ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'0' ಗೆ ಇಳಿದ ಹಣದುಬ್ಬರ; ಇದು 3 ವರ್ಷದಲ್ಲೇ ಕನಿಷ್ಠ

By Kiran B Hegde
|
Google Oneindia Kannada News

ನವದೆಹಲಿ, ಡಿ. 15: ಇದಕ್ಕೆ 'ಅಚ್ಚೇ ದಿನ್' ಎನ್ನಬಹುದು. ಆದರೆ, ಇದಕ್ಕೆ ನರೇಂದ್ರ ಮೋದಿ ಪರಿಣಾಮವೋ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆಯಾದ ಕಾರಣವೋ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಒಟ್ಟು ಹಣದುಬ್ಬರದ ದರವು ನವೆಂಬರ್ ತಿಂಗಳಿನಲ್ಲಿ ಹೆಚ್ಚು ಕಡಿಮೆ ಶೇ. '0' ದಾಖಲಾಗಿದೆ. ಇದಕ್ಕೆ ನೇರ ಕಾರಣ ದೇಶದಲ್ಲಿ ಆಹಾರ, ಇಂಧನ ಮತ್ತು ಮಾನವ ಉತ್ಪಾದಿತ ವಸ್ತುಗಳ ಬೆಲೆ ಕಡಿಮೆಯಾಗುತ್ತಿರುವುದು.

ದೇಶದಲ್ಲಿ 'ಸಗಟು ಬೆಲೆ ಸೂಚ್ಯಂಕ' ಆಧಾರಿತ ಹಣದುಬ್ಬರದವು 2013ರ ಅಕ್ಟೋಬರ್‌ ತಿಂಗಳಿನಲ್ಲಿ ಶೇ. 1.77 ಹಾಗೂ ನವೆಂಬರ್‌ನಲ್ಲಿ ಶೇ. 7.52ರಷ್ಟಿತ್ತು. ಆದರೆ, 2014ರ ಮೇ ತಿಂಗಳಿನಿಂದ ಆಹಾರ ಹಣದುಬ್ಬರ ಇಳಿಲಾರಂಭಿಸಿತ್ತು. ಸೋಮವಾರ ಸರ್ಕಾರವು ಬಿಡುಗಡೆ ಮಾಡಿರುವ ಅಂಕಿ ಅಂಶದ ಪ್ರಕಾರ ಈ ಪ್ರಮಾಣವು ಮೂರು ವರ್ಷಗಳ ಕನಿಷ್ಠವಾದ ಶೇ. 0.63 ರಷ್ಟು ದಾಖಲಾಗಿದೆ. [ಹಣದುಬ್ಬರ ಕುಸಿತ, ಪೆಟ್ರೋ ಬೆಲೆ ಇಳಿಕೆ]

inflation

'ಸಗಟು ಬೆಲೆ ಸೂಚ್ಯಂಕ' ಬೆಲೆಯು 2009ರ ಜುಲೈ ತಿಂಗಳಿನಲ್ಲಿ ಶೇ. (-)0.3 ಪ್ರಮಾಣದಷ್ಟಿತ್ತು. ಅಕ್ಟೋಬರ್ ತಿಂಗಳಿನಲ್ಲಿ ಈರುಳ್ಳಿ ದರದ ಇಳಿಕೆ ಶೇ. 59.77ರಷ್ಟಿತ್ತು. ಈ ಪ್ರಮಾಣವು ಶೇ. 56.28 ಕ್ಕೆ ಕಡಿಮೆಯಾಗಿದೆ. ತರಕಾರಿಗಳ ಸಂಕೋಚನ ಪ್ರಮಾಣವು ಶೇ. 28.57ರಷ್ಟಿದೆ.

ಈ ಮಧ್ಯೆಯೂ, ಪ್ರೊಟೀನ್ ಭರಿತ ಆಹಾರಗಳಾದ ಮೊಟ್ಟಿ, ಮಾಂಸ ಮತ್ತು ಮೀನುಗಳು ನವೆಂಬರ್ ತಿಂಗಳಿನಲ್ಲಿ ಶೇ. 4.36ಕ್ಕೆ ಹೆಚ್ಚಳವಾಗಿವೆ. ಈ ಸಂದರ್ಭದಲ್ಲಿ ಬಟಾಟೆಯ ಹಣದುಬ್ಬರ ಪ್ರಮಾಣವು ಶೇ. 34.10ರಷ್ಟಿತ್ತು. [5 ವರ್ಷದಲ್ಲೇ ಅತಿ ಕಡಿಮೆ ಹಣದುಬ್ಬರ]

ಆದರೆ, ಮಾನವ ಉತ್ಪಾದಿತ ಆಹಾರ ಪದಾರ್ಥಗಳಾದ ಸಕ್ಕರೆ, ಖಾದ್ಯ ತೈಲ, ಪಾನೀಯಗಳು ಮತ್ತು ಸಿಮೆಂಟ್ ನವೆಂಬರ್‌ನಲ್ಲಿ ಶೇ. 2.04ಕ್ಕೆ ಬಿದ್ದವು. ಈ ಪ್ರಮಾಣವು ಅಕ್ಟೋಬರ್‌ನಲ್ಲಿ 2.43ರಷ್ಟಿತ್ತು. ಇಂಧನ ಮತ್ತು ವಿದ್ಯುತ್ ವಿಭಾಗದಲ್ಲಿ ಹಣದುಬ್ಬರ ಪ್ರಮಾಣದ ಇಳಿಕೆಯು ಅಕ್ಟೋಬರ್‌ನಲ್ಲಿ ಶೇ. 0.43ರಷ್ಟಿದ್ದರೆ ನವೆಂಬರ್‌ನಲ್ಲಿ ಶೇ. 4.91ರಷ್ಟು ದಾಖಲಾಗಿತ್ತು.

ಆರು ತಿಂಗಳುಗಳ ಕಾಲ ನಿರಂತರವಾಗಿ 'ಸಗಟು ಬೆಲೆ ಸೂಚ್ಯಂಕ' ಹಣದುಬ್ಬರದಲ್ಲಾದ ಇಳಿಕೆಯು ಚಿಲ್ಲರೆ ಮಾರಾಟದ ಇಳಿಕೆಯು ನವೆಂಬರ್ ತಿಂಗಳಿನಲ್ಲಿ ಕನಿಷ್ಠ ದಾಖಲೆಯಾದ ಶೇ. 4.38ರಷ್ಟು ಹಣದುಬ್ಬರಕ್ಕೆ ಕಾರಣವಾಯಿತು.

English summary
Wholesale price inflation hit a zero level in November, the lowest in about five and half years, on account of decline in prices of food, fuel and manufactured items. The Wholesale Price Index (WPI) based inflation was at 1.77 per cent in October and 7.52 per cent in November 2013. As per data released by the government on Monday, the food inflation fell to nearly three year low of 0.63 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X