ ಬೇಡಿಕೆ

ಡಿಜಿಟಲ್ ಸೇವೆಗೆ ಹೆಚ್ಚಿನ ಬೇಡಿಕೆ

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಇನ್ಫೋಸಿಸ್, ವಿಪ್ರೋ ಸಂಸ್ಥೆಗಳು ಕಳೆದ ಆರ್ಥಿಕ ವರ್ಷದಲ್ಲಿ ಬೇರೆ ಐಟಿ ಕಂಪನಿಗಳಿಗೆ ಹೋಲಿಸಿದರೆ ಶೇ 45ರಷ್ಟು ಅಧಿಕ ನೇಮಕಾತಿ ಮಾಡಿಕೊಂಡಿವೆ. ಕೊರೊನಾ ಕಾಲದಲ್ಲಿಸರ್ಕಾರಿ ಸಂಸ್ಥೆಗಳು ಸೇರಿದಂತೆ ಅನೇಕ ಸಂಸ್ಥೆಗಳು ಡಿಜಿಟಲ್ ಸೇವೆಗೆ ಹೆಚ್ಚಿನ ಬೇಡಿಕೆ ಒಡ್ಡಿದ್ದರಿಂದ ಟಾಪ್ 3 ಸಂಸ್ಥೆಗಳಲ್ಲಿ ಹೆಚ್ಚಿನ ನೇಮಕಾತಿ ನಡೆದಿದೆ.

ಪ್ರಸಕ್ತ ವರ್ಷದಲ್ಲಿ ಈ ಟಾಪ್ 3 ಕಂಪನಿಗಳಲ್ಲದೆ ಎಚ್‌ಸಿಎಲ್ ಟೆಕ್ ಸೇರಿದಂತೆ ಸುಮಾರು 1 ಲಕ್ಷ ಫ್ರೆಶರ್ಸ್ ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿವೆ. 2021-22ರ ಆರ್ಥಿಕ ವರ್ಷದಲ್ಲಿ 40 ಸಾವಿರ ಹೊಸ ನೇಮಕಾತಿಯನ್ನು ಟಿಸಿಎಸ್ ಘೋಷಿಸಿದೆ ಅಲ್ಲದೆ, ಕೆಲ ತಿಂಗಳುಗಳಲ್ಲೇ ಒಟ್ಟಾರೆ ಉದ್ಯೋಗಿಗಳ ಸಂಖ್ಯೆಯನ್ನು ದಾಖಲೆಯ 5 ಲಕ್ಷ ಸಂಖ್ಯೆಗೇರಿಸಿಕೊಂಡಿದೆ.

ಪ್ರಮುಖ ಐಟಿ ರಫ್ತು ಕಂಪನಿ

ಪ್ರಮುಖ ಐಟಿ ರಫ್ತು ಕಂಪನಿ

ಬೆಂಗಳೂರು ಮೂಲದ ಪ್ರಮುಖ ಐಟಿ ರಫ್ತು ಕಂಪನಿ ಇನ್ಫೋಸಿಸ್ ಏಪ್ರಿಲ್ 13ರಂದು ತನ್ನ ನಾಲ್ಕನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಲೆಕ್ಕದಲ್ಲಿ ಶೇ 12ರಷ್ಟು ಲಾಭ ಕಂಡು ಬಂದಿದ್ದರೂ, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 2ರಷ್ಟು ಲಾಭ ಇಳಿಕೆಯಾಗಿದೆ. ಈ ತ್ರೈಮಾಸಿಕದಲ್ಲಿ 5,686 ಕೋಟಿ ರು ನಿವ್ವಳ ಲಾಭ ದಾಖಲಿಸಿದೆ.

ತೆರಿಗೆ ನಂತರ ಲಾಭ(PAT)

ತೆರಿಗೆ ನಂತರ ಲಾಭ(PAT)

ತೆರಿಗೆ ನಂತರ ಲಾಭ(PAT) 5,076 ಕೋಟಿ ರು ಬಂದಿದೆ. ಕಳೆದ ತ್ರೈಮಾಸಿಕದಲ್ಲಿ PAT 5,809 ಕೋಟಿ ರು ದಾಖಲಾಗಿತ್ತು. ಆದಾಯದ ವಿಷಯಕ್ಕೆ ಬಂದರೆ ವರ್ಷದಿಂದ ವರ್ಷಕ್ಕೆ (YoY) ಲೆಕ್ಕದಲ್ಲಿ ಶೇ 23ರಷ್ಟು ಹೆಚ್ಚು ಆದಾಯ ಗಳಿಕೆ ಹೆಚ್ಚಾಗಿದ್ದು, 32,276 ಕೋಟಿ ರು ದಾಖಲಾಗಿದೆ. ತ್ರೈಮಾಸಿಕದಲ್ಲಿ ಶೇ 1ರಷ್ಟು ಮಾತ್ರ ಆದಾಯ ಹೆಚ್ಚಳವಾಗಿದ್ದು, 26,311 ಕೋಟಿ ರು ಬಂದಿದೆ. ಅಕ್ಟೋಬರ್ -ಡಿಸೆಂಬರ್ ತ್ರೈಮಾಸಿಕದಲ್ಲಿ 31,867 ಕೋಟಿ ರು ಆದಾಯ ದಾಖಲಾಗಿತ್ತು.

Recommended Video

ತೇಜಸ್ವಿ ಸೂರ್ಯ ವಿಚಾರದಲ್ಲಿ ಅರವಿಂದ್ ಕೇಜ್ರಿವಾಲ್ ಅವರೇ ಸುಮ್ನಿರುವಾಗ ನಾನ್ಯಾಕ್ ಮಾತಾಡ್ಲಿ | Oneindia Kannada
ಲಾಭಾಂಶವನ್ನು ಇನ್ಫೋಸಿಸ್ ಶಿಫಾರಸು ಮಾಡಿದೆ

ಲಾಭಾಂಶವನ್ನು ಇನ್ಫೋಸಿಸ್ ಶಿಫಾರಸು ಮಾಡಿದೆ

ಮಾರ್ಚ್ 31, 2022 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಪ್ರತಿ ಈಕ್ವಿಟಿ ಷೇರಿಗೆ ರೂ 16/- ರ ಅಂತಿಮ ಲಾಭಾಂಶವನ್ನು ಇನ್ಫೋಸಿಸ್ ಶಿಫಾರಸು ಮಾಡಿದೆ. ಅಂತಿಮ ಲಾಭಾಂಶವನ್ನು ಪಾವತಿಸಲು ಜೂನ್ 1, 2022 ರ ದಾಖಲೆಯ ದಿನಾಂಕ ಮತ್ತು ಲಾಭಾಂಶವನ್ನು ಜೂನ್ 28, 2022 ರಂದು ಪಾವತಿಸಲಾಗುತ್ತದೆ.

ಏಪ್ರಿಲ್ 13 ರಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ಇನ್ಫೋಸಿಸ್ ಷೇರು ರೂ 6.10 ರಷ್ಟು ಏರಿಕೆಯೊಂದಿಗೆ ರೂ 1,748.55 ಕ್ಕೆ ಕೊನೆಗೊಂಡಿತು. ಕಳೆದ ಒಂದು ತಿಂಗಳಲ್ಲಿ ಸ್ಟಾಕ್ 4.0 ಪ್ರತಿಶತದಷ್ಟು ಕಡಿಮೆ ವಹಿವಾಟು ನಡೆಸುತ್ತಿದೆ ಮತ್ತು ಕಳೆದ ಒಂದು ವರ್ಷದಲ್ಲಿ 25.2 ಶೇಕಡಾ ಆದಾಯವನ್ನು ಗಳಿಸಿದೆ.

English summary
Infosys expanded its fresher recruitment program from 50,000 to 85,000 hirings in the bygone fiscal year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X