ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಕ್ಕಾ ಬಂದ್ಮೇಲೆ ಇನ್ಫಿಗೆ ಶುಕ್ರದೆಸೆ, ಮತ್ತೆ ನಿರೀಕ್ಷೆ ಮೀರಿದ ಲಾಭ!

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 15: ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಸತತ ನಾಲ್ಕನೇ ಬಾರಿಗೆ ವಿಶ್ಲೇಷಕರ ನಿರೀಕ್ಷೆಗೂ ಮೀರಿದ ಲಾಭ ಗಳಿಸುವ ಮೂಲಕ ಭರ್ಜರಿ ಫಲಿತಾಂಶ ಹೊರ ಹಾಕಿದೆ. ಇನ್ಫೋಸಿಸ್ ಶುಕ್ರವಾರ ತನ್ನ ನಾಲ್ಕನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ.

ಮತ್ತೊಮ್ಮೆ ಮಾರುಕಟ್ಟೆ ನಿರೀಕ್ಷೆಗೂ ಮೀರಿದ ಲಾಭ ಪಡೆದುಕೊಂಡಿದ್ದು, ಶೇ 16.2 ರಷ್ಟು ನಿವ್ವಳ ಲಾಭ ಹೆಚ್ಚಳ ಕಂಡು 3,597 ಕೋಟಿ ರು ಗಳಿಸಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಆದಾಯ ಶೇ 3.8ರಷ್ಟು ಏರಿಕೆಯಾಗಿದೆ.[Q3: ಇನ್ಫೋಸಿಸ್ ಗೆ ನಿರೀಕ್ಷೆಗೂ ಮೀರಿದ ಲಾಭ]

Infosys beat analysts' expectations Q4 Q4 net up 16.2%

ಮಾರ್ಚ್ 31, 2016ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ಸಂಸ್ಥೆಯ ಆದಾಯ (ವರ್ಷದಿಂದ ವರ್ಷಕ್ಕೆ) ಶೇ 23.4 ರಷ್ಟು ಏರಿಕೆಯಾಗಿದ್ದು 16,550 ಕೋಟಿ ರು ಗಳಿಸಿದೆ. ಬೆಂಗಳೂರು ಮೂಲದ ಕಂಪನಿಯ ಒಟ್ಟಾರೆ ಮೌಲ್ಯ 62,441 ಕೋಟಿ ರು ನಷ್ಟಿದೆ. [ಈ ದಿನದ ಷೇರುಪೇಟೆ ವಹಿವಾಟು ಅಂಕಿ ಅಂಶ]

ಉತ್ತಮ ಫಲಿತಾಂಶ ಬಂದಿರುವ ಹಿನ್ನಲೆಯಲ್ಲಿ ಬೋರ್ಡ್ ನಿರ್ದೇಶಕರು ಪ್ರಸಕ್ತ ಆರ್ಥಿಕ ವರ್ಷಕ್ಕೆ 14.25 ರು ಅಂತಿಮ ಡಿವಿಡೆಂಡ್ ಶಿಫಾರಸು ಮಾಡಿದ್ದಾರೆ. ಮೋಹಿತ್ ಜೋಶಿ, ರವಿ ಕುಮಾರ್ ಎಸ್ ಹಾಗೂ ಸಂದೀಪ್ ದಡ್ಲಾನಿ ಅವರು ಸಂಸ್ಥೆಯ ಅಧ್ಯಕ್ಷರಾಗಿ ಈ ತ್ರೈಮಾಸಿಕ ಅವಧಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.[ಇನ್ಫೋಸಿಸ್ Q4 ಫಲಿತಾಂಶ ಲಾಭಕ್ಕೆ ತಿರುಗಿದ್ದು ಹೇಗೆ?]

English summary
Infosys had beat analysts' expectations in the first three quarters of FY16. Now it continues to do so in Q4. Infosys on Friday(April 15) reported a net profit of Rs 3,597 crore on March quarter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X