ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾಲರ್ ಎದುರು ಮತ್ತೆ ದುರ್ಬಲಗೊಂಡ ರುಪಾಯಿ

By Mahesh
|
Google Oneindia Kannada News

ಮುಂಬೈ,ಜೂ.16: ನರೇಂದ್ರ ಮೋದಿ ಅವರ ಮೊದಲ ವಿದೇಶಿ ಯಾತ್ರೆ ನಂತರ ರುಪಾಯಿ ಮತ್ತೆ ಚೇತರಿಸಿಕೊಳ್ಳುತ್ತಾರೆ ಎಂಬ ಆಶಯ ತಣ್ಣಗಾಗಿದೆ. ರೂಪಾಯಿ ಮತ್ತೆ ದುರ್ಬಲಗೊಂಡಿದೆ. ಕಳೆದ ಒಂದು ತಿಂಗಳ ಹಿಂದಿನ ಹಿನ್ನಡೆಯ ಹಾದಿಗೆ ತಲುಪಿದೆ.

ಸೋಮವಾರ ಷೇರು ಪೇಟೆ ಆರಂಭಗೊಳ್ಳುತ್ತಿದ್ದಂತೆ ರೂಪಾಯಿ ಮೌಲ್ಯ ಕ್ಷೀಣಿಸಿ ಪ್ರತಿ ಡಾಲರ್‌ಗೆ 60 ರೂ.ಗೆ ಮುಟ್ಟಿದ್ದು ಇದೇ ವೇಳೆ ಕಚ್ಚಾತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 113 ಡಾಲರ್‌ಗೆ ಮುಟ್ಟಿದೆ. ಇರಾಕ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಉಗ್ರಗಾಮಿ ಸಂಘಟನೆಗಳು ಕೆಲವೊಂದು ನಗರಗಳನ್ನು ಹಿಡಿತಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆ ಒತ್ತಡದಲ್ಲಿದ್ದು, ಅದರಿಂದಾಗಿ ತೈಲ ಬೆಲೆ ಏರಿಕೆಯಾಗುತ್ತಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಶೇಕಡ ಮೂರರಲ್ಲಿ ಎರಡರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತ ಈ ಬೆಲೆ ಏರಿಕೆಯಿಂದ ಸಾಕಷ್ಟು ಆರ್ಥಿಕ ಹೊಡೆತ ಅನುಭವಿಸಲಿದೆ ಎಂದು ಹೇಳಿದ್ದಾರೆ. ಇರಾಕ್ ನಲ್ಲಿರುವ ಸುಮಾರು 15 ಸಾವಿರಕ್ಕೂ ಅಧಿಕ ಭಾರತೀಯರಿಗೆ ಭಾರತಕ್ಕೆ ಮರಳುವಂತೆ ಸೂಚಿಸಲಾಗಿದೆ. [ಏಷ್ಯಾ ಫೆಸಿಫಿಕ್ ನಲ್ಲಿ ಡಾಲರ್ ವಿರುದ್ಧ ರುಪಾಯಿ ಏರಿಕೆ]

Indian rupee breaches 60-mark, ends at six-week low of 60.16

ಕೂಡಲೇ ಆರ್‌ಬಿಐ ಮಧ್ಯಪ್ರವೇಶಿಸಬೇಕೆಂದು ಕೆಲ ಬ್ಯಾಂಕ್‌ಗಳು ಒತ್ತಾಯಿಸಿವೆ. ಇರಾಕ್ ಸಮಸ್ಯೆ ಎಲ್ಲಿಯವರೆಗೂ ಮುಂದುವರೆಯಲಿದೆಯೋ ಅಲ್ಲಿಯ ತನಕ ತೈಲು ಮಾರುಕಟ್ಟೆಯಲ್ಲಿ ಒತ್ತಡ ಮುಂದುವರೆಯಲಿದೆ ಎಂದು ಹೇಳಲಾಗಿದೆ.

ಬಿಎಸ್ ಇ ಸೆನ್ಸೆಕ್ಸ್ 37.69 ಅಂಶಗಳು ಇಳಿಕೆ ಅಥವಾ 0.15 % ಕುಸಿತ ಕಂಡಿದೆ. ಕಳೆದ ಮೇ 5 ರಲ್ಲಿ ಯುಎಸ್ ಡಾಲರ್ ಎದುರು 60.21 ರು ಗೆ ಕುಸಿದಿದ್ದು, ಆದರೆ, ನರೇಂದ್ರ ಮೋದಿ ನೇತೃತ್ವದಲ್ಲಿ ಎನ್ಡಿಎ ಕೇಂದ್ರದಲ್ಲಿ ಅಧಿಕಾರ ಸ್ವೀಕರಿಸಿದ ಮೇಲೆ ಸ್ಥಿರ ಆರ್ಥಿಕತೆಯ ಭರವಸೆ ಮೂಡಿತ್ತು. ಹೀಗಾಗಿ ಷೇರುಪೇಟೆಯಲ್ಲಿ ತಿಂಗಳಲ್ಲಿ ಎರಡು ಬಾರಿ ಸೂಚ್ಯಂಕ 25,000 ಅಂಕಗಳು ದಾಟಿ ಸಂಚಲನ ಮೂಡಿಸಿತ್ತು. ಈಗ ಡಾಲರ್ ಎದುರು ರುಪಾಯಿ ಕುಸಿತ ಕೊಂಚ ಆತಂಕ ಕಾರಿ ಎನಿಸಿದರೂ, ಚೇತರಿಕೆ ಕಾಣುವ ಎಲ್ಲಾ ಲಕ್ಷಣಗಳಿವೆ ಎನ್ನಲಾಗಿದೆ.

English summary
The Indian rupee slipped below 60-mark and closed sharply down by 39 paise at a six-week low of 60.16 against the dollar on sustained demand for the American currency from oil importers, amid rising oil prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X