ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನಸಾದ ಕನಸು: ಹುಬ್ಬಳ್ಳಿ ಇನ್ಫೋಸಿಸ್ ಕ್ಯಾಂಪಸ್ ಆರಂಭ

|
Google Oneindia Kannada News

ಹುಬ್ಬಳ್ಳಿ, ಜುಲೈ 31: ಉತ್ತರ ಕರ್ನಾಟಕ ಜನತೆಯೆ ಬಹುದಿನಗಳ ಬೇಡಿಕೆಯೊಂದು ಈಗ ಈಡೇರುತ್ತಿದೆ. ಇನ್ಫೋಸಿಸ್ ತನ್ನ ಹುಬ್ಬಳ್ಳಿ ಕ್ಯಾಂಪಸ್‌ನಲ್ಲಿ ಆಗಸ್ಟ್ 1 ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸುವ ಸಾಧ್ಯತೆ ಇದೆ. ಇದು ಸ್ಥಳೀಯ ಉದ್ಯೋಗಾಕಾಂಕ್ಷಿಗಳಿಗೆ ಹೆಚ್ಚಿನ ಖುಷಿ ನೀಡುವ ವಿಚಾರವಾಗಿದೆ.

ಅದರಲ್ಲೂ ವಿಶೇಷವಾಗಿ ಇನ್ಫೋಸಿಸ್‌ ನಿರ್ಧಾರದಿಂದ ಸ್ಟಾರ್ಟ್ ಇನ್ಫೋಸಿಸ್ ಹುಬ್ಬಳ್ಳಿ ಅಭಿಯಾನದ ಭಾಗವಾಗಿದ್ದ ಎಲ್ಲರಲ್ಲಿ ಮತ್ತು ಅದಕ್ಕೆ ಬೆಂಬಲ ನೀಡಿದವರಲ್ಲಿ ಸಂತೋಷ ಮೂಡಿಸಿದೆ. ಆದರೆ, ಈ ಬಗ್ಗೆ ಇನ್ಫೋಸಿಸ್ ಸಂಸ್ಥೆ ಮತ್ತು ಐಟಿ ಮತ್ತು ಬಿಟಿ ಇಲಾಖೆಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ಉದ್ಯಮದ ಎಲ್ಲಾ ರಂಗಗಳಲ್ಲಿ ಕನ್ನಡಿಗರು ಅಗ್ರಸ್ಥಾನದಲ್ಲಿರಬೇಕು: ಬಸವರಾಜ ಬೊಮ್ಮಾಯಿಉದ್ಯಮದ ಎಲ್ಲಾ ರಂಗಗಳಲ್ಲಿ ಕನ್ನಡಿಗರು ಅಗ್ರಸ್ಥಾನದಲ್ಲಿರಬೇಕು: ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಕಾರ್ಯಾಚರಣೆ ಆರಂಭಿಸುವ ಬಗ್ಗೆ ತಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಐಟಿ ಮತ್ತು ಬಿಟಿ ಇಲಾಖೆ ಮೂಲಗಳು ತಿಳಿಸಿವೆ.

ಆದರೆ, ಆಗಸ್ಟ್ 1 ರಂದು ಹುಬ್ಬಳ್ಳಿ ಕ್ಯಾಂಪಸ್‌ನ್ನು ಕಾರ್ಯಗತಗೊಳಿಸುವ ಬಗ್ಗೆ ಉದ್ಯೋಗಿಗಳಿಗೆ ಅಧಿಕೃತ ಸಂವಹನವಿದೆ ಎಂದು ಕಂಪನಿಯೊಳಗಿನ ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ ಎಂದು ಸ್ಟಾರ್ಟ್ ಇನ್ಫೋಸಿಸ್ ಹುಬ್ಬಳ್ಳಿ ಅಭಿಯಾನದ ಸಂಚಾಲಕರಾದ ಸಂತೋಷ ನರಗುಂದ, ಶಾಮ್ ನರಗುಂದ, ಉದಯ್ ಪೆಂಡ್ಸೆ, ವಿಜಯ ಸಾಯಿ, ನಚಿಕೇತ್ ಜಮಾದಾರ ಇತರರು ತಿಳಿಸಿದ್ದಾರೆ.

 ದೇಶದ ಆರು ಸ್ಥಳಗಳಲ್ಲಿ ಕಚೇರಿ ಕಾರ್ಯಾರಂಭ

ದೇಶದ ಆರು ಸ್ಥಳಗಳಲ್ಲಿ ಕಚೇರಿ ಕಾರ್ಯಾರಂಭ

ಜೂನ್ 22 ರಂದು ಇಂದೋರ್ ಮತ್ತು ನಾಗ್ಪುರ ಸೇರಿದಂತೆ ರಾಜ್ಯದ ಹೊರಗೆ ಆರು ಸ್ಥಳಗಳಲ್ಲಿ ಇನ್ಫೋಸಿಸ್ ಕ್ಯಾಂಪಸ್‌ಗಳಲ್ಲಿ ಕಾರ್ಯಾರಂಭ ಮಾಡುವುದಾಗಿ ಘೋಷಿಸಿತು. ಈ ಸಮಯದಲ್ಲಿ ಹುಬ್ಬಳ್ಳಿಯಲ್ಲೂ ಇರುವ ಇನ್ಫೋಸಿಸ್ ಕಾರ್ಯಾಚರಣೆ ಆರಂಭವಾಗಬುದು ಎಂದು ಸ್ಥಳೀಯರು, ಉದ್ಯೋಗಾಂಕ್ಷಿಗಳು ನಿರೀಕ್ಷೆ ಮಾಡಿದ್ದರು.

ಆದರೆ, ಕರ್ನಾಟಕದ ಹುಬ್ಬಳ್ಳಿಯಲ್ಲಿ ಕಾರ್ಯಾಚರಣೆ ಆರಂಭಿಸುವ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ ನಂತರ, ಉತ್ತರ ಕರ್ನಾಟಕದ ವೃತ್ತಿಪರರು ಸಂಘಟನೆಯೊಂದನ್ನು ಮಾಡಿಕೊಂಡು ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಕಾರ್ಯಾಚರಣೆಯನ್ನು ಪ್ರಾರಂಭಿಸುವಂತೆ ಒತ್ತಾಯಿಸಿದ್ದರು.

KIMS Hubli Recruitment : ಹುಬ್ಬಳ್ಳಿ ವೈದ್ಯಕೀಯ ಸಂಸ್ಥೆಯಲ್ಲಿ ಹುದ್ದೆಗಳ ಭರ್ತಿKIMS Hubli Recruitment : ಹುಬ್ಬಳ್ಳಿ ವೈದ್ಯಕೀಯ ಸಂಸ್ಥೆಯಲ್ಲಿ ಹುದ್ದೆಗಳ ಭರ್ತಿ

 2018ರಲ್ಲೇ ಸ್ಥಾಪನೆಯಾಗಿದ್ದ ಇನ್ಫೋಸಿಸ್ ಕ್ಯಾಂಪಸ್

2018ರಲ್ಲೇ ಸ್ಥಾಪನೆಯಾಗಿದ್ದ ಇನ್ಫೋಸಿಸ್ ಕ್ಯಾಂಪಸ್

ಇನ್ಫೋಸಿಸ್ 2012ರಲ್ಲಿ ಹುಬ್ಬಳ್ಳಿಯಲ್ಲಿ ಐಟಿ ವಿಶೇಷ ಆರ್ಥಿಕ ವಲಯ (IT SEZ) ಸ್ಥಾಪನೆಗಾಗಿ ರಾಜ್ಯ ಸರ್ಕಾರದಿಂದ 50 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು. ನಂತರ, 2018 ರಲ್ಲಿ, ಸುಮಾರು 1,500 ಉದ್ಯೋಗಿಗಳಿಗೆ ಅವಕಾಶ ಕಲ್ಪಿಸುವ ಪೂರ್ಣ ಪ್ರಮಾಣದ ಶಾಖೆಯ ಸ್ಥಾಪನೆಯನ್ನು ಪೂರ್ಣಗೊಳಿಸಿತು.

ಇಲ್ಲಿ ತನ್ನ ಕಚೇರಿಯನ್ನು ಸ್ಥಾಪಿಸಿದ ನಂತರವೂ, ಅದು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿರಲಿಲ್ಲ. ಇನ್ಫೋಸಿಸ್‌ ನಿರ್ಧಾರ ಸಾರ್ವಜನಿಕರಲ್ಲಿ ನಿರಾಶೆಯನ್ನು ಉಂಟುಮಾಡಿತು, ವಿಶೇಷವಾಗಿ ಈ ಪ್ರದೇಶದ ಐಟಿ ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಬೇಸರಗೊಂಡಿದ್ದರು.

 ಕಾರ್ಯ ನಿರ್ವಹಿಸುವಂತೆ ಒತ್ತಾಯಿಸಿ ಫೊಸ್ಟ್‌ಕಾರ್ಡ್ ಅಭಿಯಾನ

ಕಾರ್ಯ ನಿರ್ವಹಿಸುವಂತೆ ಒತ್ತಾಯಿಸಿ ಫೊಸ್ಟ್‌ಕಾರ್ಡ್ ಅಭಿಯಾನ

ಬೆಂಗಳೂರಿನ ಹೊರಗಡೆ ಐಟಿ-ಬಿಟಿ ವಿಸ್ತರಣೆ ಮಾಡಬೇಕೆಂಬ ರಾಜ್ಯ ಸರ್ಕಾರದ ನೀತಿಯ ಹೊರತಾಗಿಯೂ, ಹುಬ್ಬಳ್ಳಿಯ ಇನ್ಫೋಸಿಸ್ ಕ್ಯಾಂಪಸ್ ಕಾರ್ಯನಿರ್ವಹಿಸದೆ ಉಳಿಯಿತು. ಸಮಾನ ಮನಸ್ಕ ಜನರು ಇನ್ಪೋಸಿಸ್ ಕ್ಯಾಂಪಸ್‌ನಲ್ಲಿ ಕಾರ್ಯ ನಿರ್ವಹಿಸುವಂತೆ ಒತ್ತಾಯಿಸಿ 10,000 ಪೋಸ್ಟ್ ಕಾರ್ಡ್‌ಗಳನ್ನು ಕಳುಹಿಸುವ ಅಭಿಯಾನವನ್ನು ಆರಂಭಿಸಿತು.

ಇದಕ್ಕೆ ಹುಬ್ಬಳ್ಳಿ-ಧಾರವಾಡ ಮೇಯರ್, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ), ಸಾಂಸ್ಥಿಕ ಮುಖ್ಯಸ್ಥರು ಮತ್ತು ನೂರಾರು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ವಲಯಗಳಿಂದ ಬೆಂಬಲ ಸಿಕ್ಕಿತು. ಈಗ ಆಗಸ್ಟ್ 1 ರಿಂದ ಹುಬ್ಬಳ್ಳಿಯ ಇನ್ಫೋಸಿಸ್‌ ಕ್ಯಾಂಪಸ್‌ ಕಾರ್ಯಾರಂಭ ಮಾಡುವುದು ಬಹುತೇಕ ಖಚಿತವಾಗಿದೆ.

 ಉತ್ತರ ಕರ್ನಾಟಕ ಭಾಗದ ಉದ್ಯೋಗಿಗಳಿಗೆ ಅನುಕೂಲ

ಉತ್ತರ ಕರ್ನಾಟಕ ಭಾಗದ ಉದ್ಯೋಗಿಗಳಿಗೆ ಅನುಕೂಲ

ಆಗಸ್ಟ್ 1 ರಿಂದ ಹುಬ್ಬಳ್ಳಿಯ ಇನ್ಫೋಸಿಸ್ ಕ್ಯಾಂಪಸ್ ಬಹುತೇಕ ಕಾರ್ಯಾರಂಭ ಮಾಡಲಿದೆ. ಈ ಭಾಗದ ಉದ್ಯೋಗಿಗಳು ಇನ್ನುಮುಂದಿ ಇಲ್ಲಿಯೇ ಕಾರ್ಯನಿರ್ವಹಿಸಲು ಅವಕಾಶವನ್ನು ನೀಡಲಾಗುತ್ತದೆ. ಈಗಾಗಲೇ ಇನ್ಫೋಸಿಸ್ ಸಂಸ್ಥೆಯಲ್ಲಿ ಬೇರೆ ಶಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಹುಬ್ಬಳ್ಳಿಯಲ್ಲಿ ಕೆಲಸ ಮಾಡಲು ಆಸೆ ಇದ್ದರೆ ವರ್ಗಾವಣೆ ಮಾಡಿಸಿಕೊಳ್ಳಬಹುದಾಗಿದೆ ಎಂದು ಉದ್ಯೋಗಿಗಳಿಗೆ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಹುಬ್ಬಳ್ಳಿಯಲ್ಲಿ ಕೆಲಸ ಮಾಡಲು ಇಚ್ಛೆ ಇರುವ ಉದ್ಯೋಗಿಗಳು ತಮ್ಮನ್ನು ಭೇಟಿ ಮಾಡಿ ಲಭ್ಯ ಇರುವ ಅನುಕೂಲತೆಗಳ ಆಧಾರದ ಮೇಲೆ ವರ್ಗಾವಣೆ ಮಾಡಿಸಿಕೊಳ್ಳಬಹುದು ಎಂದು ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಲಾಗಿದೆ.

English summary
The possibility of Infosys starting operations on its Hubballi campus on August 1. The people launch a 10,000 postcards campaign to urge start of the operation on hubballi infosys campus, It received support from various quarters, including Hubballi-Dharwad Mayor, Karnatak Chamber of Commerce and Industry (KCCI), institutional heads, and hundreds of students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X