• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

1 ರುಪಾಯಿಗೂ ಚಿನ್ನ ಖರೀದಿಸಬಹುದು, ಹೇಗೆಂದು ಇಲ್ಲಿದೆ ಮಾಹಿತಿ

|
   1 ರೂಪಾಯಿಗೆ ಚಿನ್ನ ಖರೀದಿಸಬಹುದು | ಹೇಗೆ? ಈ ವಿಡಿಯೋ ನೋಡಿ | Oneindia Kannada

   ಬೆಂಗಳೂರು, ಡಿಸೆಂಬರ್ 18: ನಮ್ಮಂತಹವರೆಲ್ಲ ಚಿನ್ನ ಖರೀದಿ ಮಾಡೋದಿಕ್ಕೆ ಆಗುತ್ತಾ? ಎಂದು ನಿಡುಸುಯ್ಯುವವರಿಗೆ ಇಲ್ಲೊಂದು ಸುದ್ದಿ ಇದೆ. ಇದೀಗ ಭಾರತೀಯರು ಕನಿಷ್ಠ ಒಂದು ರುಪಾಯಿಗೆ ಕೂಡ ಚಿನ್ನ ಖರೀದಿ ಮಾಡಬಹುದು. ಚಿಲ್ಲರೆ ಚಿನ್ನ ಮಾರಾಟಗಾರರು ಆನ್ ಲೈನ್ ಮೂಲಕ ಅಷ್ಟು ಪ್ರಮಾಣದಲ್ಲಿ ಮಾರಾಟಕ್ಕೆ ಮುಂದಾಗಿದ್ದಾರೆ.

   ಚಿನ್ನದ ಮಾರಾಟಕ್ಕೆ ಜಗತ್ತಿನ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾದ ಭಾರತದಲ್ಲಿ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಹೀಗೆ ಮಾಡಲಾಗುತ್ತಿದೆ. ಸರಕಾರದ ನಿಯಮಗಳು, ಸ್ಥಳೀಯವಾಗಿ ಏರುತ್ತಿರುವ ಬೆಲೆ ಹಾಗೂ ಯುವ ಗ್ರಾಹಕರಲ್ಲಿ ಆಕರ್ಷಣೆ ಕಳೆದುಕೊಳ್ಳುತ್ತಿರುವುದು ಇವೆಲ್ಲವೂ ಸೇರಿ ಚಿನ್ನಕ್ಕೆ ಬೇಡಿಕೆ ಕಡಿಮೆ ಮಾಡಿದೆ.

   ತಗ್ಗಿದ ಬೇಡಿಕೆ, ಚಿನ್ನದ ಬೆಲೆ ಇಳಿಕೆ, ಬೆಳ್ಳಿ ಬೆಲೆ ಸ್ಥಿರ

   ಯುವ ಸಮೂಹದ ಗ್ರಾಹಕರನ್ನು ಸೆಳೆಯುವ ಸಲುವಾಗಿ, ಇಂಟರ್ ನೆಟ್ ಬಳಕೆ ಹೆಚ್ಚು ಮಾಡುವವರಿಗೆಂದೇ ಆನ್ ಲೈನ್ ಖರೀದಿಗೆ ಆಭರಣ ಮಾರಾಟಗಾರರು ಹೊಂದಿಕೊಳ್ಳುವುದು ಅನಿವಾರ್ಯ ಆಗಿದೆ. "ಅಪಾರ ಸಂಖ್ಯೆಯ ಜನರು ಒಂದು ರುಪಾಯಿಗೆ ಕೂಡ ಚಿನ್ನ ಖರೀದಿಸುತ್ತಿದ್ದಾರೆ" ಎಂದು ಡಿಜಿಟಲ್ ಚಿನ್ನ ವ್ಯಾಪಾರದಲ್ಲಿ ತೊಡಗಿಕೊಂಡ ಸಂಸ್ಥೆಯೊಂದರ ಎಂ.ಡಿ. ಮಾಹಿತಿ ನೀಡಿದ್ದಾರೆ.

   ಒಂದು ಗ್ರಾಮ್ ನಷ್ಟು ಚಿನ್ನವಾದ ಮೇಲೆ ನೇರವಾಗಿ ಪಡೆಯಬಹುದು

   ಒಂದು ಗ್ರಾಮ್ ನಷ್ಟು ಚಿನ್ನವಾದ ಮೇಲೆ ನೇರವಾಗಿ ಪಡೆಯಬಹುದು

   ಆ ಸಂಸ್ಥೆಯು ಫ್ಲಿಪ್ ಕಾರ್ಟ್ ಹಾಗೂ ಫೋನ್ ಪೇಯಂಥ ಆನ್ ಲೈನ್ ಸರ್ವೀಸಸ್ ಗಳ ಜತೆ ಒಪ್ಪಂದ ಮಾಡಿಕೊಂಡು, ಆರಂಭದ ಬೆಲೆಯಲ್ಲಿ ಮಾರಾಟದಲ್ಲಿ ತೊಡಗಿದೆ. ಚಿನ್ನ ಖರೀದಿಗೆ ಅತ್ಯಂತ ಕಡಿಮೆ ಅಪಾಯದ ದಾರಿ ಇದು ಎಂದು ಅವರು ಅಭಿಪ್ರಾಯ ಪಡುತ್ತಾರೆ. ಅಂದಹಾಗೆ ಗ್ರಾಹಕರಿಗೆ ನೇರವಾಗಿ ಚಿನ್ನವೇ ದೊರೆಯಬೇಕು ಅಂದರೆ ಒಂದು ಗ್ರಾಮ್ ಗೆ ಆಗುವಷ್ಟು ಮೊತ್ತವನ್ನು ಅವರು ಪಾವತಿಸಿರಬೇಕು. ಸದ್ಯಕ್ಕೆ ಒಂದು ಗ್ರಾಮ್ ಬೆಲೆ 3200 ರುಪಾಯಿ ಹತ್ತಿರದಲ್ಲಿದೆ. ಸಾಂಪ್ರದಾಯಿಕವಾಗಿ ಚಿನ್ನ ಖರೀದಿ ಅಂದರೆ ಕನಿಷ್ಠ ಒಂದು ಗ್ರಾಮ್ ಖರೀದಿ ಮಾಡಲೇಬೇಕು ಎಂದಿದೆ. ಜತೆಗೆ ಆನ್ ಲೈನ್ ನಲ್ಲಿ ಖರೀದಿ ವ್ಯವಹಾರ ನಲವತ್ತು ಸೆಕೆಂಡ್ ನಲ್ಲಿ ಮುಗಿದುಹೋಗುತ್ತದೆ. ಆದರಿಂದ ಆನ್ ಲೈನ್ ವ್ಯವಹಾರ ಕುದುರಿಕೊಳ್ಳುತ್ತಿದೆ.

   ಮೂವತ್ತು ಲಕ್ಷಕ್ಕೂ ಹೆಚ್ಚು ಮಂದಿ ವ್ಯವಹಾರ

   ಮೂವತ್ತು ಲಕ್ಷಕ್ಕೂ ಹೆಚ್ಚು ಮಂದಿ ವ್ಯವಹಾರ

   ಕಳೆದ ವರ್ಷ ಇದು ಆರಂಭವಾಗಿದೆ. ಮೂವತ್ತು ಲಕ್ಷಕ್ಕೂ ಹೆಚ್ಚು ಮಂದಿ ಈ ಮೂಲಕ ವ್ಯವಹಾರ ಮಾಡಿದ್ದಾರೆ. ಈ ಸಂಖ್ಯೆಯನ್ನು ಒಂದೂವರೆ ಕೋಟಿಗೆ ಹೆಚ್ಚಿಸುವ ಗುರಿ ಇದೆ. ದೇಶದಲ್ಲಿ ಒಟ್ಟಾರೆ ಖರೀದಿಸುವ ಚಿನ್ನದ ಪ್ರಮಾಣ ಗಮನಿಸಿದರೆ ಈಗಿನ ಮಾರುಕಟ್ಟೆ ವಿಸ್ತರಣೆಗೆ ಬಹಳ ದೊಡ್ಡ ಅವಕಾಶ ಇದೆ. ಸೆಪ್ಟೆಂಬರ್ ತಿಂಗಳ ಕೊನೆಗೆ ದೇಶದಲ್ಲಿ 524 ಟನ್ ಚಿನ್ನ ಖರೀದಿ ಮಾಡಲಾಗಿದೆ.

   ನೂರು ಮಿಲಿಗ್ರಾಮ್ ಕೂಡ ಖರೀದಿ ಮಾಡಬಹುದು

   ನೂರು ಮಿಲಿಗ್ರಾಮ್ ಕೂಡ ಖರೀದಿ ಮಾಡಬಹುದು

   ಸೇಫ್ ಗೋಲ್ಡ್, ಆಗ್ ಮಂಟ್ ಎಂಟರ್ ಪ್ರೈಸಸ್, ಪೇಟಿಎಂ ಇತರೆ ಆನ್ ಲೈನ್ ವ್ಯವಹಾರದ ಮೂಲಕ ಖರೀದಿಸಬಹುದು. ಆಗ್ ಮಂಟ್ ನಿಂದ ಚಿನ್ನ ಹಾಗೂ ಬೆಳ್ಳಿ ನಾಣ್ಯ ಅಥವಾ ಗಟ್ಟಿಯನ್ನು ಕನಿಷ್ಠ ನೂರು ಮಿಲಿಗ್ರಾಮ್ ಲೆಕ್ಕದಲ್ಲಿ ಕೂಡ ಮಾರಾಟ ಮಾಡಲಾಗುತ್ತದೆ. ಯುವ ಸಮೂಹವು ಅಂಗಡಿಗಳಿಗೆ ಹೋಗಿ ಖರೀದಿಸುವ ಬದಲು ಆನ್ ಲೈನ್ ನಲ್ಲೇ ಖರೀದಿಸಲು ಬಯಸುತ್ತದೆ.

   ಐವತ್ತು ಕೋಟಿಗೂ ಹೆಚ್ಚು ಮಂದಿ ಆನ್ ಲೈನ್ ವ್ಯವಹಾರಕ್ಕೆ

   ಐವತ್ತು ಕೋಟಿಗೂ ಹೆಚ್ಚು ಮಂದಿ ಆನ್ ಲೈನ್ ವ್ಯವಹಾರಕ್ಕೆ

   ಇಂಟರ್ ನೆಟ್ ನ ಬಳಕೆ ಭಾರತದಲ್ಲಿ ಹೆಚ್ಚಾಗುತ್ತಿದ್ದು, ಐವತ್ತು ಕೋಟಿಗೂ ಹೆಚ್ಚು ಮಂದಿ ಆನ್ ಲೈನ್ ವ್ಯವಹಾರಕ್ಕೆ ಬರುವ ಸಾಧ್ಯತೆಗಳು ಹೆಚ್ಚಿವೆ. ಇ ಕಾಮರ್ಸ್ ವ್ಯವಹಾರಗಳನ್ನು ದೊಡ್ಡ ಮಟ್ಟಕ್ಕೆ ವಿಸ್ತರಣೆ ಮಾಡುವುದಕ್ಕೆ ಅವಕಾಶಗಳು ವಿಪುಲವಾಗಿವೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

   English summary
   Indians are buying gold for as little as one rupee as retailers offer online sales in bite-sized portions to prop up shrinking demand in the world’s second-biggest consumer. Demand for gold is falling, partly as a result of government measures, higher local prices and the metal’s fading appeal among more youthful customers.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X