ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Indian Railways:ಹಣಕಾಸು ವರ್ಷದಲ್ಲಿ ಭಾರತೀಯ ರೈಲ್ವೆ ಇಲಾಖೆ ಗಳಿಸಿದ ಆದಾಯವೇಷ್ಟು ?

|
Google Oneindia Kannada News

ನವದೆಹಲಿ,ಜನವರಿ.21: ಹಣಕಾಸು ವರ್ಷದ ಅಂತ್ಯಕ್ಕೆ ಇನ್ನೂ 71 ದಿನಗಳು ಇನ್ನು ಬಾಕಿ ಇರುವಂತೆ ಭಾರತೀಯ ರೈಲ್ವೆ ಇಲಾಖೆಯು ದಾಖಲೆ ಮೊತ್ತದ ಆದಾಯವನ್ನು ಗಳಿಸುವ ಮೂಲಕ ನೂತನ ಮೈಲುಗಲ್ಲು ತಲುಪಿದೆ.

ಈ ವರ್ಷ ಅಂದರೇ 2023 ಜನವರಿ 19 ರವರೆಗೆ ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರ ಮತ್ತು ಸರಕು ಸಾಗಣೆ ವಿಭಾಗಗಳಿಂದ 1,91,128 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೇ ಈ ಬಾರಿ 42,370 ಕೋಟಿ ರೂಪಾಯಿ ಆದಾಯ ಹೆಚ್ಚಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಜನವರಿ 21ರಂದು 285 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆಜನವರಿ 21ರಂದು 285 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ

2023ರ ಹಣಕಾಸು ವರ್ಷದ ಒಳಗಾಗಿ ಒಟ್ಟು ₹2.4 ಟ್ರಿಲಿಯನ್ ಆದಾಯ ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಇದು 2022ರ ಹಣಕಾಸು ವರ್ಷದ ಪರಿಷ್ಕೃತ ಅಂದಾಜುಗಳಿಗಿಂತ 19% ರಷ್ಟು ವಾರ್ಷಿಕ ಹೆಚ್ಚಳವಾಗಿದೆ. ಹಣಕಾಸು ವರ್ಷ 2023ರಲ್ಲಿ ಸರಕು ಸಾಗಣೆ ಮತ್ತು ಪ್ರಯಾಣಿಕರ ದಟ್ಟಣೆಯಿಂದ ಆದಾಯವು ಹಣಕಾಸು ವರ್ಷ 2022ರ ಪರಿಷ್ಕೃತ ಅಂದಾಜುಗಳಿಗಿಂತ 14% ರಿಂದ 32% ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಇಲಾಖೆ ಅಂದಾಜಿಸಿದೆ.

Indian Railways Accumulated revenue ₹1.91.128crore FY 2023

ಪ್ರಯಾಣಿಕರ ವಿಭಾಗದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 28,569 ಕೋಟಿ ಗಳಿಸಿತ್ತು. ಈಗ ಒಟ್ಟು ಗಳಿಕೆಗಳು ರೂ. 48,913 ಕೋಟಿ ರೂಪಾಯಿ ಗಳಿಸಿದ್ದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೇ ಶೇ.71 ರಷ್ಟು ಏರಿಕೆಯಾಗಲಿದೆ. ಅಲ್ಲದೆ, ಈ ಆರ್ಥಿಕ ವರ್ಷದಲ್ಲಿ ಇದುವರೆಗೆ ಕಾಯ್ದಿರಿಸಿದ ಪ್ರಯಾಣಿಕರ ವಿಭಾಗದಿಂದ ಗಳಿಸಿದ ಆದಾಯವು 56% ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹26,400 ಕೋಟಿ ರೂ. ಹೋಲಿಸಿದರೆ ಈ ಬಾರಿ ₹38,483 ಕೋಟಿ ರೂಪಾಯಿಯಷ್ಟಿದೆ

ಕಾಯ್ದಿರಿಸದ ಪ್ರಯಾಣಿಕರ ವಿಭಾಗದಿಂದ ಏಪ್ರಿಲ್ 1 ಮತ್ತು ಡಿಸೆಂಬರ್ 31 ರ ನಡುವಿನ ಆದಾಯವು 10,430 ಕೋಟಿ ರೂಪಾಯಿಯಾಗಿದೆ. ಕಳೆದ ವರ್ಷದ ಮಾಹಿತಿಯನ್ವಯ ಏಪ್ರಿಲ್‌ನಿಂದ ಡಿಸೆಂಬರ್ 2022 ರ ಅವಧಿಯಲ್ಲಿ ₹ 2,169 ಕೋಟಿ ರೂಪಾಯಿ ಗಳಿಸಿತ್ತು.ಈ ಮೂಲಕ ಕಳೆದ ವರ್ಷಕ್ಕಿಂತ 381% ರಷ್ಟು ಹೆಚ್ಚಳವಾಗಿದೆ ಎಂದು ಭಾರತೀಯ ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.

Indian Railways Accumulated revenue ₹1.91.128crore FY 2023

ಈ ವರ್ಷದಲ್ಲಿ ಅಂದರೇ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 1109.38 MT ಸರಕು ಸಾಗಣೆಯನ್ನು ಸಾಧಿಸಲಾಗಿದೆ. ಕಳೆದ ವರ್ಷ 1029.96 MT ಲೋಡ್‌ಗೆ ಸರಕು ಸಾಗಣೆಯನ್ನು ಮಾಡಿಲಾಗಿದೆ. ಈ ವರ್ಷದ ಅವಧಿಯಲ್ಲಿ ಸುಮಾರು 8% ರಷ್ಟು ಸುಧಾರಣೆಯಾಗಿದೆ ಎಂಬ ಮಾಹಿತಿಯನ್ನು ಇಲಾಖೆ ನೀಡಿದೆ.

2024ರ ಹಣಕಾಸು ವರ್ಷದಲ್ಲಿ ರೈಲು ಬಜೆಟ್ ಅಗತ್ಯವಲ್ಲದ ವೆಚ್ಚವನ್ನು ನಿಗ್ರಹಿಸುವ ಸಂದರ್ಭದಲ್ಲಿ ಸಂಪನ್ಮೂಲಗಳನ್ನು ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಅದರಂತೆ, ಬ್ರಾಡ್ ಗೇಜ್ ಮಾರ್ಗದ 100% ವಿದ್ಯುದೀಕರಣವು 2024ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದು ರೈಲ್ವೆಯ ಇಂಧನ ಬಿಲ್ ಅನ್ನು ಸುಮಾರು 10,000 ಕೋಟಿ ರೂ.ಗಳಷ್ಟು ಕಡಿಮೆ ಮಾಡುತ್ತದೆ.

English summary
Until January 19, 2023, Indian Railways earned an income of Rs 1,91,128 crore in passenger and cargo segments. In comparison with last year, this time the income grew by Rs 42370 crore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X