ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುನಃ $1.6 ಬಿಲಿಯನ್ ಷೇರು ಮರುಖರೀದಿಗೆ ಮುಂದಾದ ಇನ್ಫೋಸಿಸ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 24: ಹೂಡಿಕೆದಾರರ ಭಾವನೆಗಳನ್ನು ವೃದ್ಧಿಸುವ ಸಲುವಾಗಿ ಮತ್ತೆ 1.6 ಬಿಲಿಯನ್ ಡಾಲರ್ ಷೇರುಗಳನ್ನು ಮತ್ತೆ ಖರೀದಿ ಮಾಡಲು ದೇಶದ ಎರಡನೆಯ ಅತಿ ದೊಡ್ಡ ಸಾಫ್ಟ್‌ವೇರ್ ರಫ್ತು ಸೇವಾ ಸಂಸ್ಥೆ ಇನ್ಫೋಸಿಸ್ ಚಿಂತನೆ ನಡೆಸಿದೆ.

ಇದರ ಮುನ್ನುಡಿಯಾಗಿ ಇನ್ಫೋಸಿಸ್‌ ಕುಟುಂಬದ ಕೆಲವು ಸದಸ್ಯರು ತಮ್ಮ ಷೇರುಗಳನ್ನು ಟೆಂಡರ್ ಮಾಡುವ ನಿರೀಕ್ಷೆಯಿದೆ. ಡಿಸೆಂಬರ್‌ನಲ್ಲಿ ಇನ್ಫೋಸಿಸ್‌ನ ಹಿಂದಿನ ಷೇರು ಖರೀದಿ ಮುಕ್ತಾಯವಾಗಲಿದೆ.

ತ್ರೈಮಾಸಿಕ ಆರ್ಥಿಕ ಫಲಿತಾಂಶಗಳನ್ನು ಲೆಕ್ಕಾಚಾರ ಮಾಡುವ ಸಲುವಾಗಿ ಜನವರಿ 11ರಂದು ನಡೆಯುವ ಮಂಡಳಿ ಸಭೆಯಲ್ಲಿ ಷೇರುಗಳ ಮರುಖರೀದಿ ನಿರ್ಣಯವು ಅಧಿಕೃತವಾಗಿ ಪ್ರಕಟವಾಗುವ ಸಾಧ್ಯತೆ ಇದೆ.

ಎಚ್ ಸಿಎಲ್ ಪಾಲಾದ ಐಬಿಎಂನ ಸಾಫ್ಟ್ ವೇರ್ ಪ್ಯಾಕೇಜ್ ಎಚ್ ಸಿಎಲ್ ಪಾಲಾದ ಐಬಿಎಂನ ಸಾಫ್ಟ್ ವೇರ್ ಪ್ಯಾಕೇಜ್

ಚಾಲ್ತಿಯಲ್ಲಿರುವ ಮಾರುಕಟ್ಟೆ ಮೌಲ್ಯದ ಶೇ 20-25ರ ಸುತ್ತಮುತ್ತ ಷೇರು ಮರು ಖರೀದಿಯು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಷೇರು ಮರುಖರೀದಿ, ಅಧಿಕ ಡಿವಿಡೆಂಟ್್ಗಳು ಸಾಮಾನ್ಯವಾಗಿ ಕಂಪೆನಿ ಹಿನ್ನಡೆ ಅನುಭವಿಸಿದೆ ಎಂದು ಆಡಳಿತ ಮಂಡಳಿ ಭಾವಿಸುವುದನ್ನು ಸೂಚಿಸುತ್ತದೆ.

ಅಮೆರಿಕನ್ ಠೇವಣಿ ಪಟ್ಟಿಯಿಂದ ಹೊರಕ್ಕೆ

ಅಮೆರಿಕನ್ ಠೇವಣಿ ಪಟ್ಟಿಯಿಂದ ಹೊರಕ್ಕೆ

ಸತತವಾಗಿ ಎರಡನೆಯ ಬಾರಿಗೆ ಷೇರು ಮರುಖರೀದಿ ಮಾಡುವ ಇನ್ಫೋಸಿಸ್‌ನ ಉದ್ದೇಶವು ಷೇರುದಾರರ ಅನುಮೋದನೆಯನ್ನು ಅವಲಂಬಿಸಿದೆ. ಮಾರ್ಚ್‌ನಲ್ಲಿ ಯುರೋನೆಕ್ಸ್ಟ್ ಪ್ಯಾರಿಸ್ ಮತ್ತು ಯುರೋನೆಕ್ಸ್ಟ್ ಲಂಡನ್ ವಿನಿಮಯ ಕೇಂದ್ರಗಳಿಂದ ತನ್ನ ಅಮೆರಿಕನ್ ಠೇವಣಿಯ ಪಟ್ಟಿಯಿಂದ ಸ್ವಯಂಪ್ರೇರಣೆಯಿಂದ ಹೊರಬಂದಿರುವುದರಿಂದ ಷೇರು ಮರುಖರೀದಿ ಪ್ರಕ್ರಿಯೆಯು ತ್ವರಿತವಾಗಿ ನಡೆಯುವ ನಿರೀಕ್ಷೆ ಮೂಡಿಸಿದೆ.

ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಭಾರತದ್ದು: ಐಎಂಎಫ್ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಭಾರತದ್ದು: ಐಎಂಎಫ್

2,600 ಕೋಟಿ ರೂ. ವಿಶೇಷ ಡಿವಿಡೆಂಟ್

2,600 ಕೋಟಿ ರೂ. ವಿಶೇಷ ಡಿವಿಡೆಂಟ್

ಪ್ರತಿ ಷೇರಿಗೆ 10ನಂತೆ ವಿಶೇಷ ಡಿವಿಡೆಂಟ್ ಮೂಲಕ ಸರಿಸುಮಾರು 2,600 ಕೋಟಿ ರೂ ($400 ಮಿಲಿಯನ್) ಮೊತ್ತವನ್ನು ಹಿಂದಿರುಗಿಸಲಾಗುತ್ತದೆ ಎಂದು ಇನ್ಫೋಸಿಸ್ ಮಂಡಳಿ ತಿಳಿಸಿದೆ. 2019ರ ಹಣಕಾಸು ವರ್ಷದಲ್ಲಿ ಮಂಡಳಿಯು ನಿರ್ಧರಿಸಿದಂತೆ ಅನ್ವಯಿಸುವ ಕಾನೂನುಗಳು ಹಾಗೂ ಅಗತ್ಯ ಅನುಮೋದನೆಗಳನ್ನು ಪಡೆದುಕೊಂಡು ಷೇರುದಾರಿಗೆ 10,400 ಕೋಟಿ ರೂ. ($1.6 ಬಿಲಿಯನ್) ಪಾವತಿಸಲು ಪರಿಗಣಿಸಿದೆ.

1 ರುಪಾಯಿಗೂ ಚಿನ್ನ ಖರೀದಿಸಬಹುದು, ಹೇಗೆಂದು ಇಲ್ಲಿದೆ ಮಾಹಿತಿ1 ರುಪಾಯಿಗೂ ಚಿನ್ನ ಖರೀದಿಸಬಹುದು, ಹೇಗೆಂದು ಇಲ್ಲಿದೆ ಮಾಹಿತಿ

13,000 ಕೋಟಿ ರೂ. ವಾಪಸ್

13,000 ಕೋಟಿ ರೂ. ವಾಪಸ್

ಕಳೆದ ಆರ್ಥಿಕ ವರ್ಷದಲ್ಲಿ ಇನ್ಫೋಸಿಸ್ ಮೂರನೇ ಒಂದರಷ್ಟು ನಗದನ್ನು ಅಂದರೆ, 13,000 ಕೋಟಿ ರೂ. ($2 ಬಿಲಿಯನ್) ಮೊತ್ತವನ್ನು ಷೇರುದಾರರಿಗೆ 1,150 ರೂ.ನಂತೆ ಮರಳಿಸಿತ್ತು.

ವಾರ್ಷಿಕ ಆದಾಯದಲ್ಲಿ ಕುಸಿತ

ವಾರ್ಷಿಕ ಆದಾಯದಲ್ಲಿ ಕುಸಿತ

ಮೊದಲ ಮರುಖರೀದಿಯು ಕಂಪೆನಿಯ ವಾರ್ಷಿಕ ಆದಾಯ $160 ಮಿಲಿಯನ್‌ಗೆ ಕುಸಿಯಲು ಕಾರಣವಾಗಿತ್ತು. ಕಳೆದ ಬಾರಿ 19 ಪ್ರವರ್ತಕರ ಸಮೂಹದಲ್ಲಿ ಕೇವಲ 16 ಷೇರುಗಳನ್ನು ಖರೀದಿಸಿದ್ದರು. ಮೂವರು ಸಹ ಸಂಸ್ಥಾಪಕರಾದ ಎಸ್‌ ಡಿ ಶಿಬುಲಾಲ್, ಅವರ ಮಗಳು ಶ್ರುತಿ ಹಾಗೂ ಮತ್ತೊಬ್ಬ ಸಹ ಸಂಸ್ಥಾಪಕ ಕ್ರಿಶ್ ಗೋಪಾಲಕೃಷ್ಣನ್ ಅವರ ಮಗಳು ಮೇಘನಾ ಮರುಖರೀದಿ ಯೋಜನೆಯಲ್ಲಿ ಪಾಲ್ಗೊಂಡಿರಲಿಲ್ಲ.

English summary
IT firm Infosys likely to buyback shares again for $1.6 billion to boost investor sentiment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X