ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಷೇರು ಮರುಖರೀದಿಗೆ ನವೆಂಬರ್ 1ಕ್ಕೆ ದಿನ ನಿಗದಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 10: ಸಾಫ್ಟ್ ವೇರ್ ಸೇವೆಗಳನ್ನು ನೀಡುವ ದೇಶದ ಎರಡನೇ ಅತಿದೊಡ್ಡ ಕಂಪನಿ ಇನ್ಫೋಸಿಸ್ ಮಂಗಳವಾರ ಷೇರು ಮರು ಖರೀದಿಗೆ ನವೆಂಬರ್ 1, 2017ಕ್ಕೆ ದಿನಾಂಕ ನಿಗದಿ ಪಡಿಸಿದೆ. 13 ಸಾವಿರ ಕೋಟಿ ರುಪಾಯಿಯಷ್ಟು ಕಂಪನಿ ಷೇರುಗಳನ್ನು ಮರು ಖರೀದಿ ಮಾಡಲಾಗುತ್ತದೆ.

ಇನ್ಫೋಸಿಸ್ ಷೇರು ಈಗ ಖರೀದಿಸಬಹುದೇ: ಮಾರುಕಟ್ಟೆ ತಜ್ಞರು ಏನಂತಾರೆ?ಇನ್ಫೋಸಿಸ್ ಷೇರು ಈಗ ಖರೀದಿಸಬಹುದೇ: ಮಾರುಕಟ್ಟೆ ತಜ್ಞರು ಏನಂತಾರೆ?

ಯಾವ ಷೇರುದಾರರಿಂದ ಮರು ಖರೀದಿ ಮಾಡಬೇಕು, ಎಷ್ಟು ಪ್ರಮಾಣದ ಷೇರು, ಯಾರಿಗೆ ಪ್ರಸ್ತಾವ ಕಳುಹಿಸಬೇಕು ಇತ್ಯಾದಿ ವಿಚಾರಗಳನ್ನು ನಿರ್ಧರಿಸುವುದಕ್ಕೆ ನವೆಂಬರ್ 1, 2017 ಎಂದು ದಿನಾಂಕ ನಿರ್ಧರಿಸಲಾಗಿದೆ. ಯಾರ ಡಿಮ್ಯಾಟ್ ಖಾತೆಯಲ್ಲಿ ಇನ್ಫೋಸಿಸ್ ಷೇರುಗಳು ಆ ದಿನಂದು(ನವೆಂಬರ್ 1) ಇರುತ್ತವೋ ಅಂಥವರಿಗೆ ಷೇರು ಮರು ಖರೀದಿಯ ಪ್ರಸ್ತಾವ ಮಾಡಲಾಗುತ್ತದೆ.

Infosys fixes November 1 as record date for share buyback

ಕಂಪನಿ ಷೇರುಗಳ ಖರೀದಿಗೆ ಬೋರ್ಡ್ ನಿಂದ ಆಗಸ್ಟ್ 19ಕ್ಕೆ ಒಪ್ಪಿಗೆ ಸಿಕ್ಕಿತ್ತು. ಷೇರುದಾರರಿಂದ ಸೋಮವಾರದಂದು ಒಪ್ಪಿಗೆ ಸಿಕ್ಕಾಗಿದೆ. ಇನ್ಫೋಸಿಸ್ ನ ಮೂವತ್ತಾರು ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 11.30 ಕೋಟಿ ಷೇರುಗಳನ್ನು ತಲಾ ರು. 1150ಕ್ಕೆ ಮರು ಖರೀದಿ ಮಾಡುತ್ತಿದೆ.

ಇನ್ಫಿ ಷೇರು ಹಿಂತೆಗೆತ, ಪ್ರತಿ ಷೇರಿಗೆ 1,150 ರುಪಾಯಿ ನಿಗದಿಇನ್ಫಿ ಷೇರು ಹಿಂತೆಗೆತ, ಪ್ರತಿ ಷೇರಿಗೆ 1,150 ರುಪಾಯಿ ನಿಗದಿ

ಕಂಪನಿಯ ಕೆಲವು ಸ್ಥಾಪಕರು ಹಾಗೂ ಮಾಜಿ ಅಧಿಕಾರಿಗಳು ಷೇರು ಮರು ಖರೀದಿಗೆ ಬೇಡಿಕೆ ಇಟ್ಟಿದ್ದರು. ಹೆಚ್ಚುವರಿ ಬಂಡವಾಳವನ್ನು ಷೇರುದಾರರಿಗೆ ಹಿಂತಿರುಗಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿತ್ತು. ಈ ರೀತಿ ಷೇರು ಮರು ಖರೀದಿ ಮಾಡಿದರೆ ಇಪಿಎಸ್(ಅರ್ನಿಂಗ್ ಪರ್ ಷೇರ್) ಹೆಚ್ಚಾಗುತ್ತದೆ.

ಷೇರು ಮಾರುಕಟ್ಟೆಯಲ್ಲಿ ಹಿನ್ನಡೆ ಅನುಭವಿಸುತ್ತಿರುವ ಇನ್ಫೋಸಿಸ್ ಷೇರುಗಳಿಗೆ ಬಲ ತುಂಬಿದಂತೆಯೂ ಆಗುತ್ತದೆ. ಇದೇ ವೇಳೆ ಮಧ್ಯಂತರ ಲಾಭಾಂಶ ಪಾವತಿಗೂ ನವೆಂಬರ್ ಒಂದನೇ ತಾರೀಖು ನಿಗದಿ ಮಾಡಲಾಗಿದೆ. ಅಕ್ಟೋಬರ್ ಇಪ್ಪತ್ನಾಲ್ಕರಂದು ಜುಲೈ-ಸೆಪ್ಟೆಂಬರ್ ತ್ರೈ ಮಾಸಿಕದ ಕಂಪನಿ ಫಲಿತಾಂಶವನ್ನು ಘೋಷಣೆ ಮಾಡಲಿದೆ.

English summary
Software services firm Infosys Tuesday said, it has fixed November 1, 2017 as the record date for its up to Rs 13,000 crore share buyback programme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X