ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಸಿಇಒಗಾಗಿ ಇನ್ಫೋಸಿಸ್ ಹುಡುಕಾಟ

By Mahesh
|
Google Oneindia Kannada News

ಬೆಂಗಳೂರು, ಏ.11: ದೇಶದ ಪ್ರಮುಖ ಐಟಿ ಉದ್ಯಮ ಸಂಸ್ಥೆ ಇನ್ಫೋಸಿಸ್ ನಲ್ಲಿ ಈಗ ಹೊಸ ಸಿಇಒಗಾಗಿ ಹುಡುಕಾಟ ನಡೆದಿದೆ. ಹಾಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಡಿ ಶಿಬುಲಾಲ್ ಅವರ ಅಧಿಕಾರ ಅವಧಿ ಮುಗಿಯುತ್ತಾ ಬಂದಿದ್ದು, ಸದ್ಯದಲ್ಲೇ ಹುದ್ದೆಯನ್ನು ತೊರೆಯುತ್ತಾರೆ ಎಂಬ ಸುದ್ದಿ ಬಂದಿದೆ.

ಈಗಾಗಲೇ ಇನ್ಫೋಸಿಸ್ ನ ಬೋರ್ಡ್ ಸದಸ್ಯರು ತಮ್ಮಮ್ಮ ಅಭ್ಯರ್ಥಿಯ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ. ಸಿಇಒ ಹುಡುಕಾಟದ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ ಎಂದು ತಿಳಿದು ಬಂದಿದೆ. ಶಿಬುಲಾಲ್ ಅವರು ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯನ್ನು ಮುಂದಿನ ಬೋರ್ಡ್ ಮೀಟಿಂಗ್ ನಂತರ ಅಥವಾ ಜ.9, 2015ರಂದು ತೊರೆಯುವ ನಿರೀಕ್ಷೆಯಿದೆ.

ಇನ್ಫೋಸಿಸ್ ನ ಸಹ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ಕಳೆದ ಜೂನ್.1 ರಂದು ಮತ್ತೊಮ್ಮೆ ಇನ್ಫೋಸಿಸ್ ಬೋರ್ಡ್ ಗೆ ಮರಳಿದ್ದರು. ಎನ್ ಆರ್ ನಾರಾಯಣ ಮೂರ್ತಿ ಅವರನ್ನು ಕಾರ್ಯಕಾರಿ ಚೇಮರ್ನ್ ಆಗಿ ನೇಮಕ ಮಾಡಿದ ಮೇಲೆ ಇನ್ಫೋಸಿಸ್ ಉದ್ಯೋಗಿಗಳು ಹಾಗೂ ಷೇರುದಾರರಲ್ಲಿ ಹೊಸ ಉತ್ಸಾಹ, ನಿರೀಕ್ಷೆ ಮೂಡಿತ್ತು. ಇನ್ಫೋಸಿಸ್ 3.0 ಅನುಷ್ಠಾನದ ಭಾಗವಾಗಿ ಉದ್ಯೋಗಿಗಳಿಗೆ ಈಗ ಸಂಬಳ ಏರಿಕೆ ಸಿಹಿ ಸುದ್ದಿ ನೀಡಲಾಗಿತ್ತು. ಆದರೆ, ಇದರ ಬೆನ್ನಲ್ಲೇ ಸಾಲು ಸಾಲು ಹಿರಿಯ ಅಧಿಕಾರಿಗಳು ಸಂಸ್ಥೆ ತೊರೆದಿದ್ದರು. ಇನ್ಫೋಸಿಸ್ ನ ಮಾಜಿ ಉದ್ಯೋಗಿಗಳಲ್ಲಿ ನಂದನ್ ನಿಲೇಕಣಿ ಹಾಗೂ ಬಾಲಕೃಷ್ಣನ್ ಅವರು ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.

Infosys looks for new CEO as Shibulal to quit

ಭಾರತೀಯ ಹೊರ ಗುತ್ತಿಗೆ ಹಾಗೂ ಬಿಸಿಸೆಸ್ ಪ್ರೊಸೆಸಿಸ್ ಔಟ್ ಸೋರ್ಸಿಂಗ್ ಕ್ಷೇತ್ರದಲ್ಲಿ ಶೇ 13-15ರಷ್ಟು ಏರಿಕೆ ಕಾಣಬಹುದು ಎಂದು ನಾಸಾಕಾಂ ಹೇಳಿದ ಮೇಲೆ ನಿರೀಕ್ಷೆಗಳ ಗರಿಗೆದರಿತ್ತು. 2013-14 ರಷ್ಟು ಈ ಪ್ರಮಾಣ ಶೇ 12-14 ರಷ್ಟಿತ್ತು.

ಮುಂದಿನ ಆರ್ಥಿಕ ವರ್ಷದಲ್ಲಿ ಉದ್ಯೋಗಿಗಳ ಸಂಬಳ ಏರಿಕೆ, ಬೋನಸ್ ಅಂಕಿಗಳು ಏರಿಕೆ ಮಾಡುವಲ್ಲಿ ಸಂಸ್ಥೆ ಧಾರಳತನ ತೋರುವುದಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಕಳೆದ ಆರ್ಥಿಕ ವರ್ಷ ಶೇ 8 ರಷ್ಟು ಸಂಬಳ ಏರಿಕೆ ಪಡೆದಿದ್ದ ಉದ್ಯೋಗಿಗಳು ಮುಂದಿನ ವರ್ಷ ಶೇ 5-7 ರಷ್ಟು ಮಾತ್ರ ಸಂಬಳ ಏರಿಕೆ ನಿರೀಕ್ಷಿಸಬಹುದು ಎಂದು ಶಿಬುಲಾಲ್ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Indian IT bellwether Infosys Ltd. is on lookout for a new chief executive to succeed its incumbent and co-founder S.D. Shibulal, who wants to quit soon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X