ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್: ಕನ್ನಡಿಗ ಕೆವಿ ಕಾಮತ್ ಜಾಗಕ್ಕೆ ಶೇಷಸಾಯಿ

|
Google Oneindia Kannada News

ಬೆಂಗಳೂರು, ಜೂ. 05: ಕನ್ನಡಿಗ ಕೆ.ವಿ ಕಾಮತ್ ಅವರನ್ನು ಇನ್ಫೋಸಿಸ್ ನಾನ್ ಎಕ್ಸಿಕ್ಯೂಟಿವ್ ಚೇರ್ ಮನ್ ಸ್ಥಾನದಿಂದ ಶುಕ್ರವಾರ ಅಧಿಕೃತವಾಗಿ ತೆರವು ಮಾಡಲಾಗಿದೆ. ಆರ್. ಶೇಷಸಾಯಿ ಅವರ ಸ್ಥಾನಕ್ಕೆ ನೇಮಕವಾಗಿದ್ದಾರೆ.

ಸುಮಾರು 50 ಬಿಲಿಯನ್ ಯುಎಸ್ ಡಾಲರ್ ವಹಿವಾಟು ನಿರೀಕ್ಷೆ ಹೊಂದಿರುವ ಅಭಿವೃದ್ಧಿಶೀಲ 'ಬ್ರಿಕ್ಸ್ ಬ್ಯಾಂಕ್' ಮುಖ್ಯಸ್ಥರಾಗಿ ಕನ್ನಡಿಗ ಪ್ರತಿಷ್ಠಿತ ಬ್ಯಾಂಕರ್ ಕೆವಿ ಕಾಮತ್ ಮೇ 11 ಆಯ್ಕೆಯಾಗಿದ್ದರು.[ಬ್ರಿಕ್ಸ್ ಬ್ಯಾಂಕ್ ಮುಖ್ಯಸ್ಥರಾಗಿ ಕನ್ನಡಿಗ ಕಾಮತ್]

infosys

ಕಾಮತ್ ಇನ್ಫೋಸಿಸ್ ಬೋರ್ಡ್ ನ ಚೆರ್ ಮೆನ್ ಮತ್ತು ಸ್ವತಂತ್ರ ನಿರ್ದೇಶಕರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ತಮ್ಮ ನೇಮಕದ ನಂತರ ಮಾತನಾಡಿ ನಾನು ಹೊಸ ಜವಾಬ್ದಾರಿಯನ್ನು ಪಡೆದುಕೊಂಡಿದ್ದೇನೆ. ಕಂಪನಿಯ ಎಲ್ಲೆರ ಮಾರ್ಗದರ್ಶನ ಮತ್ತು ಸಲಹೆ ಸೂಚನೆಯಂತೆ ಕೆಲಸ ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು. [ಇನ್ಫೋಸಿಸ್ ಉದ್ಯೋಗಿಗಳಿಗೆ 'ವಸ್ತ್ರ ಸ್ವಾತಂತ್ರ್ಯ' ಕೊಟ್ಟ ಸಿಕ್ಕಾ]

ಶೇಷಸಾಯೀ ಅವರು 2011ರ ಜನವರಿಯಿಂದ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕರಾಗಿದ್ದು, ಆಡಿಟ್ ಸಮಿತಿಯ ಅಧ್ಯಕ್ಷರಾಗಿದ್ದರು. ಅಲ್ಲದೇ ಇಂಡಸ್​ಇಂಡ್ ಬ್ಯಾಂಕ್​ನ ಅಧ್ಯಕ್ಷರೂ ಆಗಿದ್ದಾರೆ. ಇತರೆ ಜವಾಬ್ದಾರಿಗಳಿಂದ ಶೀಘ್ರವೇ ಮುಕ್ತರಾಗುವುದಾಗಿ ಶೇಷಸಾಯಿ ತಿಳಿಸಿದ್ದಾರೆ.

English summary
Infosys Limited on Friday announced that the Company's Board have approved the appointment of R. Seshasayee as Non-Executive Chairman of the Board with immediate effect. On the appointment, Mr. Seshasayee said, "In order to devote requisite time and attention to this responsibility, it is my intention to substantially disengage from my other current responsibilities in due course.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X