ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಸಿಬ್ಬಂದಿಗೆ ಸಿಹಿ ಸುದ್ದಿ; ವೇತನವಷ್ಟೇ ಅಲ್ಲ, ಷೇರು ಸಹ ಸಿಗಲಿದೆ

|
Google Oneindia Kannada News

ಬೆಂಗಳೂರು, ಮೇ 16: ಡಿಜಿಟಲ್ ತಂತ್ರಜ್ಞಾನ ಹಾಗೂ ಕನ್ಸಲ್ಟಿಂಗ್ ನ ಪ್ರಮುಖ ಕಂಪೆನಿ, ಬೆಂಗಳೂರು ಮೂಲದ ಇನ್ಫೋಸಿಸ್ ಬುಧವಾರ ಸ್ಟಾಕ್ ಓನರ್ ಶಿಪ್ ಪ್ರೋಗ್ರಾಮ್ ತರಲು ನಿರ್ಧರಿಸಿದೆ. ಪ್ರತಿಭೆಗಳನ್ನು ಆಕರ್ಷಿಸುವ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ. ಇನ್ಫೋಸಿಸ್ ನ ಆಡಳಿತ ಮಂಡಳಿ ನಿರ್ದೇಶಕರು ಇನ್ಪೋಸಿಸ್ ಎಕ್ಸ್ ಪ್ಯಾಂಡೆಡ್ ಸ್ಟಾಕ್ ಓನರ್ ಷಿಪ್ ಪ್ರೋಗ್ರಾಮ್ 2019ಕ್ಕೆ ಒಪ್ಪಿಗೆ ಸೂಚಿಸಿದೆ.

ಕಂಪೆನಿಯಲ್ಲಿ ಉದ್ಯೋಗಿಗಳ ಮಾಲೀಕತ್ವ ಹೆಚ್ಚಾಗಬೇಕು ಹಾಗೂ ಷೇರುದಾರರ ಮೌಲ್ಯ ಸೃಷ್ಟಿ ಆಗಬೇಕು ಎಂಬ ಕಾರಣಕ್ಕೆ ಈ ತೀರ್ಮಾನಕ್ಕೆ ಬರಲಾಗಿದೆ. ಇದೀಗ ಐದು ಕೋಟಿ ಈಕ್ವಿಟಿ ಷೇರುಗಳನ್ನು ಆಯಾ ಸಿಬ್ಬಂದಿಯ ಕ್ಷಮತೆಯ ಆಧಾರದಲ್ಲಿ ಹಂಚಲು ಉದ್ದೇಶಿಸಲಾಗಿದೆ.

ಟಾಪ್ 10 ಮಾರುಕಟ್ಟೆ ಮೌಲ್ಯ: ಇನ್ಫೋಸಿಸ್, ಐಟಿಸಿ ಮೌಲ್ಯ ಜಿಗಿತಟಾಪ್ 10 ಮಾರುಕಟ್ಟೆ ಮೌಲ್ಯ: ಇನ್ಫೋಸಿಸ್, ಐಟಿಸಿ ಮೌಲ್ಯ ಜಿಗಿತ

ಈ ಬಗ್ಗೆ ಮಾತನಾಡಿರುವ ಇನ್ಫೋಸಿಸ್ ಎಂ.ಡಿ. ಹಾಗೂ ಸಿಇಒ ಸಲೀಲ್ ಪಾರೇಖ್, ಇನ್ಫೋಸಿಸ್ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿದ ಮೊದಲಿಗ ಕಂಪೆನಿ. ಇದೀಗ ಮತ್ತೊಂದು ಮೈಲುಗಲ್ಲು ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ.

Salil Parekh

ನಮ್ಮ ಸಿಬ್ಬಂದಿಯೇ ನಮ್ಮ ಪಾಲಿಗೆ ಅತಿ ದೊಡ್ಡ ಆಸ್ತಿ. ತಮ್ಮ ನಿರಂತರ ಹಾಗೂ ಸ್ಥಿರವಾದ ಶ್ರಮದ ಮೂಲಕ ಕಂಪೆನಿಗೆ ಸಂಬಂಧಿಸಿದ ಎಲ್ಲರ ಏಳ್ಗೆಗೆ ಶ್ರಮಿಸುತ್ತಿರುವವರನ್ನು ಗುರುತಿಸಿ, ಗೌರವಿಸುವುದು ನಮ್ಮ ಗುರಿ. ಸಿಬ್ಬಂದಿಯನ್ನೇ ಮಾಲೀಕರನ್ನಾಗಿ ಮಾಡುವುದರಿಂದ ಕಂಪೆನಿಯ ದೀರ್ಘಾವಧಿ ಯಶಸ್ಸಿಗೆ ಅನುಕೂಲ ಆಗುತ್ತದೆ. ತಮ್ಮ ಶ್ರಮ, ಬದ್ಧತೆ ಹಾಗೂ ಕೆಲಸದ ಫಲಿತಾಂಶ ಏನು ಎಂಬುದು ಅವರಿಗೂ ಅರ್ಥ ಆಗುತ್ತದೆ ಎಂದಿದ್ದಾರೆ.

ಅಂದಹಾಗೆ, ಆಡಳಿತ ಮಂಡಳಿಯ ನಿರ್ದೇಶಕರ ಪ್ರಸ್ತಾವಕ್ಕೆ ಕಂಪೆನಿಯ ಷೇರುದಾರರೂ ಒಪ್ಪಿಗೆ ನೀಡುವುದು ಅಗತ್ಯ.

English summary
Bengaluru based digital technology and consulting major Infosys on Wednesday introduced an expanded stock ownership programme, aimed at retaining and attracting top talent. Board of directors approved to offer 5 crore equity shares to employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X