• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ಪ್ರಥಮ ಕೋಡಿಂಗ್ ಶಾಲೆ ಬೆಂಗಳೂರಲ್ಲಿ ಆರಂಭ

|

ಬೆಂಗಳೂರು, ಜುಲೈ 04: ಮಸಾಯ್ ಸ್ಕೂಲ್ ಉದ್ಯೋಗ ಆಧಾರಿತ ಸೀಡ್ ಫಂಡಿಂಗ್ ಸ್ಟಾರ್ಟ್‍ಅಪ್ ಕಂಪೆನಿಯಾಗಿದ್ದು, ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ.

ಮಸಾಯ್ ಸ್ಕೂಲ್ ಕೋಡಿಂಗ್ ಕೇಂದ್ರಿತ ಕಲಿಕಾ ಕಾರ್ಯಕ್ರಮಗಳನ್ನು ನಡೆಸಲಿದ್ದು, ಕಲಿಕಾ ಆಸಕ್ತರನ್ನು ಕೌಶಲಭರಿತನ್ನಾಗಿ ಮಾಡಿ, ನೌಕರಿ ಲಭ್ಯವಿರುವ ವೃತ್ತಿಗಳಿಗೆ ಅಗತ್ಯವಿರುವ ತರಬೇತಿ ನೀಡಲಾಗುತ್ತದೆ. ಮುಂದಿನ 10ರಿಂದ 12 ತಿಂಗಳ ಅವಧಿಯಲ್ಲಿ 500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಪದವೀಧರರನ್ನಾಗಿ ಮಾಡುವ ಆಲೋಚನೆ ಹೊಂದಿದೆ.

ಫಲ ನೀಡಿದ ತಂತ್ರಾಂಶ:ಉ.ಕ.ಜಿಲ್ಲೆಯಲ್ಲಿ ಶೇ.97 ರಷ್ಟು ಅಂಗವಿಕಲರಿಂದ ಮತದಾನ

ಆಸಕ್ತರು ಕೋರ್ಸ್‍ಗಳಿಗೆ ಉಚಿತವಾಗಿ ಹೆಸರು ನೋಂದಾಯಿಸಬಹುದು ಹಾಗೂ ಸೂಕ್ತ ನೌಕರಿ ದೊರೆತ ಬಳಿಕ ಕೋರ್ಸ್‍ನ ಶುಲ್ಕವನ್ನು ಭರಿಸಲು ಅವಕಾಶವಿರುತ್ತದೆ. ಕೋಡಿಂಗ್ ಎಕ್ಸ್ ಪರ್ಟ್ ಆಗುವ ಆಕಾಂಕ್ಷೆಯುಳ್ಳ ಯಾರೂ ಬೇಕಿದ್ದರೂ ಕೋರ್ಸ್‍ಗೆ ಸೇರಲು ಮುಕ್ತ ಅವಕಾಶವಿದೆ. ಕೆಲಸ ಮಾಡಲು ಅವಕಾಶವಿರುವ ಸೌಲಭ್ಯದೊಂದಿಗೆ ಕಳೆದ ಜೂನ್ ತಿಂಗಳನಲ್ಲಿ ಆರಂಭಿಕ ಬ್ಯಾಚ್ ಅನ್ನು ಬೆಂಗಳೂರಿನಲ್ಲಿ ಆರಂಭಿಸಲಾಗಿದೆ.

ಗ್ರಾಬ್‍ಹೌಸ್‍ನ ಮಾಜಿ ಸಂಸ್ಥಾಪಕರಾಗಿರುವ ಪ್ರತೀಕ್ ಶುಕ್ಲಾ ಅವರು ಮಸಾಯ್ ಸ್ಕೂಲ್‍ನ ಸ್ಥಾಪಕರಾಗಿದ್ದು, ಇಲ್ಲಿ 5 ತಿಂಗಳ ಅವಧಿಯ ವಿಸ್ತೃತವಾದ ವೆಬ್ ಡೆವಲಪ್‍ಮೆಂಟ್ ಪ್ರೋಗ್ರಾಂನ ಜತೆಗೆ ವ್ಯಕ್ತಿತ್ವ ವಿಕಸನ ಮತ್ತು ಕೌಶಲ ತರಬೇತಿ ನೀಡಲಾಗುತ್ತದೆ.

ಹೈಬ್ರಿಡ್ ಮಾಡೆಲ್ ಆಧರಿಸಿದ ಆನ್‍ಲೈನ್ ಮತ್ತು ತರಗತಿ ಆಧಾರಿತ ತರಬೇತಿ ನೀಡಲಾಗುವುದು, ಸಮಗ್ರ ತರಬೇತಿಯಿಂದ ಐಟಿ ವಲಯಕ್ಕೆ ಅಗತ್ಯವಿರುವ ಉದ್ಯೋಗ ಸೃಜನೆಯಾಗಲಿವೆ.

ದನಿಯನ್ನು ಅಕ್ಷರ ರೂಪಕ್ಕಿಳಿಸುವ ವಾಯ್ಸ್ ನೋಟ್ App ಬಳಕೆ ಹೇಗೆ?

ಮಸಾಯ್ ಸ್ಕೂಲ್‍ನ ಸಂಸ್ಥಾಪಕರಾದ ಪ್ರತೀಕ್ ಶುಕ್ಲಾ ಮಾತನಾಡಿ, "ಭಾರತವು ಇಂದು ಐಟಿ ಉದ್ಯೋಗಸೃಜನೆಯಲ್ಲಿ ವಿಶ್ವದಲ್ಲೇ ಅತಿದೊಡ್ಡ ದೇಶವಾಗಿದ್ದು, ಅದು ಬೆಳೆಯುತ್ತಲೇ ಇದೆ. ಪ್ರತಿವರ್ಷ ಸಾವಿರಾರು ಎಂಜಿನಿಯರಿಂಗ್ ಕಾಲೇಜುಗಳಿಂದ ಲಕ್ಷಾಂತರ ಪದವೀಧರರು ಹೊರಬರುತ್ತಿದ್ದಾರೆ.

ಆದರೆ, ವಾಸ್ತವದಲ್ಲಿ ಅರ್ಧದಷ್ಟು ಮಂದಿಗೂ ಉದ್ಯೋಗ ಸಿದ್ಧವಿಲ್ಲ. ಶಿಕ್ಷಣ ಸಂಸ್ಥೆಗಳು ನುರಿತ ಕೌಶಲಕ್ಕಿಂತ ಕೇವಲ ಶಿಕ್ಷಣಕ್ಕಷ್ಟೇ ಆದ್ಯತೆ ನೀಡುತ್ತಿರುವುದರಿಂದ ಕೌಶಲದ ಅಂತರ ಹೆಚ್ಚುತ್ತಿದೆ. ಈ ಕಾರಣಕ್ಕಾಗಿ ನಾವು ಮಸಾಯ್ ಸ್ಕೂಲ್ ತೆರೆದಿದ್ದೇವೆ. ಈ ನಿಟ್ಟಿನಲ್ಲಿ ಮುಂದೆ ಸಾಗಲು ಕೌಶಲ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ. ನಮ್ಮ ಕೋರ್ಸ್‍ಗಳನ್ನು ಸದ್ಯದ ಉದ್ಯಮದ ಅಗತ್ಯಗಳನ್ನು ಆಧರಿಸಿ ಕೋಡಿಂಗ್ ಪಠ್ಯ ರೂಪಿಸಿ ವಿನ್ಯಾಸಪಡಿಸಿದ್ದೇವೆ" ಎಂದು ತಿಳಿಸಿದರು.

'ಕನ್ನಡ ಪದ' ಶಬ್ದ ಸಂಪತ್ತು ವಿಸ್ತರಣೆಗೆ ಕೈ ಜೋಡಿಸಿ

ಪ್ರತೀಕ್ ಅವರು ಇನ್ನು ಮುಂದುವರೆದು "ಮಸಾಯ್ ತನ್ನ ವಿದ್ಯಾರ್ಥಿಗಳಿಗೆ ಪ್ರತಿ ದಿನ 10 ರಿಂದ 12 ಗಂಟೆ ಅವಧಿಯ ಕೋಡಿಂಗ್ ಕೌಶಲದಲ್ಲಿ ಪರಿಣತರಾಗಿ ರೂಪುಗೊಳ್ಳಲು ಅನುವಾಗುವಂತೆ ಕಾರ್ಪೋರೇಟ್ ವಲಯದ ಕೆಲಸದ ಅನುಭವ ನೀಡಲಿದ್ದೇವೆ. ಕೇವಲ ಕೋಡಿಂಗ್ ಕೌಶಲ ಮಾತ್ರವಲ್ಲದೆ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ನಾವು ಒತ್ತು ನೀಡಲಿದ್ದೇವೆ. ಶಿಕ್ಷಣ ನೀಡುವ ನಾವು ವಿದ್ಯಾರ್ಥಿಗಳಿಗೆ ಕೇವಲ ಏನನ್ನೋ ಕಲಿಸದೇ ಅವರು ಎಲ್ಲವನ್ನು ಕಲಿತಿರಬೇಕು ಎಂಬುದಕ್ಕೇ ಆದ್ಯತೆ ಕೋಡುತ್ತವೆ. ಯಶಸ್ಸಿಗೆ ಶಿಸ್ತು ಅತ್ಯಗತ್ಯ ಎಂಬುದನ್ನು ನಾವು ಬಲವಾಗಿ ನಂಬಿದ್ದೇವೆ. ಮಸಾಯ್ ಸ್ಕೂಲ್ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ ಕೋಡಿಂಗ್ ಜತೆಗೆ ಮಿಲಿಟರಿ ಶಿಸ್ತು ಹೊಂದಿರುವ ಶಾಲೆ ಎಂದು ಹೇಳಬಹುದು" ಎನ್ನುತ್ತಾರೆ.

English summary
Masai School, a seed-funded career-focused startup, today announced the beginning of its operations in India. Masai School offers coding centric learning programs, designed to train and mould learners into skilled and job ready professionals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X