ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಕ್ಲಬ್ಬಿಗೆ ಇನ್ಫಿ ಎಂಟ್ರಿ

|
Google Oneindia Kannada News

ಬೆಂಗಳೂರು, ಆಗಸ್ಟ್ 25: ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಏಳು ಕಂಪನಿಗಳು ಕಳೆದ ವಾರದಲ್ಲಿ 1,31,173.41 ಕೋಟಿ ರು ಮಾರುಕಟ್ಟೆ ಮೌಲ್ಯ ಹೆಚ್ಚಿಸಿಕೊಂಡಿವೆ. ಸತತ ಮೂರು ವಾರಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಹೆಚ್ಚು ಲಾಭ ಗಳಿಸಿದೆ. ಇನ್ಫೋಸಿಸ್ ಮೌಲ್ಯ 8,335.27 ಕೋಟಿ ರು ಏರಿಕೆ ಕಂಡು 7,34,755.12 ರು ಆಗಿದೆ.

ಇದೇ ರೀತಿ ಕಳೆದ ಮೂರು ದಿನಗಳಿಂದ ಏರುಗತಿಯಲ್ಲಿ ಸಾಗಿದ ಇನ್ಫೋಸಿಸ್ ಷೇರುಗಳು ಮಂಗಳವಾರದಂದು ಭರ್ಜರಿ ನಾಗಾಲೋಟ ಕಂಡು 100 ಬಿಲಿಯನ್ ಡಾಲರ್ ಮೌಲ್ಯಕ್ಕೇರಲು ಸಹಕಾರಿಯಾಯಿತು. ಈ ಮೂಲಕ 100 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಕ್ಲಬ್ಬಿಗೆ ಎಂಟ್ರಿ ಕೊಟ್ಟ ನಾಲ್ಕನೇ ಭಾರತೀಯ ಕಂಪನಿ ಎನಿಸಿಕೊಂಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ (ಮಾರುಕಟ್ಟೆ ಮೌಲ್ಯ 140 ಬಿಲಿಯನ್ ಡಾಲರ್), ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್( 115 ಬಿಲಿಯನ್ ಡಾಲರ್), ಎಚ್ ಡಿ ಎಫ್ ಸಿ ಬ್ಯಾಂಕ್ (100.1 ಬಿಲಿಯನ್ ಡಾಲರ್ ) ಇತರೆ ಮೂರು ಕಂಪನಿಗಳಾಗಿವೆ.

Infosys hits $100 billion m-cap, fourth Indian firm to reach milestone

ಬೆಂಗಳೂರು ಮೂಲದ ದೇಶದ ಪ್ರಮುಖ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಷೇರುಗಳು ಬಾಂಬೆ ಷೇರುಪೇಟೆಯಲ್ಲಿ ಇಂದು ಶೇ 0.85 ರಷ್ಟು ಅಥವಾ 14.70 ರು ಏರಿಕೆ ಕಂಡು 1,735.55 ರು ನಂತೆ ವಹಿವಾಟು ನಡೆಸಿದೆ. 7,39 ಟ್ರಿಲಿಯನ್ ಅಥವಾ 100 ಬಿಲಿಯನ್ ಡಾಲರ್ ದಾಟಿದೆ. ಜೂನ್ 2021ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 5,195 ಕೋಟಿ ರು ನಿವ್ವಳ ಲಾಭ ಗಳಿಸಿದ್ದು, ಶೇ 2.3ರಷ್ಟು ಪ್ರಗತಿ ಸಾಧಿಸಿದೆ.

ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್ ಲಿ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್.

ಇನ್ನೊಂದೆಡೆ, ದೇಶದ ಅತಿ ದೊಡ್ಡ ಸಂಸ್ಥೆ, ಇನ್ಫೋಸಿಸ್ ಪ್ರತಿಸ್ಪರ್ಧಿ ಟಾಟಾ ಗ್ರೂಪ್‌ ಸಮೂಹದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್( ಟಿಸಿಎಸ್) ಭಾರತದಲ್ಲಿ ನಂ.1 ಸಾಫ್ಟ್ ವೇರ್ ರಫ್ತು ಸಂಸ್ಥೆ ಅಲ್ಲದೆ ವಿಶ್ವದ ನಂ. 1 ಸಾಫ್ಟ್ ವೇರ್ ಸಂಸ್ಥೆ ಎಂಬ ಅಗ್ಗಳಿಕೆ ಪಡೆದುಕೊಂಡಿದೆ. 2019ರ ಏಪ್ರಿಲ್ ನಲ್ಲಿ ಟಿಸಿಎಸ್ ಮೊದಲ ಬಾರಿಗೆ 100 ಬಿಲಿಯನ್ ಮಾರುಕಟ್ಟೆ ಮೌಲ್ಯ ಹೊಂದಿರುವ ಐಟಿ ಸಂಸ್ಥೆಗಳ ಸಾಲಿಗೆ ಸೇರ್ಪಡೆಗೊಂಡಿತ್ತು.

ಜೂನ್ 2021ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ದಾಖಲೆಯ 20, 409 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ. ಈ ಮೂಲಕ ಒಟ್ಟಾರೆ, ಉದ್ಯೋಗಿಗಳ ಸಂಖ್ಯೆ 5,00,000ಕ್ಕೇರಿದೆ. ಜೂನ್ ಅಂತ್ಯಕ್ಕೆ 509,058 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

English summary
The shares of Information Technology major Infosys hit a record high during intra day trading on Tuesday, which helped the company cross $100 billion in market capitalisation. Infosys is the fourth Indian company to achieve this milestone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X