ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ ತ್ರೈಮಾಸಿಕದಲ್ಲಿ ಚೀನಾವನ್ನು ಮೀರಿಸಿ ಭಾರತದ ಆರ್ಥಿಕತೆ ಶೇ.5.4ರಷ್ಟು ಬೆಳವಣಿಗೆ

|
Google Oneindia Kannada News

ನವದೆಹಲಿ, ಫೆಬ್ರವರಿ 28: 2021-2022ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತವು ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 5.4ರಷ್ಟು ಬೆಳವಣಿಗೆ ದರವನ್ನು ದಾಖಲಿಸಿದೆ. ಡಿಸೆಂಬರ್‌ನಲ್ಲಿ ಕೊನೆಗೊಂಡ ತ್ರೈಮಾಸಿಕದ ಡೇಟಾವನ್ನು ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಬಿಡುಗಡೆ ಮಾಡಿದೆ.

ಆದಾಗ್ಯೂ, ಡಿಸೆಂಬರ್‌ನಲ್ಲಿನ ಜಿಡಿಪಿ ಬೆಳವಣಿಗೆಯು ಹಿಂದಿನ ತ್ರೈಮಾಸಿಕದಲ್ಲಿ ದಾಖಲಾದ ಜಿಡಿಪಿಗಿಂತ ಕಡಿಮೆಯಾಗಿದೆ ಎಂದು ಅಂಕಿಅಂಶಗಳು ತಿಳಿಸಿವೆ. ಹಿಂದಿನ ತ್ರೈಮಾಸಿಕದಲ್ಲಿ ದಾಖಲಾದ ದತ್ತಾಂಶಕ್ಕಿಂತ ಡಿಸೆಂಬರ್‌ನಲ್ಲಿ ಜಿಡಿಪಿ ಬೆಳವಣಿಗೆ ಕಡಿಮೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಕೊನೆಗೊಂಡ 2021-22ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಆರ್ಥಿಕತೆಯು 8.4 ಶೇಕಡಾಕ್ಕೆ ಏರಿತ್ತು.

2023ರ ಜಿಡಿಪಿ ಬೆಳವಣಿಗೆ ಶೇ.8-8.5 ನಿರೀಕ್ಷೆ: ಆರ್ಥಿಕ ಸಮೀಕ್ಷೆ2023ರ ಜಿಡಿಪಿ ಬೆಳವಣಿಗೆ ಶೇ.8-8.5 ನಿರೀಕ್ಷೆ: ಆರ್ಥಿಕ ಸಮೀಕ್ಷೆ

ಕಡಿಮೆ ಮೂಲ ಪರಿಣಾಮದಿಂದಾಗಿ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕತೆಯು ಶೇಕಡಾ 20.3 ರಷ್ಟು ಬೆಳೆದಿದೆ. ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ.8.5ರಷ್ಟು ಬೆಳವಣಿಗೆ ಕಂಡಿದೆ.

Indias Economy Grows By 5.4% in December Quarter

ಆದಾಗ್ಯೂ, ಪಿಟಿಐ ವರದಿಯ ಪ್ರಕಾರ, ಚೀನಾದ ಆರ್ಥಿಕತೆಯು ಅಕ್ಟೋಬರ್‌ನಿಂದ ಡಿಸೆಂಬರ್ 2021ರ ನಡುವೆ ಶೇಕಡಾ 4 ರಷ್ಟು ಜಿಡಿಪಿ ಬೆಳೆದಿದೆ.

ಜಿಡಿಪಿ ವಿಸ್ತರಣೆ
ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, 2020-21ರ ಅನುಗುಣವಾದ ಅವಧಿಯಲ್ಲಿ ಜಿಡಿಪಿ ಶೇ.0.7 ರಷ್ಟು ವಿಸ್ತರಿಸಿದೆ. ರಾಷ್ಟ್ರೀಯ ಖಾತೆಗಳ ಎರಡನೇ ಮುಂಗಡ ಅಂದಾಜಿನಲ್ಲಿ, ರಾಷ್ಟ್ರೀಯ ಅಂಕಿಅಂಶ ಕಚೇರಿ 2021-22ರಲ್ಲಿ 8.9 ಶೇಕಡಾ ಬೆಳವಣಿಗೆಯನ್ನು ಯೋಜಿಸಿದೆ.

ಜನವರಿಯಲ್ಲಿ ಬಿಡುಗಡೆಯಾದ ಅದರ ಮೊದಲ ಮುಂಗಡ ಅಂದಾಜಿನಲ್ಲಿ, 2020-21ರಲ್ಲಿ 6.6 ಪ್ರತಿಶತದಷ್ಟು ಸಂಕೋಚನದ ವಿರುದ್ಧ 2021-22ಕ್ಕೆ ಶೇ.9.2ರಷ್ಟು ಬೆಳವಣಿಗೆಯನ್ನು ಯೋಜಿಸಿದೆ.

ಕೋರ್ ವಲಯಗಳ ಬೆಳೆವಣಿಗೆ
ಸೋಮವಾರ ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳ ಪ್ರಕಾರ, ಎಂಟು ಮೂಲಸೌಕರ್ಯ ವಲಯಗಳ ಉತ್ಪಾದನೆಯು ಕಲ್ಲಿದ್ದಲು, ನೈಸರ್ಗಿಕ ಅನಿಲ ಮತ್ತು ಸಿಮೆಂಟ್ ಕೈಗಾರಿಕೆಗಳ ಉತ್ತಮ ಪ್ರದರ್ಶನದಿಂದ ಜನವರಿಯಲ್ಲಿ ಶೇ.1.3ಕ್ಕೆ ಹೋಲಿಸಿದರೆ ಶೇ.3.7ರಷ್ಟು ವಿಸ್ತರಿಸಿದೆ.

ಜನವರಿಯಲ್ಲಿ ಕಚ್ಚಾ ತೈಲ ಮತ್ತು ರಸಗೊಬ್ಬರ ಉತ್ಪಾದನೆಯು ಋಣಾತ್ಮಕ ಬೆಳವಣಿಗೆಯನ್ನು ದಾಖಲಿಸಿದ್ದು, ಡಿಸೆಂಬರ್ 2021ರಲ್ಲಿ ಪ್ರಮುಖ ವಲಯದ ಕೈಗಾರಿಕೆಗಳು ಶೇಕಡಾ 4.1ರಷ್ಟು ಬೆಳೆದಿವೆ.

ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು, ರಸಗೊಬ್ಬರಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಎಂಟು ಮೂಲಸೌಕರ್ಯ ವಲಯಗಳ ಬೆಳವಣಿಗೆಯ ದರವು ಏಪ್ರಿಲ್- ಜನವರಿ ಅವಧಿಯಲ್ಲಿ ಶೇಕಡಾ 11.6 ರಷ್ಟಿತ್ತು, ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಪ್ರತಿಶತ 8.6 ಋಣಾತ್ಮಕ ಬೆಳವಣಿಗೆಯ ವಿರುದ್ಧವಾಗಿದೆ.

ಅಂಕಿಅಂಶಗಳ ಪ್ರಕಾರ ಜನವರಿಯಲ್ಲಿ ಕಲ್ಲಿದ್ದಲು ಉತ್ಪಾದನೆ ಶೇ.8.2, ನೈಸರ್ಗಿಕ ಅನಿಲ ಶೇ.11.7, ರಿಫೈನರಿ ಉತ್ಪನ್ನಗಳು ಶೇ.3.7 ಮತ್ತು ಸಿಮೆಂಟ್ 13.6ರಷ್ಟು ಏರಿಕೆಯಾಗಿದೆ.

2022-23ಕ್ಕೆ ಶೇ.7.8ಕ್ಕೆ ಅಂದಾಜು
ಈ ತಿಂಗಳ ಆರಂಭದಲ್ಲಿ ಆರ್‌ಬಿಐ ತನ್ನ ಹಣಕಾಸು ನೀತಿ ಸಭೆಯಲ್ಲಿ ಹೇಳಿರುವಂತೆ, ಮುಂದಿನ ದಿನಗಳಲ್ಲಿ, ದೇಶೀಯ ಬೆಳವಣಿಗೆ ಸಂಗತಿಗಳು ಕ್ರಮೇಣ ಸುಧಾರಿಸುತ್ತಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ನೈಜ ಜಿಡಿಪಿ ಬೆಳವಣಿಗೆಯನ್ನು 2022-23ಕ್ಕೆ ಶೇ.7.8ಕ್ಕೆ ಎಂದು ಯೋಜಿಸಲಾಗಿದೆ.

ಮೊದಲನೇ ತ್ರೈಮಾಸಿಕ 2022-23ರಲ್ಲಿ ಶೇ.17.2, ಎರಡನೇ ತ್ರೈಮಾಸಿಕದಲ್ಲಿ ಶೇ.7.0, ಮೂರನೇ ತ್ರೈಮಾಸಿಕದಲ್ಲಿ ಶೇ.4.3, ನಾಲ್ಕನೇ ತ್ರೈಮಾಸಿಕದಲ್ಲಿ ಶೇ.4.5ರಷ್ಟು ಅಂದಾಜಿಸಲಾಗಿದೆ. 2022ರ ಜನವರಿಯಿಂದ ಮಾರ್ಚ್​ (2021-22 ನಾಲ್ಕನೇ ತ್ರೈಮಾಸಿಕ) ಜಿಡಿಪಿ ಅಂದಾಜುಗಳ ಮುಂದಿನ ಬಿಡುಗಡೆ (2021-22ರ ನಾಲ್ಕನೇ ತ್ರೈಮಾಸಿಕ) ಮತ್ತು 2021-22ರ ತಾತ್ಕಾಲಿಕ ವಾರ್ಷಿಕ ಅಂದಾಜು 31.05.2022ರಂದು ಬಿಡುಗಡೆ ಆಗುತ್ತದೆ.

English summary
In the third quarter of the financial year 2021-2022, India recorded a growth rate of 5.4 per cent of gross domestic product (GDP).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X