ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಬೆಂಗಳೂರು ಕೇಂದ್ರದಲ್ಲಿ ರಾಜ್ಯೋತ್ಸವ ಸಂಭ್ರಮ

|
Google Oneindia Kannada News

ಬೆಂಗಳೂರು, ನವೆಂಬರ್ 18: ಇನ್ಫೋಸಿಸ್ ಬೆಂಗಳೂರು ಅಭಿವೃದ್ಧಿ ಕೇಂದ್ರ (ಡಿಸಿ) ಇತ್ತೀಚೆಗೆ 12ನೇ ಆವೃತ್ತಿಯ ರಾಜ್ಯೋತ್ಸವ ಸಂಭ್ರಮವನ್ನು ಆಯೋಜಿಸಿತ್ತು. ಶ್ರೀಗಂಧ ಸಾಂಸ್ಕೃತಿಕ ಕ್ಲಬ್ ಮತ್ತು ಅದರ ಸ್ವಯಂ ಸೇವಕರು ವಾರಪೂರ್ತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.

ದುಬೈನಲ್ಲಿ ಅದ್ಧೂರಿಯಾಗಿ 65 ನೇ ಕನ್ನಡ ರಾಜ್ಯೋತ್ಸವ ಆಚರಣೆದುಬೈನಲ್ಲಿ ಅದ್ಧೂರಿಯಾಗಿ 65 ನೇ ಕನ್ನಡ ರಾಜ್ಯೋತ್ಸವ ಆಚರಣೆ

ಈ ಸಂಭ್ರಮದಲ್ಲಿ ಹಲವು ತಂಡ ಕಟ್ಟುವ ಚಟುವಟಿಕೆಗಳು ಮತ್ತು ಕರ್ನಾಟಕ ರಸಪ್ರಶ್ನೆ, ಅಂತ್ಯಾಕ್ಷರಿ, ಕರ್ನಾಟಕ ಪರಿಚಯ ವಸ್ತುಪ್ರದರ್ಶನ, ಕ್ಲಿಕ್ ಕರ್ನಾಟಕ ಛಾಯಾಗ್ರಹಣ ಸ್ಪರ್ಧೆ, ರಾಜ್ಯೋತ್ಸವ ಓಟ ಮತ್ತು ಕರ್ನಾಟಕ ಆಹಾರ ಉತ್ಸವ ಮತ್ತಿತರರ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಗಂಧ ಕ್ಲಬ್ ನ ಸ್ವಯಂ ಸೇವಕರು ತ್ಯಾಜ್ಯ ವಸ್ತುಗಳಿಂದ ನಿರ್ಮಿಸಿದ ಹಂಪಿಯ ಐತಿಹಾಸಿಕ ಉಗ್ರನರಸಿಂಹನ 13 ಎತ್ತರದ ಮೂರ್ತಿ ಕಾರ್ಯಕ್ರಮದ ಪ್ರಮುಖ ಅಂಶವಾಗಿತ್ತು.

Infosys Bengaluru celebrates Kannada Rajyotsava

ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಾಡಗೀತೆ, ಶ್ರೀಗಂಧ ಕ್ಲಬ್ ಗೀತೆ, ಡಾ. ವಿಷ್ಣುವರ್ಧನ್ ಅವರ ಪ್ರಸಿದ್ಧ ಗೀತೆಗಳ ಮಿಶ್ರಣದ ಗೀತೆ, ಸಿಡೀವಿಂಗ್ ತಂಡದಿಂದ ನಾಟಕ, ಕರ್ನಾಟಕ ರಾಜ್ಯೋತ್ಸವ 2019 ಪ್ರಶಸ್ತಿ ವಿಜೇತೆ ಕುಮಾರಿ ಖುಷಿಯಿಂದ ನೃತ್ಯ ಪ್ರದರ್ಶನ, ಪ್ರಖ್ಯಾತ ಗಾಯಕ ವಿನಯ್ ನಾಡಿಗ್ ಮತ್ತು ಅವರ ತಂಡದಿಂದ ಪ್ರದರ್ಶನ, ಗಂಗಾವತಿ ಬೀಚಿ ಎಂದೇ ಖ್ಯಾತಿ ಪಡೆದಿರುವ ಹಾಸ್ಯಗಾರ ಗಂಗಾವತಿ ಪ್ರಾಣೇಶ್ ಅವರ ಹಾಸ್ಯ ರಸಮಂಜರಿಯನ್ನು ಒಳಗೊಂಡಿದ್ದವು.

Infosys Bengaluru celebrates Kannada Rajyotsava

ಸಾಂಸ್ಕೃತಿಕ ಕಾರ್ಯಕ್ರಮಗಳ ಹೊರತಾಗಿ, ಉತ್ತಮ ಸಮಾಜ ಕಟ್ಟಲು ಕೊಡುಗೆ ನೀಡಿದ ಸ್ವಾಮಿ ಜಪಾನಂದಜೀ ಅವರಿಗೆ ಶ್ರೀಗಂಧ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು.

English summary
Infosys Bengaluru DC celebrated Kannada Rajyotsava at its premises Electronics city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X