ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೇತರಿಕೆ ಹಾದಿ ಕಂಡ ಭಾರತದ ಆರ್ಥಿಕತೆ: ಜಿಡಿಪಿ ಶೇ 0.4ರಷ್ಟು ಬೆಳವಣಿಗೆ

|
Google Oneindia Kannada News

ನವದೆಹಲಿ, ಫೆಬ್ರವರಿ 26: ಸತತ ಎರಡು ತ್ರೈಮಾಸಿಕ ಅವಧಿಗಳಲ್ಲಿ ಜಿಡಿಪಿಯ ತೀವ್ರ ಕುಸಿತ ಕಂಡಿದ್ದ ಭಾರತದ ಆರ್ಥಿಕತೆ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಶೇ 0.4 ಜಿಡಿಪಿ ಬೆಳವಣಿಗೆಯೊಂದಿಗೆ ಕೊನೆಗೂ ಪ್ರಗತಿಯ ಹಾದಿಗೆ ಮರಳಿದೆ. ಡಿಸೆಂಬರ್ ತ್ರೈಮಾಸಿಕ ಅವಧಿ ಅಂತ್ಯಕ್ಕೆ ಭಾರತದ ಜಿಡಿಪಿಯಲ್ಲಿ ಚೇತರಿಕೆ ಉಂಟಾಗಿದೆ ಎಂದು ಸರ್ಕಾರ ಬಿಡುಗಡೆ ಮಾಡಿರುವ ದತ್ತಾಂಶಗಳು ತಿಳಿಸಿವೆ.

2019-20ನೇ ಅವಧಿಯಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇ 3.3ಕ್ಕೆ ವಿಸ್ತರಣೆಯಾಗಿದೆ ಎಂದು ರಾಷ್ಟ್ರೀಯ ಸಾಂಸ್ಥಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ದತ್ತಾಂಶ ತಿಳಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೂರನ ತ್ರೈಮಾಸಿಕ ಅವಧಿಯಲ್ಲಿ ಚೇತರಿಕೆ ಕಾಣುವ ಮೂಲಕ ಕೋವಿಡ್-19 ಸಾಂಕ್ರಾಮಿಕ ಸನ್ನಿವೇಶದಲ್ಲಿ ಮೊದಲ ಬಾರಿಗೆ ಸಕಾರಾತ್ಮಕ ಹಾದಿ ಹಿಡಿದಿದೆ.

ಡಿಸೆಂಬರ್‌ಗೆ ಅಂತ್ಯವಾದ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿಯಲ್ಲಿ ಪ್ರಗತಿಯ ಬೆಳವಣಿಗೆ ದಾಖಲಿಸಿದ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದೆ. 2020-21ನೇ ಹಣಕಾಸು ವರ್ಷದಲ್ಲಿ ಶೇ 8ರಷ್ಟು ಆರ್ಥಿಕ ಕುಸಿತವನ್ನು ಎನ್‌ಎಸ್‌ಒ ಅಂದಾಜಿಸಿದೆ. ರಾಷ್ಟ್ರವ್ಯಾಪಿ ಲಾಕ್‌ಡೌನ್ ಬಳಿಕ ಜೂನ್ ತ್ರೈಮಾಸಿಕ ಅವಧಿಯಲ್ಲಿ ಶೇ 23.9ರಷ್ಟು ಭಾರಿ ಹಿನ್ನಡೆ ಅನುಭವಿಸಿತ್ತು. ಸೆಪ್ಟೆಂಬರ್‌ನಲ್ಲಿ ಅಂತ್ಯಗೊಂಡ ತ್ರೈಮಾಸಿಕ ಅವಧಿಯಲ್ಲಿ ಶೇ 7.5ರಷ್ಟು ಕುಸಿತ ಕಂಡಿತ್ತು.

 Indias GDP Grows By 0.4 Percent in 3rd Quarter, Exits Recession

ಎನ್‌ಎಸ್‌ಒ ಅಂಕಿ ಅಂಶದ ಪ್ರಕಾರ ಏಪ್ರಿಲ್‌ನಿಂದ ಜನವರಿ ಅವಧಿಯಲ್ಲಿ ಹಣಕಾಸು ಕೊರತೆ 12.34 ಲಕ್ಷ ಕೋಟಿ ರೂ ಇರಲಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ 0.5ರಷ್ಟು ಬೆಳವಣಿಗೆ ಕಾಣಲಿದೆ ಎಂದು ರಾಯಿಟರ್ಸ್ ಸಮೀಕ್ಷೆ ವರದಿ ತಿಳಿಸಿತ್ತು.

English summary
India's economy has exited recession after two consecutive quarters of de growth with 0.4 percent growth in the December quarter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X