ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್​​ ಸಂಸ್ಥೆಯಿಂದ 10,000 ಉದ್ಯೋಗ ಕಡಿತ ಸಾಧ್ಯತೆ

|
Google Oneindia Kannada News

ಬೆಂಗಳೂರು, ನವೆಂಬರ್ 05: ಭಾರತದ ಪ್ರಮುಖ ಸಾಫ್ಟ್ ವೇರ್ ರಫ್ತು ಸಂಸ್ಥೆ, ಬೆಂಗಳೂರು ಮೂಲದ ಇನ್ಫೋಸಿಸ್ ವಿವಿಧ ಸ್ತರದ ಉದ್ಯೋಗಿಗಳನ್ನು ಮನೆಗೆ ಕಳಿಸಲು ನಿರ್ಧರಿಸಿದೆ. ಸುಮಾರು 10,000 ಉದ್ಯೋಗ ಕಡಿತ ಮುಂದಾಗಿದೆ ಎಂದು ವರದಿ ಬಂದಿದೆ.

ಟೈಮ್ ಆಫ್ ಇಂಡಿಯಾ ವರದಿಯಂತೆ ಮಧ್ಯಮ ಹಾಗೂ ಟಾಪ್ ಸ್ತರ ಅಧಿಕಾರಿಗಳು ಈ ಪಟ್ಟಿಯಲ್ಲಿದ್ದಾರೆ. 6, 7 ಮತ್ತು 8 ಉದ್ಯೋಗ ಸ್ತರ(Job Level) ದಲ್ಲಿರುವ ಉದ್ಯೋಗ ಕಡಿತ ಸಾಧ್ಯತೆ ಬಗ್ಗೆಯೂ ತಿಳಿಸಲಾಗಿದೆ. 6ನೇ ಸ್ತರದಲ್ಲಿ ಸೀನಿಯರ್ ಮ್ಯಾನೇಜರ್​ ಗಳಿದ್ದು, 2,200 ಮಂದಿಗೆ ಪಿಂಕ್​ ಸ್ಲಿಪ್​ ಸಿಗುವ ಸಾಧ್ಯತೆಯಿದೆ. ಒಟ್ಟಾರೆ, 30,092 ಉದ್ಯೊಗಿಗಳಿದ್ದು, ಎಲ್ಲ ಹಂತಗಳಲ್ಲಿ ಸೇರಿ 10,000 ಉದ್ಯೋಗಗಳು ಕಡಿತವಾಗುವ ಸಂಭವವಿದೆ ಎನ್ನಲಾಗಿದೆ.

Infosys likely to lay off thousands of employees reports

ಇನ್ಫೋಸಿಸ್​​ನಲ್ಲಿ 86,558 ಅಸೋಸಿಯೇಟ್ ದರ್ಜೆ(ಜೆಎಲ್-3)​ ಉದ್ಯೋಗಿಗಳು ಮತ್ತು 1.1 ಲಕ್ಷ ಮಂದಿ ಮಧ್ಯಮ(ಜೆಎಲ್​-4 ಮತ್ತು 5) ದರ್ಜೆ ಉದ್ಯೋಗಿಗಳಿದ್ದಾರೆ. ಈ ಹಂತಗಳಲ್ಲಿ ಶೇ. 2 ರಿಂದ ಶೇ. 5 ಉದ್ಯೋಗ ಕಡಿತಕ್ಕೆ ಸಂಸ್ಥೆ ಚಿಂತಿಸಿದೆ.

ಮತ್ತೊಂದು ಐಟಿ ಕಂಪನಿ ಕ್ಯಾಪ್​ಜೆಮಿನಿ ಭಾರತದಲ್ಲಿ 500 ಉದ್ಯೋಗ ಕಡಿತಕ್ಕೆ ಚಿಂತಿಸಿದೆ. ಕೆಲವು ದಿನಗಳ ಹಿಂದೆ ಕಾಗ್ನಿಜೆಂಟ್​​ 7,000 ಉದ್ಯೋಗಿಗಳನ್ನು ಕೆಲಸದಿಂದ ಮನೆಗೆ ಕಳಿಸುವುದಾಗಿ ಪ್ರಕಟಿಸಿತ್ತು.

English summary
Infosys is laying off over 10,000 of its employees in the associate and mid-level positions, reported The Times of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X