ಇನ್ಫೋಸಿಸ್ ನ ನೂತನ ಎಂಡಿ, ಸಿಇಒ ಆಗಿ ಸಲಿಲ್ ಪರೇಖ್‌ ನೇಮಕ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 2: ದೈತ್ಯ ಐಟಿ ಸಂಸ್ಥೆ ಇನ್ಫೊಸಿಸ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಸಲಿಲ್‌ ಎಸ್‌ ಪರೇಖ್‌ ಅವರನ್ನು ಸಂಸ್ಥೆಯ ನಿರ್ದೇಶಕ ಮಂಡಳಿ ಶನಿವಾರ ನೇಮಕ ಮಾಡಿದೆ.

ಇನ್ಫೋಸಿಸ್ ನ ಹೊಸ ಸಾರಥಿ ಸಲಿಲ್ ಪರೇಖ್ ಪರಿಚಯ

ಫ್ರೆಂಚ್ ಕಂಪನಿಯ IT ಎಕ್ಸಿಕ್ಯೂಟಿವ್ ಬೋರ್ಡ್ ಸದಸ್ಯರಾಗಿದ್ದ ಸಲಿಲ್ ಅವರು ಇನ್ಫೋಸಿಸ್ ಸಿಇಒ, ಎಂಡಿ ಆಗಿ 2018 ಜನವರಿ 2ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಲ್ಲಿಯವರೆಗೆಪ್ರವೀಣ್ ರಾವ್ ಮುಂದುವರೆಯಲಿದ್ದಾರೆ

Infosys Appoints Salil S Parekh As CEO, Managing Director

ಸಲಿಲ್ ಅವರು ಕಾರ್ನೆಲ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಮಾಸ್ಟರ್ ಆಫ್ ಇಂಜಿನಿಯರಿಂಗ್ ಡಿಗ್ರಿ ಮತ್ತು ಬಾಂಬೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಏರೋನಾಟಿಕಲ್ ಎಂಜಿನಿಯರಿಂಗ್ ನಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿ ಪದವಿ ಪಡೆದಿದ್ದಾರೆ.

ಇನ್ಫೋಸಿಸ್ ಸಿಇಒ, ಎಂಡಿ ಸ್ಥಾನಕ್ಕೆ ವಿಶಾಲ್ ಸಿಕ್ಕಾ ಅವರು ಆಗಸ್ಟ್ ನಲ್ಲಿ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಧ್ಯಂತರ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಪ್ರವೀಣ್ ರಾವ್ ಅವರನ್ನು ನೇಮಿಸಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Infosys on Saturday announced the appointment of Salil S Parekh as chief executive officer and managing director. The appointment, Infosys said in a press release, will be effective January 2, 2018. Mr Parekh will replace U B Pravin Rao, who took over as the Bengaluru-based IT company's interim CEO and managing director in August

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ