ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಪಿ ಮಾಪನ: ಕೈಗಾರಿಕಾ ಬೆಳವಣಿಗೆ 17 ತಿಂಗಳಲ್ಲಿಯೇ ಕುಸಿತ

|
Google Oneindia Kannada News

ನವದೆಹಲಿ, ಜನವರಿ 12: ಕಳೆದ 17 ತಿಂಗಳಿನಲ್ಲಿಯೇ ಮೊದಲ ಬಾರಿಗೆ ನವೆಂಬರ್‌ನಲ್ಲಿ ಕೈಗಾರಿಕಾ ಬೆಳವಣಿಗೆಯಲ್ಲಿ ಅನಿರೀಕ್ಷಿತ ಕುಸಿತ ಉಂಟಾಗಿದೆ.

ಕೈಗಾರಿಕಾ ಉತ್ಪಾದನಾ ಕಾರ್ಯಸೂಚಿ (ಐಐಪಿ) ನಡೆಸಿರುವ ಬೆಳವಣಿಗೆಯ ಮಾಪನದಲ್ಲಿ ನವೆಂಬರ್‌ನಲ್ಲಿ ಕೈಗಾರಿಕಾ ಪ್ರಗತಿ ಶೇ 0.47 ನಿಂತಿತ್ತು. ಒಟ್ಟಾರೆ ಶೇ 4ರಷ್ಟು ಪ್ರಗತಿ ನಿರೀಕ್ಷಿಸಲಾಗಿತ್ತು. ನವೆಂಬರ್ ತಿಂಗಳಿನಲ್ಲಿ ಶೇ 0.5ರಷ್ಟು ಬೆಳವಣಿಗೆ ಕುಸಿತ ಕಂಡಿದೆ.

3ನೇ ತ್ರೈಮಾಸಿಕ : ಇನ್ಫೋಸಿಸ್ ನಿವ್ವಳ ಲಾಭದಲ್ಲಿ ಶೇ 30ರಷ್ಟು ಕುಸಿತ 3ನೇ ತ್ರೈಮಾಸಿಕ : ಇನ್ಫೋಸಿಸ್ ನಿವ್ವಳ ಲಾಭದಲ್ಲಿ ಶೇ 30ರಷ್ಟು ಕುಸಿತ

2017ರ ನವೆಂಬರ್‌ನಲ್ಲಿ ಐಐಪಿ ಶೇ 8.5ರ ಬೆಳವಣಿಗೆ ಹೊಂದಿತ್ತು. ಐಐಪಿಯ ಶೇ 77.63ರಷ್ಟು ಕಾಣಿಕೆ ಹೊಂದಿರುವ ಉತ್ಪಾದನಾ ಕ್ಷೇತ್ರ, ಕಳೆದ ವರ್ಷದ ಶೇ 10.4ರ ಬೆಳವಣಿಗೆಗೆ ಹೋಲಿಸಿದರೆ ಶೇ 0.4ರಷ್ಟು ಇಳಿಕೆ ಕಂಡಿದೆ.

Industrial growth falls to 17 months low as per IIP

ಅಕ್ಟೋಬರ್ ತಿಂಗಳಿನಲ್ಲಿ ಹಬ್ಬಗಳು ಸಾಲಾಗಿ ಬರುವುದರಿಂದ ಶೇ 8.4ರ ಪ್ರಗತಿ ದಾಖಲಾಗಿದೆ. ಈ ವಾರ ಬಿಡುಗಡೆಯಾಗಿರುವ ಜಿಡಿಪಿ ವರದಿ ಪ್ರಕಾರ 2019ನೇ ಹಣಕಾಸು ವರ್ಷದಲ್ಲಿ ಶೇ 7.2ರಷ್ಟು ಆರ್ಥಿಕ ಬೆಳವಣಿಗೆ ನಿರೀಕ್ಷಿಸಲಾಗಿದೆ. ಮೊದಲ ಆರು ತಿಂಗಳು ಶೇ 7.6ರ ಪ್ರಗತಿ ಇದ್ದರೆ, ಉಳಿದ ಆರು ತಿಂಗಳು ಶೇ 6.8ರಷ್ಟು ಇರಲಿದೆ.

ಟಿಸಿಎಸ್ 3ನೇ ತ್ರೈಮಾಸಿಕ ವರದಿ: ಸಂಸ್ಥೆಗೆ ಶೇ 24 ರಷ್ಟು ನಿವ್ವಳ ಲಾಭ ಟಿಸಿಎಸ್ 3ನೇ ತ್ರೈಮಾಸಿಕ ವರದಿ: ಸಂಸ್ಥೆಗೆ ಶೇ 24 ರಷ್ಟು ನಿವ್ವಳ ಲಾಭ

ಭಾರತದ ಬೆಳವಣಿಗೆಯು ಮುಂದಿನ ವರ್ಷ ಶೇ 7.5ಕ್ಕೆ ಏರಿಕೆಯಾಗಲಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.

ಸಣ್ಣ ವ್ಯಾಪಾರಗಳಿಗೆ ಪ್ರೋತ್ಸಾಹ, ಜಿಎಸ್ ಟಿ ಮಿತಿಯಲ್ಲಿ ಏರಿಕೆ: ಜೇಟ್ಲಿಸಣ್ಣ ವ್ಯಾಪಾರಗಳಿಗೆ ಪ್ರೋತ್ಸಾಹ, ಜಿಎಸ್ ಟಿ ಮಿತಿಯಲ್ಲಿ ಏರಿಕೆ: ಜೇಟ್ಲಿ

ಒಟ್ಟಾರೆ ಕೈಗಾರಿಕಾ ಉತ್ಪಾದನೆಯು ಏಪ್ರಿಲ್- ನವೆಂಬರ್ ಅವಧಿಯಲ್ಲಿ ಶೇ 5ರಷ್ಟು ಪ್ರಗತಿ ಕಂಡಿದೆ. ವರ್ಷದ ಆರಂಭದಲ್ಲಿ ಶೇ 3.2ರ ಪ್ರಗತಿ ಇತ್ತು. 23ರಲ್ಲಿ 10 ಉತ್ಪಾದನಾ ಉಪ ಸಮೂಹಗಳು ಮಾತ್ರ ಸಕಾರಾತ್ಮಕ ಬೆಳವಣಿಗೆ ಕಂಡಿವೆ.

English summary
Index of Industrial Production (IIP) shows the unexpected falls in Industrial growth to 17 months in November.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X