ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರಂಭಿಕ ಮಾರಾಟದಲ್ಲಿ ಡಾಲರ್ ಎದುರು 78.59ಕ್ಕೆ ಕುಸಿದ ರೂಪಾಯಿ ಮೌಲ್ಯ

|
Google Oneindia Kannada News

ಮುಂಬೈ ಜೂ.28: ಹೂಡಿಕೆದಾರರ ಮೇಲೆ ವಿದೇಶಿ ನಿಧಿಗಳ ಹರಿವಿನ ಪ್ರಭಾವ ಬೀರಿದ್ದರಿಂದ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ರುಪಾಯಿ ಬೆಲೆ ಕುಸಿತ ಕಂಡಿದೆ.

ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿಯು 22 ಪೈಸೆ ಕುಸಿತ ಕಾಣುವ ಮೂಲಕ 78.59ರೂ ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿದೆ. ಮಾರುಕಟ್ಟೆಯಲ್ಲಿ ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯದಲ್ಲಿ ರುಪಾಯಿಯು ಅಮೆರಿಕನ್ ಡಾಲರ್‌ಗೆ ಎದುರು 78.53 ನಲ್ಲಿ ದುರ್ಬಲ ವಾಗಿ ಆರಂಭವಾಯಿತು. ನಂತರ 78.59 ರೂಪಾಯಿಗೆ ಏರಿಕೆಯನ್ನು ದಾಖಲಿಸುವ ಮುನ್ನವೆ ಕುಸಿತ ಅನುಭವಿಸಿತು. ಇದು ರೂಪಾಯಿಯ ಮುಕ್ತಾಯದಿಂದ 22 ಪೈಸೆಗಳ ಕುಸಿತ ಕಂಡಿತು.

ರೂಪಾಯಿಯ ಮೌಲ್ಯವು ಮಾರುಕಟ್ಟೆಯಲ್ಲಿ ಸೋಮವಾರ 4 ಪೈಸೆಗಳಷ್ಟು ಕುಸಿಯಿತು. ಈ ವೇಳೆ ಯುಎಸ್ ಡಾಲರ್‌ಗೆ ತನ್ನ ಜೀವಿತಾವಧಿಯ ಕನಿಷ್ಠ 78.37 ಕ್ಕೆ ಮುಕ್ತಾಯಗೊಂಡಿತು. ದೇಶೀಯ ಮಾರುಕಟ್ಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆ (ಎಫ್‌ಐಐ) ಗಳ ನಿರಂತರ ವಹಿವಾಟು ರೂಪಾಯಿಯ ಮೇಲೆ ಪರಿಣಾಮ ಬೀರಿದ್ದರಿಂದ ಕುಸಿತ ರೂಪಾಯಿಯ ಮೇಲೆ ಒತ್ತಡವನ್ನು ಉಂಟಾಗಿತು ಎಂದು ಮೆಹ್ತಾ ಈಕ್ವಿಟೀಸ್ ಲಿಮಿಟೆಡ್‌ನ ಸರಕುಗಳ ವಿ.ಪಿ ರಾಹುಲ್ ಕಲಾಂತ್ರಿ ಮಾಹಿತಿ ನೀಡಿದ್ದಾರೆ.

Indian rupee hits record low of 78.59 against US dollar in opening trade

ಷೇರು ಮಾರುಕಟ್ಟೆ ಮೇಲೆ ಯುದ್ಧದ ಪರಿಣಾಮ:

ವಿ.ಪಿ ರಾಹುಲ್ ಕಲಾಂತ್ರಿ ಅವರ ಪ್ರಕಾರ, "ಉಕ್ರೇನ್ ಹಾಗೂ ರಷ್ಯಾದ ಯುದ್ಧದ ನಂತರ ರಷ್ಯಾ ಮೇಲೆ ವಿಧಿಸಲಾದ ಆರ್ಥಿಕ ನಿರ್ಬಂಧಗಳ ಕಾರಣದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಕಚ್ಚಾ ತೈಲ ಬೆಲೆ ಏರಿಕೆ, ಉದಯೋನ್ಮುಖ ಮಾರುಕಟ್ಟೆ ಕರೆನ್ಸಿಗಳ ಮೇಲೆ ಒತ್ತಡವನ್ನು ಉಂಟು ಮಾಡಬಹುದು. ಈ ವಾರ ರೂಪಾಯಿ ಮೌಲ್ಯವು ಅಸ್ಥಿರವಾಗಿರುತ್ತದೆ ಹಾಗೂ ಕುಸಿತದಿಂದ ಮತ್ತೆ 78.55 ಮಟ್ಟವನ್ನು ದಾಟಬಹುದು ಎಂದು ಅಂದಾಜಿಸಲಾಗಿದೆ," ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ ಆರು ಕರೆನ್ಸಿಗಳ ಸಮೂಹದ ವಿರುದ್ಧ ಗ್ರೀನ್‌ಬ್ಯಾಕ್‌ ಸಾಮರ್ಥ್ಯದ ವಿರುದ್ಧ ಡಾಲರ್ ಸೂಚ್ಯಂಕವು ಶೇ. 0.01ರಷ್ಟು ಕಡಿಮೆಯಾಗಿದೆ. ಅದೇ ಸೂಚ್ಯಂಕದ ಆಧಾರದಲ್ಲಿ ಮಾರುಕಟ್ಟೆಯಲ್ಲಿ 103.92 ಮೌಲ್ಯದಲ್ಲೇ ವಹಿವಾಟು ನಡೆಸುತ್ತಿದೆ.

Indian rupee hits record low of 78.59 against US dollar in opening trade

ದೇಶೀಯ ಷೇರು (ಇಕ್ವೀಟಿ) ಮಾರುಕಟ್ಟೆಯಲ್ಲಿ ಷೇರು 30 ಸೆನ್ಸೆಕ್ಸ್ 314.88 ಪಾಯಿಂಟ್‌ಗಳ ಸಹಿತ ಇಲ್ಲವೇ ಶೇ0.59% ರಷ್ಟು ಕಡಿಮೆಯಾಗಿದ್ದಲ್ಲೇ 52,846.40 ಕ್ಕೆ ವಹಿವಾಟು ಸ್ಥಾಪಿಸಿತು. ಆದರೆ ವಿಶಾಲವಾದ ಎನ್‌ಎಸ್‌ಇ ನಿಫ್ಟಿ 101.75 ಪಾಯಿಂಟ್ ಅಥವಾ 0.64 ರಷ್ಟು ಕುಸಿದು 15,730.30 ಕ್ಕೆ ತಲುಪಿದೆ.

ಸೋಮವಾರ ಬಂಡವಾಳ ಮಾರುಕಟ್ಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ನಿವ್ವಳ ಮಾರಾಟಗಾರರಾಗಿದ್ದಾರೆ. ಷೇರು ವಿನಿಮಯದ ಮಾಹಿತಿಯ ಪ್ರಕಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ರೂ. 1,278.42 ಕೋಟಿ ಮೌಲ್ಯದ ಷೇರುಗಳನ್ನು ಆಫ್‌ಲೋಡ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

English summary
The rupee depreciated 22 paise to a record low of 78.59 against the US dollar in opening trade on Tuesday. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X