ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Good News: ರದ್ದಾದ ಟೆಕೆಟ್‌ಗಳ ಎಲ್ಲಾ ಬಾಕಿ ಮೊತ್ತ ಜನವರಿ 31ರೊಳಗೆ ವಾಪಸ್ ಎಂದ ಇಂಡಿಗೋ

|
Google Oneindia Kannada News

ನವದೆಹಲಿ, ಡಿಸೆಂಬರ್ 07: ಕೊರೊನಾವೈರಸ್ ಪ್ರೇರಿತ ಲಾಕ್‌ಡೌನ್‌ನಿಂದಾಗಿ ರದ್ದಾದ ಟಿಕೆಟ್‌ಗಳ ಹಣ ಮರುಪಾವತಿಯನ್ನು ಈಗಾಗಲೇ 1,000 ಕೋಟಿ ರೂ.ವರೆಗೆ ನೀಡಲಾಗಿದ್ದು ಇದು ಗ್ರಾಹಕರ ಶೇಕಡಾ 90 ರಷ್ಟು ಮೊತ್ತವಾಗಿದೆ ಎಂದು ಇಂಡಿಗೋ ಏರ್‌ಲೈನ್ಸ್ ಹೇಳಿದೆ.

2021 ರ ಜನವರಿ 31ಕ್ಕೆ ವಿಮಾನಗಳನ್ನು ರದ್ದುಗೊಳಿಸುವ ಅವಧಿಯ ಗ್ರಾಹಕರ ಸಂಪೂರ್ಣ ಮೊತ್ತವನ್ನು (ಕ್ರೆಡಿಟ್ ಶೆಲ್) ಮರುಪಾವತಿಸಲಾಗುವುದು ಎಂದು ಇಂಡಿಗೋ ಪ್ರಕಟಣೆಯಲ್ಲಿ ತಿಳಿಸಿದೆ.

''ದಿಢೀರ್ ಲಾಕ್‌ಡೌನ್‌ನಿಂದಾಗಿ ಕಾರ್ಯ ಚಟುವಟಿಕೆಗಳ ಸ್ಥಗಿತದಿಂದಾಗಿ ಆದಾಯವು ಸಂಪೂರ್ಣವಾಗಿ ನಿಂತುಹೋಯಿತು. ಹೀಗಾಗಿ ರದ್ದಾದ ವಿಮಾನಗಳಿಗೆ ಸಂಬಂಧಿಸಿದಂತೆ ತಕ್ಷಣ ಹಣ ಮರುಪಾವತಿ ಮಾಡಲು ಸಾಧ್ಯವಾಗಲಿಲ್ಲ'' ಎಂದು ಇಂಡಿಗೊ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೊನೋಜಾಯ್ ದತ್ತಾ ಹೇಳಿದರು.

Indigo To Refund All Passengers By 31 January For Flight Ticket Cancellations

ಕೊರೊನಾವೈರಸ್ ಲಾಕ್‌ಡೌನ್ ಕಾರಣ ಭಾರತ ಎರಡು ತಿಂಗಳ ಅಂತರದ ನಂತರ ಮೇ 25 ರಂದು ನಿಗದಿತ ದೇಶೀಯ ವಿಮಾನಗಳ ಹಾರಾಟವನ್ನು ಪುನರಾರಂಭಿಸಿತು. ಮೇ ತಿಂಗಳಿನಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ, ದ್ವಿಪಕ್ಷೀಯ ಏರ್ ಬಬಲ್ ಒಪ್ಪಂದದ ಅಡಿಯಲ್ಲಿ ವಿಶೇಷ ಅಂತರರಾಷ್ಟ್ರೀಯ ವಿಮಾನಯಾನಗಳ ಹಾರಾಟಕ್ಕೆ ಕೇಂದ್ರವು ವಿಮಾನಯಾನ ಸಂಸ್ಥೆಗಳಿಗೆ ಅವಕಾಶ ನೀಡಿದೆ.

ಮುಂದಿನ ವರ್ಷದಿಂದ ವಿಮಾನ ಕಾರ್ಯಾಚರಣೆ ಶೇಕಡಾ 100 ಕ್ಕೆ ತಲುಪಲಿದೆ ಎಂದು ನಂಬಲಾಗಿದೆ. ಆದಾಗ್ಯೂ, ಅಂತರರಾಷ್ಟ್ರೀಯ ಹಾರಾಟ ಆತಂಕಕಾರಿ ಎನ್ನಲಾಗಿದೆ.

English summary
Budget carrier IndiGo today said that it will refund all passengers against the ticket cancellations done
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X