ಭಾರತದ ಟೆಕ್ ಸ್ಟಾರ್ಟ್ಅಪ್ಗಳು ಮುಂದಿನ 6 ತಿಂಗಳಲ್ಲಿ ಕೋವಿಡ್ ಪೂರ್ವ ಆದಾಯಗಳಿಸುವ ನಿರೀಕ್ಷೆ
ನವದೆಹಲಿ, ನವೆಂಬರ್ 26: ಭಾರತದ ಟೆಕ್ ಸ್ಟಾರ್ಟ್ಅಪ್ಗಳು ಬಹುತೇಕ ಚೇತರಿಕೆ ಹಾದಿಗೆ ಮರಳಿದ್ದು, ಶೇಕಡಾ 50ರಷ್ಟು ಕಂಪನಿಗಳ ಹೇಳಿಕೆ ಪ್ರಕಾರ ಮುಂದಿನ ಆರು ತಿಂಗಳಿನಲ್ಲಿ ಕೋವಿಡ್-19 ಪೂರ್ವ ಆದಾಯಗಳಿಸುವ ಸಾಧ್ಯತೆಯನ್ನು ಹೊಂದಿವೆ ಎಂದು ನಾಸ್ಕಾಂ ಸಮೀಕ್ಷೆ ಬುಧವಾರ ತಿಳಿಸಿದೆ.
ಆದಾಯಗಳಿಕೆಯಲ್ಲಿ ಚೇತರಿಕೆ ಕಾಣುತ್ತಿರುವುದನ್ನು ಗಮನಿಸಿದರೆ, ಸ್ಟಾರ್ಟ್ಅಪ್ಗಳಲ್ಲಿ ಹಣದ ಲಭ್ಯತೆಯು ಕಾಣಸಿಗುತ್ತಿದೆ. ಹೀಗಾಗಿ ಬಹುತೇಕ ಟೆಕ್ ಸ್ಟಾರ್ಟ್ಅಪ್ಗಳು ಬೇಗನೆ ಚೇತರಿಕೆ ಕಾಣಲಿವೆ ಎಂದು ತನ್ನ 'ನಾಸ್ಕಾಂ ಸ್ಟಾರ್ಟ್-ಅಪ್ ಪಲ್ಸ್ ಸರ್ವೆ II'' ನಲ್ಲಿ ಪ್ರಕಟಿಸಿದೆ.
ಮೋದಿ 'ಮನ್ ಕಿ ಬಾತ್' ಕಾರ್ಯಕ್ರಮದಿಂದ ಸರ್ಕಾರಕ್ಕೆ ಕೋಟಿ ಕೋಟಿ ಹಣ
ಏಪ್ರಿಲ್-ಮೇ 2020ರಲ್ಲಿ ಮೊದಲ ಸಮೀಕ್ಷೆ ಕೈಗೊಂಡಿದ್ದ ನಾಸ್ಕಾಂ ಪ್ರಸ್ತುತ ಉದ್ಯಮವಲಯದ ಪರಿಸ್ಥಿತಿಯನ್ನು ಆಧರಿಸಿ ಮುಂದಿನ ಆರು ತಿಂಗಳಲ್ಲಿ ಶೀಘ್ರ ಬದಲಾವಣೆ ಕಂಡುಬರುವುದನ್ನು ಗುರುತಿಸಿದೆ. ಇದರಲ್ಲಿ ಶೇ. 43 ಭಾಗದಷ್ಟು ಸ್ಟಾರ್ಟ್ಅಪ್ಗಳ ಆದಾಯ ಚೇತರಿಕೆಗೆ ಆರು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಆರಂಭಿಕ ಸಮೀಕ್ಷೆ ತಿಳಿಸಿತ್ತು.
ಸಮೀಕ್ಷೆ ಪ್ರಕಾರ ಟೆಕ್ ಸ್ಟಾರ್ಟ್ಅಪ್ಗಳಲ್ಲಿ ಸಾಹಸೋದ್ಯಮ ಬಂಡವಾಳ ಪ್ರವೃತ್ತಿ ಹೆಚ್ಚಿದ್ದು, ಧನಸಹಾಯ ಮಾಡುವ ಏಜೆನ್ಸಿಗಳು ಹೆಚ್ಚಿನ ಹಣವನ್ನು ಸರಾಗವಾಗಿ ತಲುಪಿಸಿವೆ. ಸರ್ಕಾರದ ಪ್ರೇರಿತ ಆತ್ಮನಿರ್ಬರ್ ಭಾರತ್, ಡಿಜಿಟಲ್ ಇಂಡಿಯಾದಂತಹ ಕ್ರಮಗಳು ಏಜೆನ್ಸಿಗಳು ಟೆಕ್ ಸ್ಟಾರ್ಟ್ಅಪ್ ಕಡೆಗೆ ಹೆಚ್ಚಿನ ಆಸಕ್ತಿ ತೋರುವಂತೆ ಮಾಡಿವೆ ಎಂದು ನಾಸ್ಕಾಂ ಸಮೀಕ್ಷೆ ಹೇಳಿದೆ.