ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಅತಿ ಶ್ರೀಮಂತ ವ್ಯಕ್ತಿಗಳ ಸಂಪತ್ತು ಎಷ್ಟು ಹೆಚ್ಚಿದೆ ಗೊತ್ತೇ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 25: ಹುರುನ್ ರಿಪೋರ್ಟ್ ಇಂಡಿಯಾ ಮತ್ತು ಐಐಎಫ್‌ಎಲ್ ವೆಲ್ತ್ ಸಂಸ್ಥೆಗಳು ಬುಧವಾರ ಬಿಡುಗಡೆ ಮಾಡಿರುವ ಹುರುನ್ ಇಂಡಿಯಾ ರಿಚ್ ಲಿಸ್ಟ್ 2019ರ ಪ್ರಕಾರ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಸಂಪತ್ತು ಏರಿಕೆಯಾಗಿದ್ದರೂ, ಅದು ಗಣನೀಯ ಪ್ರಮಾಣದಲ್ಲಿ ಇಲ್ಲ.

ಹುರುನ್ ಇಂಡಿಯಾ ಲಿಸ್ಟ್ ದೇಶದಾದ್ಯಂತ 41 ವಲಯಗಳ 953 ಶ್ರೀಮಂತ ವ್ಯಕ್ತಿಗಳ ಮಾಹಿತಿ ಸಂಗ್ರಹ ಮಾಡಿತ್ತು. ಇದರಲ್ಲಿ ಕನಿಷ್ಠ 1,000 ಸಂಪತ್ತು ಉಳ್ಳವರನ್ನು ಮಾತ್ರ ಪರಿಗಣಿಸಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಪಟ್ಟಿಯಲ್ಲಿ ಶೇ 15ರಷ್ಟು ಸಂಖ್ಯೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮೂರನೇ ಒಂದರಷ್ಟು, ಅಂದರೆ 344 ವ್ಯಕ್ತಿಗಳು ಸಂಪತ್ತಿನಲ್ಲಿ ಇಳಿಕೆ ಕಂಡಿದ್ದರೆ, 112 ಮಂದಿ ಕನಿಷ್ಠ ಗುರಿ ಮುಟ್ಟುವಲ್ಲಿ ವಿಫಲರಾಗಿದ್ದಾರೆ.

ಎರಡು ದಿನದಲ್ಲೇ ಮುಕೇಶ್ ಅಂಬಾನಿ ಆಸ್ತಿ 29,000 ಕೋಟಿ ಏರಿಕೆಎರಡು ದಿನದಲ್ಲೇ ಮುಕೇಶ್ ಅಂಬಾನಿ ಆಸ್ತಿ 29,000 ಕೋಟಿ ಏರಿಕೆ

ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ 122 ಹೆಚ್ಚು ವ್ಯಕ್ತಿಗಳು ಈ ಪಟ್ಟಿಗೆ ಸೇರಿಕೊಂಡಿದ್ದಾರೆ. 2016ರ ಪಟ್ಟಿಗೆ ಹೋಲಿಸಿದರೆ 1,000 ಕೋಟಿಗೂ ಮೀರಿದ ಸಂಪತ್ತು ಉಳ್ಳವರ ಸಂಖ್ಯೆ ಶೇ 181ರಷ್ಟು ಹೆಚ್ಚಾಗಿದೆ.

ಮುಕೇಶ್ ಅಂಬಾನಿ ಆದಾಯ

ಮುಕೇಶ್ ಅಂಬಾನಿ ಆದಾಯ

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ರಿಲಯನ್ಸ್ ಸಮೂಹದ ಅಧ್ಯಕ್ಷ ಮುಕೇಶ್ ಅಂಬಾನಿ 3,80,700 ಕೋಟಿ ರೂ ಆದಾಯ ಹೊಂದಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅವರ ಸಂಪತ್ತು ಶೇ 3ರಷ್ಟು ಮಾತ್ರ ಹೆಚ್ಚಳವಾಗಿದೆ.

ವಿಶ್ವದ 2ನೇ ಶ್ರೀಮಂತ ವ್ಯಕ್ತಿ ಪಟ್ಟವನ್ನು ಬಿಲ್‌ಗೇಟ್ಸ್‌ನಿಂದ ಕಸಿದವರು ಯಾರು?ವಿಶ್ವದ 2ನೇ ಶ್ರೀಮಂತ ವ್ಯಕ್ತಿ ಪಟ್ಟವನ್ನು ಬಿಲ್‌ಗೇಟ್ಸ್‌ನಿಂದ ಕಸಿದವರು ಯಾರು?

ಅದಾನಿ ಆದಾಯ ಭಾರಿ ಹೆಚ್ಚಳ

ಅದಾನಿ ಆದಾಯ ಭಾರಿ ಹೆಚ್ಚಳ

ಗೌತಮ್ ಅದಾನಿ ಮತ್ತು ಕುಟುಂಬದ ಆದಾಯ ಶೇ 33ರಷ್ಟು ಹೆಚ್ಚಾಗಿದೆ. ಅದಾನಿ ಕುಟುಂಬದ ಸಂಪತ್ತು 94,500 ಕೋಟಿ ರೂ. ಎಸ್ಪಿ ಹಿಂದೂಜಾ ಮತ್ತು ಕುಟುಂಬದ ಸಂಪತ್ತು ಶೇ 17ರಷ್ಟು ಏರಿಕೆಯಾಗಿದ್ದು, 1,86,500 ಕೋಟಿ ಮೌಲ್ಯದ ಸಂಪತ್ತು ಹೊಂದಿದ್ದಾರೆ.

ಮಿತ್ತಲ್ ಆದಾಯ ಕುಸಿತ

ಮಿತ್ತಲ್ ಆದಾಯ ಕುಸಿತ

ಎಲ್‌ಎನ್ ಮಿತ್ತಲ್ ಮತ್ತು ಕುಟುಂಬದ ಸಂಪತ್ತು ಶೇ 6ರಷ್ಟು ಕುಸಿದಿದೆ. ಕುಟುಂಬ ಈಗ 1,07,300 ಕೋಟಿ ರೂ. ಸಂಪತ್ತು ಹೊಂದಿದೆ. ಅಜೀಂ ಪ್ರೇಮ್‌ಜಿ ಅವರ ಸಂಪತ್ತು ಶೇ 22ರಷ್ಟು ಹೆಚ್ಚಳವಾಗಿದ್ದು, 1,17,100 ಕೋಟಿ ರೂ. ಇದೆ.

ಉಳಿದ ಸಿರಿವಂತರ ಪಟ್ಟಿ

ಉಳಿದ ಸಿರಿವಂತರ ಪಟ್ಟಿ

* ಉದಯ್ ಕೋಟಕ್ (ಕೋಟಕ್ ಮಹೀಂದ್ರಾ ಬ್ಯಾಂಕ್) - 94,100 ಕೋಟಿ ರೂ ಸಂಪತ್ತು. ಶೇ 20ರಷ್ಟು ಏರಿಕೆ.

* ಸಿರಸ್ ಎಸ್ ಪೂನ್‌ವಾಲಾ (ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ))- 88,800 ಕೋಟಿ ರೂ. ಶೇ 22ರಷ್ಟು ಹೆಚ್ಚಳ.

* ಸಿರಸ್ ಪಲ್ಲೊಂಜಿ ಮಿಸ್ತ್ರಿ (ಶಪೂರ್ಜಿ ಪಲ್ಲೊಂಜಿ)- 76,800 ಕೋಟಿ ರೂ. ಶೇ 11ರಷ್ಟು ಏರಿಕೆ.

* ಶಾಪೂರ್ ಪಲ್ಲೊಂಜಿ ಮಿಸ್ತ್ರಿ (ಶಪೂರ್ಜಿ ಪಲ್ಲೊಂಜಿ)- 76,800 ಕೋಟಿ ರೂ. ಶೇ 11ರಷ್ಟು ಹೆಚ್ಚಳ.

* ದಿಲೀಪ್ ಸಿಂಘ್ವಿ (ಸನ್ ಫಾರ್ಮಾಸಿಟಿಕಲ್)- 71,500 ಕೋಟಿ ರೂ. ಶೇ 20ರಷ್ಟು ಇಳಿಕೆ.

ಅಮಿತ್ ಶಾ ನಿಜವಾದ ಕರ್ಮಯೋಗಿ ಮತ್ತು ಭಾರತದ ಉಕ್ಕಿನ ಮನುಷ್ಯ: ಅಂಬಾನಿಅಮಿತ್ ಶಾ ನಿಜವಾದ ಕರ್ಮಯೋಗಿ ಮತ್ತು ಭಾರತದ ಉಕ್ಕಿನ ಮನುಷ್ಯ: ಅಂಬಾನಿ

English summary
Hurun India Rich List was released on Wednesday showed 953 individuals wealth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X