• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇನ್ಫೋಸಿಸ್ 'ಆರೋಹಣ' ಇನ್ನೋವೇಷನ್ ಪ್ರಶಸ್ತಿಗೆ ಅರ್ಜಿ ಆಹ್ವಾನ

|

ಬೆಂಗಳೂರು, ಜುಲೈ 15: ಇನ್ಫೋಸಿಸ್ ಸಂಸ್ಥೆಯ ಸಮಾಜಸೇವೆ ಮತ್ತು ಸಿಎಸ್‍ಆರ್ ಅಂಗವಾದ ಇನ್ಫೋಸಿಸ್ ಪ್ರತಿಷ್ಠಾನವು, ಆರೋಹಣ ಸೋಷಿಯಲ್ ಇನ್ನೋವೇಶನ್ ಪ್ರಶಸ್ತಿಯ ಎರಡನೇ ಆವೃತ್ತಿಯ ಕುರಿತು ಇಂದು ಘೋಷಿಸಿದೆ.

2018ರ ಪ್ರಶಸ್ತಿಗಳಿಗೆ ಸಿಕ್ಕಿದ ಯಶಸ್ವಿ ಸ್ಪಂದನೆಯಿಂದಾಗಿ, ಇನ್ಫೋಸಿಸ್ ಪ್ರತಿಷ್ಠಾನವು ಸಾಮಾಜಿಕ ಕ್ಷೇತ್ರದಲ್ಲಿ ನಾವೀನ್ಯತೆಯ ವೇಗವೃದ್ಧಿಸುವಲ್ಲಿ ತನ್ನ ಬದ್ಧತೆಯನ್ನು ನವೀಕರಿಸಿದೆ. ಭಾರತದಲ್ಲಿ ತುಳಿತಕ್ಕೊಳಗಾದವರ ಮೇಲೆ ದೊಡ್ಡ ಮಟ್ಟದಲ್ಲಿ ಸಕಾರಾತ್ಮಕ ಪರಿಣಾಮ ಬೀರುವಂಥ ಸಾಧ್ಯತೆಯಿರುವ ವಿಶಿಷ್ಟ ಪರಿಹಾರಗಳನ್ನು ಕಂಡುಕೊಳ್ಳುವ ಅಥವಾ ಅಭಿವೃದ್ಧಿಪಡಿಸಿರುವ ವ್ಯಕ್ತಿಗಳು, ತಂಡಗಳು ಅಥವಾ ಎನ್‍ಜಿಒಗಳನ್ನು ಗುರುತಿಸುವ ಮತ್ತು ಅವರಿಗೆ ಪ್ರತಿಫಲವನ್ನು ಒದಗಿಸುವ ಕೆಲಸವನ್ನು ಆರೋಹಣ ಸೋಷಿಯಲ್ ಇನ್ನೋವೇಶನ್ ಅವಾರ್ಡ್ಸ್ 2019 ಮಾಡುತ್ತದೆ.

ದಾವಣಗೆರೆಯ ಕರಿಬಸಪ್ಪಗೆ ಇನ್ಫೋಸಿಸ್ ಇನ್ನೋವೇಷನ್ ಪ್ರಶಸ್ತಿ

ಪ್ರಶಸ್ತಿಯ ಎರಡನೇ ಆವೃತ್ತಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ, "ಆರೋಹಣ ಸೋಷಿಯಲ್ ಇನ್ನೋವೇಷನ್ ಅವಾರ್ಡ್ಸ್ 2018 ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿದೆ. ದೇಶಾದ್ಯಂತದ ಸಾಮಾಜಿಕ ಆವಿಷ್ಕಾರಗಳಿಂದ ಇನ್ಫೋಸಿಸ್ ಪ್ರತಿಷ್ಠಾನಕ್ಕೆ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಅದೇ ರೀತಿ ಮುಂಚೂಣಿಯಲ್ಲಿರುವ 12 ಆವಿಷ್ಕಾರಗಳನ್ನು ಗುರುತಿಸಿ, ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈಗ ಈ ಪ್ರಶಸ್ತಿಗಳ ಎರಡನೇ ಆವೃತ್ತಿಯ ಮೂಲಕ, ನಾವು ದೇಶದಾದ್ಯಂತ ಅಡಗಿರುವಂಥ ಇಂತಹ ಸಾಮಾಜಿಕ ಆವಿಷ್ಕಾರಗಳನ್ನು ತಮ್ಮ ಸಾಮಾಜಿಕ ಇನ್ನೋವೇಷನ್‍ನ ಶಕ್ತಿಯನ್ನು ಎತ್ತರಕ್ಕೇರಿಸಲು ಸಹಾಯ ಮಾಡುತ್ತೇವೆ ಎಂಬ ನಂಬಿಕೆ ನಮ್ಮದು'' ಎಂದಿದ್ದಾರೆ.

ಈ ಪ್ರಶಸ್ತಿಗೆ ಆರು ವಿಭಾಗಗಳಿಂದ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ:

1. ಆರೋಗ್ಯಸೇವೆ

2. ಗ್ರಾಮೀಣಾಭಿವೃದ್ಧಿ

3. ನಿರ್ಗತಿಕರ ಸೇವೆ

4. ಮಹಿಳಾ ಸುರಕ್ಷತೆ ಮತ್ತು ಸಬಲೀಕರಣ

5. ಶಿಕ್ಷಣ ಮತ್ತು ಕ್ರೀಡೆ

6. ಸುಸ್ಥಿರತೆ

ಇನ್ಫೋಸಿಸ್ ಗೆ ಒಲಿದ ಐಟಿ ರಿಟನ್ಸ್ ಸರಳಗೊಳಿಸುವ ಗುತ್ತಿಗೆ

ಪ್ರಮುಖ ಅಂಶಗಳು:

* ಈ ಪ್ರಶಸ್ತಿಗಳ ಎರಡನೇ ಆವೃತ್ತಿಯ ಅರ್ಜಿ ಸಲ್ಲಿಸುವಿಕೆ ಪ್ರಕ್ರಿಯೆಯು ಜುಲೈ 15,2019 ರಿಂದ ಆರಂಭವಾಗಲಿದ್ದು, 2019ರ ಸೆಪ್ಟೆಂಬರ್ 30 ರವರೆಗೂ ಮುಂದುವರಿಯಲಿದೆ.

* ಭಾರತದಲ್ಲಿ ವಾಸಿಸುವ ಎಲ್ಲ ವಯಸ್ಕ(18 ವರ್ಷ ದಾಟಿದ)ರಿಗೂ ಅರ್ಜಿ ಸಲ್ಲಿಸಲು ಮುಕ್ತ ಅವಕಾಶವಿದೆ.

* ಪಾಲ್ಗೊಳ್ಳಲು ಇಚ್ಛಿಸುವವರು ತಮ್ಮ ಕೆಲಸ ಕಾರ್ಯಗಳ ಮಾಹಿತಿಯನ್ನು ವಿಡಿಯೋಗಳ ರೂಪದಲ್ಲಿ ಸಲ್ಲಿಸಬಹುದು. ಅವುಗನ್ನು ಆರೋಹಣ್ ಸೋಷಿಯಲ್ ಇನ್ನೋವೇಷನ್ ಅವಾರ್ಡ್ಸ್ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಲಾಗುತ್ತದೆ.

* ಯೋಜನೆಯು ಕೇವಲ ಒಂದು ಪರಿಕಲ್ಪನೆ, ಚಿಂತನೆ ಅಥವಾ ಅಣಕು ಆಗಿರಬಾರದು. ಅದು ಸಂಪೂರ್ಣವಾಗಿ ಕಾರ್ಯತತ್ಪರವಾದ ಮೂಲಮಾದರಿಯಾಗಿರಬೇಕು; ಅಲ್ಲದೇ, ಯೋಜನೆಯು ಅಸ್ತಿತ್ವದಲ್ಲಿರುವ ವಾಣಿಜ್ಯ ಕಾರ್ಯವೂ ಆಗಿರಬಾರದು

ಆರೋಹಣ್ ಸೋಷಿಯಲ್ ಇನ್ನೋವೇಷನ್ ಅವಾರ್ಡ್ಸ್, ಪ್ರಶಸ್ತಿ ವಿಜೇತರಿಗೆ ಐಐಟಿ ಹೈದರಾಬಾದ್‍ನ ಕ್ಯಾಂಪಸ್‍ನಲ್ಲಿ 12 ವಾರಗಳ ಕಾಲ ರೆಸಿಡೆನ್ಶಿಯಲ್ ಟೆಕ್ನಿಕಲ್ ಮೆಂಟರ್ ಶಿಪ್ ಒದಗಿಸುತ್ತದೆ. ಕ್ಯಾಂಪಸ್‍ನಲ್ಲಿದ್ದುಕೊಂಡೇ ತಮ್ಮ ಸೊಲ್ಯೂಷನ್‍ಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಮತ್ತು ಇನ್ನಷ್ಟು ಎತ್ತರಕ್ಕೇರಿಸಲು ಇದು ನೆರವಾಗಲಿದೆ.

ಪರಿಣತ ತೀರ್ಪುಗಾರರ ಸಮಿತಿಯು ಅರ್ಜಿಗಳನ್ನು ಐದು ವಿಸ್ತೃತ ಮಾನದಂಡಗಳ ಮೂಲಕ, ಅಂದರೆ- ಸಾಮಾಜಿಕ ಸಮಸ್ಯೆ ಅಥವಾ ಅಗತ್ಯತೆ, ತಂತ್ರಜ್ಞಾನದ ನಾವೀನ್ಯ ಬಳಕೆ, ಆಲೋಚನೆಗಳ ಅಸಲಿತನ, ಬಳಕೆಯ ಸರಳತೆ ಹಾಗೂ ಪ್ರಸ್ತುತಪಡಿಸುವ ಗುಣಮಟ್ಟದ ಆಧಾರದಲ್ಲಿ ಅರ್ಜಿಗಳನ್ನು ಪರಿಶೀಲಿಸಲಾಗುತ್ತದೆ. ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ, ಖ್ಯಾತ ಲೇಖಕಿ ಸುಧಾ ಮೂರ್ತಿ ತೀರ್ಪುಗಾರರ ಸಮಿತಿಯಲ್ಲಿ ಇರಲಿದ್ದಾರೆ.

ಆರೋಹಣ ಸೋಷಿಯಲ್ ಇನ್ನೋವೇಷನ್ ಅವಾರ್ಡ್ಸ್ ಬಗ್ಗೆ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹಾಗೂ ತೀರ್ಪು ನೀಡುವ ಮಾನದಂಡ ಕುರಿತ ಹೆಚ್ಚಿನ ಮಾಹಿತಿಯನ್ನು ಇನ್ಫೋಸಿಸ್ ವೆಬ್ ತಾಣದಲ್ಲಿ ಪಡೆಯಬಹುದು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Infosys Foundation, the philanthropic and CSR arm of Infosys, today invited entries for Aarohan Social Innovation Awards, to catalyze social innovation in India. The objective of these awards is to accelerate innovation in the social sector, and provide a platform to help these solutions scale.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more