ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರು ಇಟ್ಟಿರುವ ಹಣವೆಷ್ಟು ಗೊತ್ತೇ?

|
Google Oneindia Kannada News

ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಇರಿಸಿರುವ ಹಣದ ಮೊತ್ತ 2020ರಲ್ಲಿ 20 ಸಾವಿರ ಕೋಟಿ ಏರಿಕೆ ಕಂಡಿದೆ.

13 ವರ್ಷಗಳಲ್ಲಿನ ಅತಿ ಹೆಚ್ಚಿನ ಮೊತ್ತ ಇದಾಗಿದೆ. ಈ ಮೊತ್ತವು ಸ್ವಿಸ್ ಬ್ಯಾಂಕ್‌ಗಳು ಸ್ವಿಸ್ ನ್ಯಾಷನಲ್ ಬ್ಯಾಂಕ್‌ಗೆ ನೀಡಿರುವ ಅಧಿಕೃತ ಮಾಹಿತಿ ಇದಾಗಿದೆ. ಬೇರೆ ಬೇರೆ ಹಣಕಾಸು ಉತ್ಪನ್ನಗಳ ಮೂಲಕ ಭಾರತದ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದ ಸ್ವಿಸ್ ಬ್ಯಾಂಕ್‌ಗಳಲ್ಲಿ ಇಷ್ಟು ಮೊತ್ತವನ್ನು ಇರಿಸಿದ್ದಾರೆ.

ಕೊರೊನಾ 2ನೇ ಅಲೆಯಿಂದ ಆರ್‌ಬಿಐಗೆ ಆದ ಉತ್ಪಾದನಾ ನಷ್ಟ ಎಷ್ಟು?ಕೊರೊನಾ 2ನೇ ಅಲೆಯಿಂದ ಆರ್‌ಬಿಐಗೆ ಆದ ಉತ್ಪಾದನಾ ನಷ್ಟ ಎಷ್ಟು?

ಭಾರತೀಯರು ಸ್ವಿಸ್ ಬ್ಯಾಂಕ್‌ಗಳಲ್ಲಿ ಇರಿಸಿರುವ ಹಣವನ್ನು ಕಪ್ಪು ಹಣ ಎಂದು ಕರೆಯಲು ಆಗದು ಎಂಬ ನಿಲುವನ್ನು ಅಧಿಕಾರಿಗಳು ಮೊದಲಿನಿಂದಲೂ ಹೊಂದಿದ್ದಾರೆ.

ನೇರವಾಗಿ ಠೇವಣಿ ರೂಪದಲ್ಲಿ ಇರಿಸಿದ ಮೊತ್ತದಲ್ಲಿ ಇಳಿಕೆ ಆಗಲಿದೆ, ಇವು ಭಾರತದಲ್ಲಿ ವ್ಯಾಪಕವಾಗಿ ಚರ್ಚೆಯಾಗಿರುವ, ಭಾರತೀಯರು ಸ್ವಿಸ್ ಬ್ಯಾಂಕ್‌ಗಳಲ್ಲಿ ಇರಿಸಿದ್ದಾರೆ ಎನ್ನಲಾದ ಕಪ್ಪುಹಣಕ್ಕೆ ಸಂಬಂಧಿಸಿದ ವಿವಿರ ಇದಲ್ಲ.

ಸ್ವಿಟ್ಜರ್‌ಲ್ಯಾಂಡ್‌ನಲ್ಲಿರುವ ಭಾರತೀಯ ನಿವಾಸಿಗಳು ಹೊಂದಿರುವ ಹಣವನ್ನು ಕಪ್ಪು ಹಣ ಎಂದು ಪರಿಗಣಿಸಲಾಗದು ಎಂದು ಸ್ವಿಸ್ ಅಧಿಕಾರಿಗಳು ಹೇಳಿದ್ದಾರೆ. ತೆರಿಗೆ ವಂಚನೆ ಮತ್ತು ತಪ್ಪಿಸಿಕೊಳ್ಳುವಿಕೆ ವಿರುದ್ಧದ ಹೋರಾಟದಲ್ಲಿ ಅವರು ಭಾರತವನ್ನು ಸಕ್ರಿಯವಾಗಿ ಬೆಂಬಲಿಸುತ್ತಾರೆ.

ನ್ಯೂಜಿಲೆಂಡ್, ನಾರ್ವೆ, ಸ್ವೀಡನ್, ಡೆನ್ಮಾರ್ಕ್, ಮಾರಿಷಸ್, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾಗಿಂತ 51ನೇ ಸ್ಥಾನದಲ್ಲಿದೆ. ಬ್ರಿಕ್ಸ್ ರಾಷ್ಟ್ರಗಳಲ್ಲಿ ಚೀನಾ ಮತ್ತು ರಷ್ಯಾಗಿಂತ ಭಾರತ ಕೆಳಗಿದೆ, ಆದರೆ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ಗಿಂತ ಮೇಲಿದೆ.

13 ವರ್ಷಗಳಲ್ಲಿ ಗರಿಷ್ಠ

13 ವರ್ಷಗಳಲ್ಲಿ ಗರಿಷ್ಠ

2006ರಲ್ಲಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತದ ಗರಿಷ್ಠ ಹಣ ಪತ್ತೆಯಾಗಿತ್ತು. ಆಗ 23000 ಕೋಟಿ ರೂ. ಹಣ ಪತ್ತೆಯಾಗಿತ್ತು. ಆದರೆ ನಂತರದ ಬಹುತೇಕ ವರ್ಷಗಳಲ್ಲೇ( 2010, 2013, 2017 ಹೊರತುಪಡಿಸಿ) ಅದು ಇಳಿಕೆಯ ಹಾದಿಯಲ್ಲೇ ಸಾಗಿತ್ತು. 2019ರಲ್ಲಿ ಹೀಗೆ ಇಡಲಾಗಿದ್ದ ಹಣದ ಮೊತ್ತ 6625 ಕೋಟಿ ರೂ. ಆಗಿತ್ತು. ಆದರೆ ಇದೀಗ ಬಿಡುಗಡೆ ಮಾಡಿರುವ 2020ರ ಅಂಕಿ ಅಂಶಗಳ ಅನ್ವಯ ಹೀಗೆ ಇಟ್ಟಿರುವ ಹಣ 20700 ಕೋಟಿ ರೂ.ಗೆ ತಲುಪಿದೆ.

ಇದು 13 ವರ್ಷಗಳಲ್ಲಿ ಇಡಲಾದ ಅತಿಹೆಚ್ಚಿನ ಮೊತ್ತವಾಗಿದ್ದು, ಸ್ವಿಸ್‌ ಬ್ಯಾಂಕ್‌ಗಳು ಈ ಕುರಿತಾಗಿ ಅಧಿಕೃತವಾಗಿ ಸ್ವಿಸ್‌ ನ್ಯಾಷನಲ್‌ ಬ್ಯಾಂಕ್‌ಗೆ ಮಾಹಿತಿಯನ್ನ ನೀಡಿವೆ. ಈ ಮೂಲಕ ಭಾರತೀಯರು ಸ್ವಿಸ್‌ ಬ್ಯಾಂಕ್‌ನಲ್ಲಿ ಇರಿಸಿರುವ ಹಣ 'ಕಪ್ಪು ಹಣ'ವೆಂಬ ವಾದ ಮುಂದುವರಿದಿದ್ದು, ಇದನ್ನ ಅಲ್ಲಿನ ಅಧಿಕಾರಿಗಳು ಹಿಂದಿನಿಂದಲೂ ಒಪ್ಪಿಕೊಳ್ಳಲು ತಯಾರಿಲ್ಲ.

ಬೇರೆ ಬೇರೆ ಹಣಕಾಸು ಉತ್ಪನ್ನಗಳ ಮೂಲಕ ಭಾರತದ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದ ಸ್ವಿಸ್‌ ಬ್ಯಾಂಕ್‌ಗಳಿಗೆ ಇಷ್ಟು ದೊಡ್ಡ ಮೊತ್ತವನ್ನು ಇಡಲಾಗಿದೆ. ಆದರೆ ನೇರವಾಗಿ ಠೇವಣಿ ರೂಪದಲ್ಲಿ ಇರಿಸಿದ ಮೊತ್ತವು ಇಳಿಕೆಯಾಗಿದೆ.

ವೈಯಕ್ತಿಕ ಹಣ

ವೈಯಕ್ತಿಕ ಹಣ

2019ರಲ್ಲಿ ಭಾರತೀಯರು ವೈಯಕ್ತಿಕವಾಗಿ ಇಟ್ಟಿದ್ದ ಹಣದ ಮೊತ್ತದ ಅಂದಾಜು 4500 ಕೋಟಿ ರೂ. ಆಗಿತ್ತು. ಅದೀಗ 4000 ಕೋಟಿ ರೂ. ಆಸುಪಾಸಿಗೆ ಬಂದಿದೆ.

ಎಲ್ಲಾ ಕಪ್ಪುಹಣವಲ್ಲ

ಎಲ್ಲಾ ಕಪ್ಪುಹಣವಲ್ಲ

ಸ್ವಿಸ್‌ಬ್ಯಾಂಕ್‌ಗಳು ಈ ಮೊದಲ ರಹಸ್ಯಕ್ಕೆ ಖ್ಯಾತಿ ಹೊಂದಿದ್ದವು, ಹಾಗಾಗಿ ಮುಂಚೆ ಅಲ್ಲಿ ಇಟ್ಟ ಹಣವನ್ನೆಲ್ಲಾ ಬಹುತೇಕ ಕಪ್ಪು ಹಣ ಎಂದೇ ಗುರುತಿಸಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಸ್ವಿಸ್ ಬ್ಯಾಂಕ್‌ಗಳು ತಮ್ಮ ಬ್ಯಾಂಕ್‌ಗಳಲ್ಲಿ ವಿದೇಶಿಯರು ಇಟ್ಟ ಹಣದ ಮಾಹಿತಿ ಬಹಿರಂಗಪಡಿಸುತ್ತಿವೆ. ಹೀಗೆ ಕಪ್ಪು ಹಣ ಇರುವವರು ಇದೀಗ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಹಣ ಇಡುತ್ತಿಲ್ಲ.

ಎಷ್ಟು ಹಣ

ಎಷ್ಟು ಹಣ

ಬಾಂಡ್, ಸೆಕ್ಯುರಿಟೀಸ್-13,500
ವೈಯಕ್ತಿಕ ಹಣ- 40000
ಇತರೆ ಬ್ಯಾಂಕ್ ಠೇವಣಿ- 3100
ಟ್ರಸ್ಟ್‌ಗಳ ಹೆಸರಲ್ಲಿ- 16.5

English summary
Funds parked by Indian individuals and firms in Swiss banks, including through India-based branches and other financial institutions, jumped to 2.55 billion Swiss francs (over ₹ 20,700 crore) in 2020 on a sharp surge in holdings via securities and similar instruments, though customer deposits fell, annual data from Switzerland's central bank showed on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X