ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಪಾತಕ್ಕೆ ಕುಸಿತ ರೂಪಾಯಿ, ಷೇರುಪೇಟೆ ತಲ್ಲಣ

|
Google Oneindia Kannada News

ನವದೆಹಲಿ, ಸೆ. 22: ಕೇಂದ್ರ ಸರಕಾರ ರೂಪಾಯಿ ಕುಸಿತವನ್ನು ತಡೆಯಲು ಏನೇ ಸರ್ಕಸ್ ಮಾಡಿದರೂ ಉಪಯೋಗವಾದಂತಿಲ್ಲ. ರೂಪಾಯಿ ಕುಸಿತ ಸಾರ್ವಕಾಲಿಕ ಕೆಳಮಟ್ಟಕ್ಕೆ ಕುಸಿದಿದೆ. ಮೊದಲ ಬಾರಿಗೆ ಡಾಲರ್ ಎದುರು 80 ರೂ ಮಟ್ಟಕ್ಕೆ ಕುಸಿದಿದೆ. ಗುರುವಾರದ ಬೆಳಗ್ಗೆ ಫೋರೆಕ್ಸ್ ಮಾರುಕಟ್ಟೆಯಲ್ಲಿ ಒಂದು ಡಾಲರ್ ಎದುರು ರೂಪಾಯಿ ದರ 80.4875 ದಷ್ಟು ಚಲಾವಣೆ ಆಗಿತ್ತು. ಬಹುತೇಕ 42 ಪೈಸೆಯಷ್ಟು ರೂಪಾಯಿ ದರ ಇಳಿದಿದೆ.

ಇದೇ ವೇಳೆ, ಡಾಲರ್ ಕರೆನ್ಸಿ ಲಕಲಕ ಹೊಳೆಯುವುದು ಹೆಚ್ಚಾಗಿದೆ. ಡಾಲರ್ ಇಂಡೆಕ್ಸ್ ಮೌಲ್ಯ ಶೇ. 0.2ರಷ್ಟು ಹೆಚ್ಚಾಗಿದ್ದು, 111.72ಕ್ಕೆ ಏರಿದೆ. ಇದು ಕಳೆದ 20 ವರ್ಷದಲ್ಲೇ ಡಾಲರ್ ಇಂಡೆಕ್ಸ್ ಏರಿದ ಗರಿಷ್ಠ ಮಟ್ಟವಾಗಿದೆ.

ಸೆಪ್ಟೆಂಬರ್ 22ರಂದು ಪ್ರಮುಖ ನಗರದಲ್ಲಿ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ?ಸೆಪ್ಟೆಂಬರ್ 22ರಂದು ಪ್ರಮುಖ ನಗರದಲ್ಲಿ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ?

ಡಾಲರ್ ಕರೆನ್ಸಿ ದಿನೇ ದಿನೇ ಬಲವೃದ್ಧಿಸಿಕೊಳ್ಳುತ್ತಿರುವುದು ರೂಪಾಯಿಗೆ ಸಂಕಷ್ಟ ತಂದಿದೆ ಎಂಬುದು ತಜ್ಞರು ಗಮನಿಸಿರುವ ಒಂದು ಪ್ರಮುಖ ಅಂಶ. ಹಾಗೆಯೇ, ಅಮೆರಿಕದ ಕೆಲ ಬ್ಯಾಂಕುಗಳು ಡಾಲರ್ ನಗದು ಹಣವನ್ನು ತಮ್ಮ ದೇಶದ ಹಣಕಾಸು ವ್ಯವಸ್ಥೆಗೆ ವಾಪಸ್ ತರುವ ಕಾರ್ಯ ಮಾಡುತ್ತಿವೆ. ಇದರಿಂದಾಗಿ ಡಾಲರ್‌ಗೆ ವಿಪರೀತ ಬೇಡಿಕೆ ಹೆಚ್ಚಾಗಿದೆ. ರೂಪಾಯಿ ಮೌಲ್ಯ ಕುಸಿಯಲು ಇದೂ ಒಂದು ಕಾರಣ ಎನ್ನಲಾಗಿದೆ.

ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆಗಿರುವ ಫೆಡರಲ್ ಬ್ಯಾಂಕ್ ಇಂದು ಗುರುವಾರ ಬಡ್ಡಿ ದರಗಳನ್ನು 75 ಮೂಲಾಂಕಗಳಷ್ಟು ಏರಿಕೆ ಮಾಡಿದ ಬೆನ್ನಲ್ಲೇ ಜಾಗತಿಕ ಷೇರುಪೇಟೆ, ಫೋರೆಕ್ಸ್ ಮಾರುಕಟ್ಟೆಗಳಲ್ಲಿ ಸಂಚಲನ ನಡೆದಿದೆ. ಅಮೆರಿಕದಲ್ಲಿ ಹಣದುಬ್ಬರ ಏರುತ್ತಿರುವುದನ್ನು ತಡೆಯಲು ಅಲ್ಲಿನ ಫೆಡರಲ್ ಬ್ಯಾಂಕ್ ಇಷ್ಟು ದೊಡ್ಡ ಪ್ರಮಾಣದಲ್ಲಿ ಬಡ್ಡಿ ದರ ಹೆಚ್ಚಿಸಲು ಕಾರಣ.

ಸಂತೆಯ ಚಿಂತೆ: ಭಾರತದಲ್ಲಿ ಡಬಲ್-ತ್ರಿಬಲ್ ಆಗಿದ್ದು ಹೇಗೆ ದಿನಸಿ ಬೆಲೆ?ಸಂತೆಯ ಚಿಂತೆ: ಭಾರತದಲ್ಲಿ ಡಬಲ್-ತ್ರಿಬಲ್ ಆಗಿದ್ದು ಹೇಗೆ ದಿನಸಿ ಬೆಲೆ?

ಕುತೂಹಲ ಎಂದರೆ ಅಮೆರಿಕದ ಆರ್ಥಿಕತೆ ಹಿನ್ನಡೆ ಅನುಭವಿಸುವ ಮತ್ತು ಜಾಗತಿಕ ಅಭಿವೃದ್ಧಿ ಸಾಧಿಸುವ ಸಾಧ್ಯತೆ ತೋರುತ್ತಿರುವ ಹಿನ್ನೆಲೆಯಲ್ಲಿ ಡಾಲರ್ ಮೇಲೆ ಹೂಡಿಕೆ ಮಾಡುವುದು ಸುರಕ್ಷಿತವೆಂಬ ಭಾವನೆ ಇದೆ. ಹೀಗಾಗಿ, ಡಾಲರ್‌ಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಜಾಗತಿಕ ಹಣಕಾಸು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 ಕುಸಿದಿರುವುದು ರೂಪಾಯಿ ಮಾತ್ರವಲ್ಲ

ಕುಸಿದಿರುವುದು ರೂಪಾಯಿ ಮಾತ್ರವಲ್ಲ

ಭಾರತದ ರೂಪಾಯಿ ಮಾತ್ರವಲ್ಲ ವಿಶ್ವದ ಇತರ ಪ್ರಮುಖ ಕರೆನ್ಸಿ ಮೌಲ್ಯಗಳೂ ಹಿನ್ನಡೆ ಅನುಭವಿಸುತ್ತಿವೆ. ಬ್ರಿಟಿಷ್ ಪೌಂಡ್ ಕರೆನ್ಸಿ ಕಳೆದ 37 ವರ್ಷದಲ್ಲೇ ಅತ್ಯಂತ ಕಡಿಮೆ ಮೌಲ್ಯಕ್ಕೆ ಇಳಿಕೆ ಕಂಡಿದೆ. ಚೀನಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸಿಂಗಾಪುರದ ಕರೆನ್ಸಿಗಳು ಎರಡು ವರ್ಷಗಳ ಕೆಳಮಟ್ಟಕ್ಕೆ ಕುಸಿತ ಕಂಡಿವೆ.

 ಡಾಲರ್ ಇಂಡೆಕ್ಸ್ ಏನು?

ಡಾಲರ್ ಇಂಡೆಕ್ಸ್ ಏನು?

ಡಾಲರ್ ಇಂಡೆಕ್ಸ್, ಅಥವಾ ಡಾಲರ್ ಸೂಚ್ಯಂಕ ಎಂಬುದು ನಿರ್ದಿಷ್ಟ ವಿದೇಶೀ ಕರೆನ್ಸಿಗಳ ಗುಂಪಿಗೆ ಸಂಬಂಧಿಸಿ ಡಾಲರ್ ಮೌಲ್ಯವಾಗಿದೆ. ಸದ್ಯ ಈ ವಿದೇಶೀ ಕರೆನ್ಸಿಗಳ ಗುಂಪಿನಲ್ಲಿ ಯೂರೋ, ಸ್ವಿಸ್ ಫ್ರಾಂಕ್, ಜಪಾನೀಸ್ ಯೆನ್, ಕೆನಡಿಯನ್ ಡಾಲರ್, ಬ್ರಿಟಿಷ್ ಪೌಂಡ್ ಮತ್ತು ಸ್ವೀಡಿಶ್ ಕ್ರೋನಾ ಈ 6 ಕರೆನ್ಸಿಗಳು ಯುಎಸ್ ಡಾಲರ್ ಇಂಡೆಕ್ಸ್‌ನ ವಿದೇಶೀ ಕರೆನ್ಸಿಗಳ ಬ್ಯಾಸ್ಕೆಟ್‌ನಲ್ಲಿವೆ.

ಈ ವಿದೇಶೀ ಕರೆನ್ಸಿ ಗುಂಪಿನಲ್ಲಿ ಯೂರೋ ಕರೆನ್ಸಿ ಪಾಲು ಶೇ. 57.6ರಷ್ಟು ಇದೆ. ನಂತರ ಮಟ್ಟದಲ್ಲಿ ಯೆನ್ (ಶೇ. 13.6), ಬ್ರಿಟಿಷ್ ಪೌಂಡ್ (ಶೇ. 11.9), ಕೆನಡಿಯನ್ ಡಾಲರ್ (ಶೇ. 9.1), ಸ್ವೀಡಿಷ್ ಕ್ರೋನಾ (ಶೇ. 4.2) ಮತ್ತು ಸ್ವಿಸ್ ಫ್ರಾಂಕ್ (ಶೇ. 3.6) ಇವೆ.

ಈ ಆರು ಕರೆನ್ಸಿಗಳ ಎದುರು ಯುಎಸ್ ಡಾಲರ್‌ನ ಸರಾಸರಿ ಮೌಲ್ಯ ಎಷ್ಟು ಎಂಬುದು ಡಾಲರ್ ಇಂಡೆಕ್ಸ್‌ನಿಂದ ವೇದ್ಯವಾಗುತ್ತದೆ. ಯೂರೋಪ್‌ನ ಹಲವು ದೇಶಗಳು ಸೇರಿ ರೂಪಿಸಿರುವ ಯೂರೋ ಕರೆನ್ಸಿಯ ಮೌಲ್ಯವು ಯುಎಸ್ ಡಾಲರ್ ಮೌಲ್ಯದ ಪ್ರಮುಖ ನಿರ್ಧಾರಕವಾಗುತ್ತದೆ. ಯೂರೋ ಎದುರು ಡಾಲರ್ ಮೇಲುಗೈ ಸಾಧಿಸಿದಷ್ಟೂ ಡಾಲರ್ ಇಂಡೆಕ್ಸ್ ಮೌಲ್ಯ ಸಹಜವಾಗಿ ಹೆಚ್ಚುತ್ತದೆ.

 ಸೌತ್ ಕೊರಿಯಾ ಕರೆನ್ಸಿ ಇನ್ನೂ ಕಳಪೆ

ಸೌತ್ ಕೊರಿಯಾ ಕರೆನ್ಸಿ ಇನ್ನೂ ಕಳಪೆ

ವಿಶ್ವದ ಬಹುತೇಕ ಎಲ್ಲಾ ದೇಶಗಳ ಕರೆನ್ಸಿಗಳು ಡಾಲರ್ ಎದುರು ಮೌಲ್ಯ ಕುಸಿತ ಹೆಚ್ಚಾಗಿದೆ. ದಕ್ಷಿಣ ಕೊರಿಯಾದ ವಾನ್ ಕರೆನ್ಸಿಯಂತೂ ಯುಎಸ್ ಡಾಲರ್ ಎದುರು 1400ಕ್ಕೆ ಇಳಿದಿದೆ. ಅಂದರೆ ಒಂದು ಯುಎಸ್ ಡಾಲರ್‌ಗೆ 1410 ವಾನ್ ಇದೆ. ಚೀನಾದ ಕರೆನ್ಸಿ ಕೂಡ ಇಳಿಕೆ ಕಂಡಿದೆ.

ಇನ್ನೂ ಎರಡು ವರ್ಷ ಇದೇ ಟ್ರೆಂಡ್ ಮುಂದುವರಿಯುವ ಸಾಧ್ಯತೆ ಇದೆ. ಹಣದುಬ್ಬರವನ್ನು ನಿಯಂತ್ರಿಸಲು ಯುಎಸ್ ಫೆಡರಲ್ ಬ್ಯಾಂಕ್ ಕೈಗೊಂಡಿರುವ ಕಠಿಣ ಕ್ರಮಗಳು ತಾತ್ಕಾಲಿಕವಲ್ಲ. ಇದು ಇನ್ನೂ ಒಂದು ಅಥವಾ ಎರಡು ವರ್ಷ ಹೀಗೇ ಮುಂದುವರಿಯಲಿದೆ. ಬಡ್ಡಿದರಗಳನ್ನು ಇನ್ನಷ್ಟು ಹೆಚ್ಚಿಸಿದರೂ ಅಚ್ಚರಿ ಇಲ್ಲ.

 ಸೆನ್ಸೆಕ್ಸ್ ಕುಸಿತ

ಸೆನ್ಸೆಕ್ಸ್ ಕುಸಿತ

ಅಮೆರಿಕದ ಸೆಂಟ್ರಲ್ ಬ್ಯಾಂಕ್ ಬಡ್ಡಿ ದರಗಳನ್ನು ಹೆಚ್ಚಿಸಿರುವ ಜೊತೆಗೆ ರೂಪಾಯಿ ಮೌಲ್ಯ ಕುಸಿದಿರುವುದು ಭಾರತೀಯ ಹೂಡಿಕೆದಾರರಿಗೆ ತುಸು ಭೀತಿ ಸೃಷ್ಟಿಸಿದೆ. ಪರಿಣಾಮವಾಗಿ ಷೇರು ಮಾರುಕಟ್ಟೆಗಳು ಅಲುಗಾಡಿವೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು 450 ಮತ್ತು 150 ಅಂಕಗಳಷ್ಟು ಕುಸಿತ ಕಂಡಿವೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಿಟ್ಟು ಉಳಿದ ಬಹುತೇಕ ಹಣಕಾಸು ಸಂಸ್ಥೆಗಳ ಷೇರುಗಳು ಕುಸಿತ ಕಂಡಿವೆ.

(ಒನ್ಇಂಡಿಯಾ ಸುದ್ದಿ)

English summary
As the US federal bank has rised rates by 75 points to control inflation, the value of rupee has gone down to record low and crossed 80 mark. Indian stock markets too tumbled today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X