ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವರ್ಷದಲ್ಲಿ ಬಹುತೇಕ ಟೆಲಿಕಾಂ ಕಂಪನಿಯ ಪ್ಲ್ಯಾನ್‌ಗಳು ಶೇ 20ರಷ್ಟು ದುಬಾರಿ!

|
Google Oneindia Kannada News

ನವದೆಹಲಿ, ಡಿಸೆಂಬರ್ 15: ಹೊಸ ವರ್ಷ ಬರುವ ಮೊದಲು ನೀವು ರೀಚಾರ್ಚ್ ಮಾಡಿದ್ರೆ ಉತ್ತಮ, ಏಕೆಂದರೆ ಶೀಘ್ರದಲ್ಲಿ ಯೋಜನೆಗಳ ದರಗಳು ಹೆಚ್ಚಾಗಲಿದೆ. 2021 ರಲ್ಲಿ ವಿವಿಧ ಟೆಲಿಕಾಂ ಕಂಪನಿಗಳ ಯೋಜನೆಗಳು ಶೇಕಡಾ 20ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಡಿಸೆಂಬರ್ 31 ರೊಳಗೆ ಎಲ್ಲಾ ಕಂಪನಿಗಳು ತಮ್ಮ ಹೊಸ ದರದ ಯೋಜನೆಯನ್ನು ಪ್ರಕಟಿಸಲಿವೆ ಎಂದು ಹೇಳಲಾಗುತ್ತಿದೆ. ಏಕೆಂದರೆ 2019 ರ ಡಿಸೆಂಬರ್‌ನಲ್ಲಿ ರಿಲಯನ್ಸ್ ಜಿಯೋ, ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್ ತಮ್ಮ ಯೋಜನೆಗಳ ದರವನ್ನು ಹೆಚ್ಚಿಸಿದ್ದವು ಎಂಬುದನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಅದರ ಹೊರತಾಗಿಯೂ ಪ್ರಸ್ತುತ ಇರುವ ಯೋಜನೆಗಳ ಬೆಲೆ ಸಮಂಜಸವಾಗಿಲ್ಲ ಎಂದು ಟೆಲಿಕಾಂ ಕಂಪನಿಗಳು ಟ್ರಾಯ್‌ಗೆ ದೂರಿವೆ. ಇದರಿಂದಾಗಿ ಕಂಪನಿಗೆ ನಷ್ಟವಾಗುತ್ತಿದೆ ಎಂದು ಹೇಳಿವೆ.

ಲಾಕ್‌ಡೌನ್ ಕಾಲ: ಏಪ್ರಿಲ್‌ನಿಂದ ನಿತ್ಯದ ಸ್ಮಾರ್ಟ್‌ಫೋನ್ ಬಳಕೆ ಶೇ.25ರಷ್ಟು ಹೆಚ್ಚಳಲಾಕ್‌ಡೌನ್ ಕಾಲ: ಏಪ್ರಿಲ್‌ನಿಂದ ನಿತ್ಯದ ಸ್ಮಾರ್ಟ್‌ಫೋನ್ ಬಳಕೆ ಶೇ.25ರಷ್ಟು ಹೆಚ್ಚಳ

ವೊಡಾಫೋನ್ ಐಡಿಯಾ ಈಗಾಗಲೇ ತನ್ನ ಎರಡು ಪೋಸ್ಟ್‌ ಯೋಜನೆಗಳ ಬೆಲೆಯನ್ನು 50 ರೂ. ಹೆಚ್ಚಿಸಿದೆ. ವೊಡಾಫೋನ್ ಐಡಿಯಾದ 598 ರೂ.ಗಳ ಪೋಸ್ಟ್‌ಪೇಯ್ಡ್‌ ಯೋಜನೆ ಈಗ 649 ರೂಗಳಾಗಿದ್ದರೆ, 749 ರೂ.ಗಳ ಯೋಜನೆಯ ಬೆಲೆಯನ್ನು ಈಗ 799 ರೂ.ಗೆ ಹೆಚ್ಚಿಸಲಾಗಿದೆ.

Indian Telecom Companies Tariff Hike Likely Before March 2021

ಇತರೆ ಟೆಲಿಕಾಂ ಕಂಪನಿಗಳು ಸಹ ಟ್ರಾಯ್ ಅನುಮತಿಸಿದರೆ ಯೋಜನೆಯ ಕನಿಷ್ಠ ಬೆಲೆಯನ್ನು ನಿಗದಿಪಡಿಸಲಾಗುತ್ತದೆ. ಅದರ ನಂತರ ಯಾವುದೇ ಕಂಪನಿಯ ಯೋಜನೆ ಆ ನಿಗದಿತ ಬೆಲೆಗಿಂತ ಕಡಿಮೆಯಾಗುವುದಿಲ್ಲ.

ವರದಿಯ ಪ್ರಕಾರ, ಟೆಲಿಕಾಂ ಕಂಪನಿಗಳ ಹೊಸ ಯೋಜನೆಗಳು ಹೊಸ ವರ್ಷದಲ್ಲಿ ಶೇ. 15 ರಿಂದ 20 ರಷ್ಟು ಹೆಚ್ಚಾಗಬಹುದು. ಅಂದರೆ, ಒಂದು ಯೋಜನೆ 100 ರೂಪಾಯಿಗಳಾಗಿದ್ದರೆ, ಅದಕ್ಕಾಗಿ ನೀವು 115 ಅಥವಾ 120 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

English summary
Mobile users may see their bill going up in 2021. While it's not clear when the price cuts may happen, all three telecom companies have been requesting the TRAI to announce floor prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X