ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವಕರಿಗೆ ಪೆಪ್ಸಿ, ಕೋಕ್ ವೃದ್ಧರಿಗೆ : ನೂಯಿ

By Mahesh
|
Google Oneindia Kannada News

ನವದೆಹಲಿ, ನ.12: ದೇಶದ ಅತಿದೊಡ್ದ ತಂಪು ಪಾನೀಯ ಬ್ರಾಂಡ್ ಗಳಾದ ಕೋಕಾ ಕೋಲಾ ಹಾಗೂ ಪೆಪ್ಸಿ ನಡುವಿನ ವ್ಯತ್ಯಾಸವನ್ನು ಪೆಪ್ಸಿಕೋ ಕಂಪನಿ ಸಿಇಒ ಇಂದ್ರಾ ನೂಯಿ ವಿವರಿಸಿದ್ದಾರೆ. ಪೆಪ್ಸಿ ಎಂದೆಂದಿಗೂ ಯುವಕರ ಆಯ್ಕೆ, ಕೋಕ್ ವಯಸ್ಸಾದವರಿಗೆ ಮಾತ್ರ ಎಂದಿದ್ದಾರೆ.

ಕೋಕಾ ಕೋಲಾ ಭಾರತಕ್ಕೆ 80 ರ ದಶಕದಲ್ಲೆ ಕಾಲಿರಿಸಿ ಕೈ ಸುಟ್ಟಿಕೊಂಡಿತ್ತು. ನಂತರ ಥಮ್ಸ್ ಅಪ್ ಮುಂತಾದ ಸ್ಥಳೀಯ ಬ್ರಾಂಡ್ ಗಳಾದ ಹಿಂದೆ ಬಿದ್ದು ತನ್ನ ಬ್ರಾಂಡ್ ಬೆಳೆಸಿಕೊಂಡಿತು. ಪೆಪ್ಸಿ ಎಲ್ಲವನ್ನೂ ಸ್ವಂತವಾಗಿ ನಿರ್ಮಿಸಿದೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಇಂದ್ರಾ ನೂಯಿ ಹೇಳಿದ್ದಾರೆ.

ಭಾರತದಲ್ಲಿ ಹಣ ಹೂಡಿಕೆ ಹಣ ಗಳಿಕೆ ದೊಡ್ಡ ವಿಷಯವಲ್ಲ. ಜನರಲ್ಲಿ ಒಂದು ಕ್ರೇಜ್ ಒಂದು ಉತ್ಸಾಹ ಹುಟ್ಟಿಸುವ ಬ್ರಾಂಡ್ ಸೃಷ್ಟಿಸುವುದು ಉದ್ಯಮಿಗಳ ಗುರಿಯಾಗಬೇಕು ಎಂದು ಇಂದ್ರಾ ನೂಯಿ ಹೇಳಿದರು.

Indra Nooyi calls Pepsi youthful, Coke old

ಪೆಪ್ಸಿಕೊ ಭಾರತದಲ್ಲಿ 2020ರ ವೇಳೆಗೆ 33,000 ಕೋಟಿ ರೂ(5.5 ಬಿಲಿಯನ್ ಡಾಲರ್) ಗಳ ಭಾರಿ ಹೂಡಿಕೆಯನ್ನು ಮಾಡುವುದಾಗಿ ಘೋಷಿಸಿದರು. ದೇಶವೊಂದರಲ್ಲಿ ಕಂಪನಿಯ ಅತಿ ದೊಡ್ಡ ಹೂಡಿಕೆಗಳಲ್ಲಿ ಇದೂ ಒಂದಾಗಿದೆ. ಈ ಮೂಲಕ ದೇಶದಲ್ಲಿ ತನ್ನ ವಹಿವಾಟನ್ನು ಎರಡು ಪಟ್ಟು ಹೆಚ್ಚಿಸಲು ನಿರ್ಧರಿಸಿದೆ ಎಂದರು.

ಕೇಂದ್ರ ವಿತ್ತ ಸಚಿವ ಪಿ. ಚಿದಂಬರಂ ಜತೆ ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ ಬಗ್ಗೆ ಇಂದ್ರಾ ನೂಯಿ ದೀರ್ಘವಾಗಿ ಚರ್ಚೆ ನಡೆಸಿದರು. ಉದ್ಯಮಿಗಳು ಚುನಾವಣೆ, ರಾಜಕೀಯದ ಮಾರ್ಗದರ್ಶನದ ಮೇಲೆ ನಡೆಯುವ ಬದಲು ಭಾರತ ಜನಶಕ್ತಿ ಮೇಲೆ ನಡೆಯಬೇಕು ಎಂದರು.

ಮೋದಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಶ್ವದ ಪ್ರಭಾವಿ ಉದ್ಯಮಿಗಳಲ್ಲಿ ಒಬ್ಬರಾದ ನೂಯಿ, ನಾನು ರಾಜಕೀಯ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸಲಾರೆ. ಬಹುರಾಷ್ಟ್ರೀಯ ಕಂಪನಿಯ ಸಿಇಒ ಆಗಿ ಮಾತ್ರ ಮಾತನಾಡಬಲ್ಲೆ. ಭಾರತದಂಥ ರಾಷ್ಟ್ರಗಳಲ್ಲಿ ದೀರ್ಘಕಾಲಿಕ ಅಭಿವೃದ್ಧಿಗೆ ಯೋಜನೆ ಹಾಕಿಕೊಂಡು ಪ್ರಗತಿ ಸಾಧಿಸುವತ್ತ ಸಾಗಬೇಕು,. ನಿರುದ್ಯೋಗ ತೊಲಗಿಸಲು ಶೇ 7 ರಿಂದ 8 ರಷ್ಟು ಪ್ರಗತಿ ಇನ್ನೂ ಕಾಣಬೇಕಿದೆ. ಸಮರ್ಥ ನಾಯಕರ ಅವಶ್ಯಕತೆ ಇದ್ದೇ ಇದೆ ಎಂದರು. (ಪಿಟಿಐ)

English summary
Pepsi is a youthful brand, while Coca Cola is for “older ones”, PepsiCo chairman and CEO Indra Nooyi said on Monday while bringing out the contrast in business approach and positioning with its rival in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X