• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತೀಯ ರೈಲ್ವೆಯಿಂದ 6000 ನಿಲ್ದಾಣಗಳಿಗೆ ವೈ-ಫೈ ಸೌಲಭ್ಯ

|
Google Oneindia Kannada News

ಭಾರತೀಯ ರೈಲ್ವೆಯಿಂದ 6,000ನೇ ರೈಲ್ವೆ ನಿಲ್ದಾಣದಲ್ಲಿ ವೈ-ಫೈ ಸೌಲಭ್ಯ ಕಲ್ಪಿಸಲಾಗಿದೆ. ಭಾರತೀಯ ರೈಲ್ವೆಯ ಪ್ರಯಾಣಿಕರು ಮತ್ತು ಸಾರ್ವಜನಿಕರನ್ನು ಸಂಪರ್ಕಿಸಲು ದೂರದ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯವನ್ನು ವಿಸ್ತರಿಸುತ್ತಿದೆ. ಜಾರ್ಖಂಡ್‌ನ ಹಝಾರಿಬಾದ್‌ನ ಪೂರ್ವ ಕೇಂದ್ರೀಯ ರೈಲ್ವೆಯ ಧನ್ ಬಾದ್ ವಿಭಾಗದ ಹಝಾರಿಬಾದ್ ಪಟ್ಟಣದಲ್ಲಿ ವೈ-ಫೈ ಸೌಲಭ್ಯ ಕಲ್ಪಿಸುವುದರೊಂದಿಗೆ ಭಾರತೀಯ ರೈಲ್ವೆ 6000 ರೈಲು ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ವನ್ನು ಅನುಷ್ಠಾನಗೊಳಿಸಿದೆ.

2016 ರ ಜನವರಿಯಲ್ಲಿ ಮುಂಬೈ ರೈಲ್ವೆ ನಿಲ್ದಾಣದಲ್ಲಿ ಮೊದಲನೇ ವೈ-ಫೈ ಸೌಲಭ್ಯ ಕಲ್ಪಿಸುವುದರೊಂದಿಗೆ ಭಾರತೀಯ ರೈಲ್ವೆ ತನ್ನ ಯಾನ ಆರಂಭಿಸಿತ್ತು. ಇದಾದ ನಂತರ ಪೂರ್ವ ಬಂಗಾಳದ ಮಿಡ್ನಾಪುರದಲ್ಲಿ 5000 ನೇ ರೈಲ್ವೆ ನಿಲ್ದಾಣ ಮತ್ತು ಹಝಾರಿಬಾಗ್ ನಲ್ಲಿ 6000ನೇ ರೈಲ್ವೆ ನಿಲ್ದಾಣದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಇದೇ ದಿನದಂದು ಒಡಿಶಾದ ಅಂಗುಲ್ ಜಿಲ್ಲೆಯ ಜಾರಪದ ನಿಲ್ದಾಣದಲ್ಲಿ ವೈ-ಫೈ ಸೌಲಭ್ಯ ಕಲ್ಪಿಸಲಾಗಿದೆ.

ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ದೊರಕಿಸುವ ಮೂಲಕ ಭಾರತ ಸರ್ಕಾರದ ಡಿಜಿಟಲ್ ಇಂಡಿಯಾದ ಧ್ಯೇಯ ಮತ್ತು ನಿರೀಕ್ಷೆಗಳನ್ನು ಪೂರೈಸುತ್ತಿದೆ. ಗ್ರಾಮೀಣ ಮತ್ತು ನಗರದ ನಾಗರಿಕರ ನಡುವೆ ಇರುವ ಡಿಜಿಟಲ್ ಅಂತರವನ್ನು ತಗ್ಗಿಸುವ, ಗ್ರಾಮೀಣ ಭಾಗದಲ್ಲಿ ಡಿಜಿಟಲ್ ಹೆಜ್ಜೆ ಗುರುತುಗಳನ್ನು ಹೆಚ್ಚಿಸುವ ಮತ್ತು ಬಳಕೆದಾರರ ಅನುಭವವನ್ನು ವೃದ್ಧಿಸುವ ಉದ್ದೇಶವನ್ನು ಇದು ಒಳಗೊಂಡಿದೆ. ಇದೀಗ ಭಾರತೀಯ ರೈಲ್ವೆ 6000 ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ‍್ಯ ಕಲ್ಪಸಿದೆ.

ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯದಿಂದ ರೈಲ್ವೆಗೆ ಯಾವುದೇ ವೆಚ್ಚವಾಗುವುದಿಲ್ಲ, ಸ್ವಯಂ ಸುಸ್ಥಿರತೆ ಆಧಾರದ ಮೇಲೆ ಈ ಸೌಕರ್ಯ ಒದಗಿಸಲಾಗುತ್ತಿದೆ. ರೈಲ್ವೆ ಸಚಿವಾಲಯದ ಸಾರ್ವಜನಿಕ ಸ್ವಾಮ್ಯದ ಉದ್ದಿಮೆ ರೈಲ್ ಟೆಲ್ ನ ನೆರವಿನೊಂದಿಗೆ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ. ಗೂಗಲ್, ಡಿಒಟಿ [ಯೂಸ್ ಅಫ್ ನಡಿ], ಪಿ.ಜಿ.ಸಿ.ಐ.ಎಲ್ ಮತ್ತು ಟಾಟಾ ಟ್ರಸ್ಟ್ ನ ಸಹಭಾಗಿತ್ವದಡಿ ಈ ಸೇವೆ ದೊರೆಯುತ್ತಿದೆ.(ರೈಲ್ವೆ ಇಲಾಖೆ ಪ್ರಕಟಣೆ)

ಕ್ರಮ ಸಂಖ್ಯೆ ರಾಜ್ಯ/ ಕೇಂದ್ರಾಡಳಿತ ಪ್ರದೇಶ ನಿಲ್ದಾಣಗಳ ಸಂಖ‍್ಯೆ
01 ಆಂಧ್ರಪ್ರದೇಶ 509
02 ಅರುಣಾಚಲ ಪ್ರದೇಶ 3
03 ಅಸ್ಸಾಂ 222
04 ಬಿಹಾರ 384
05 ಚಂಡಿಘರ್ 5
06 ಚತ್ತೀಸ್ ಘಡ್ 115
07 ದೆಹಲಿ 27
08 ಗೋವಾ 20
09 ಗುಜರಾತ್ 320
10 ಹರ್ಯಾಣ 134
11 ಹಿಮಾಚಲ ಪ್ರದೇಶ 24
12 ಜಮ್ಮು ಮತ್ತು ಕಾಶ್ಮೀರ 14
13 ಜಾರ್ಖಂಡ್ 217
14 ಕರ್ನಾಟಕ 335
15 ಕೇರಳ 120
16 ಮಧ್ಯ ಪ್ರದೇಶ 393
17 ಮಹಾರಾಷ್ಟ್ರ 550
18 ಮೇಘಾಲಯ 1
19 ಮಿಜೋರಾಂ 1
20 ನಾಗಲ್ಯಾಂಡ್ 3
21 ಒಡಿಶಾ 232
22 ಪಂಜಾಬ್ 146
23 ರಾಜಸ್ಥಾನ 458
24 ಸಿಕ್ಕಿಂ 1
25 ತಮಿಳುನಾಡು 418
26 ತೆಲಂಗಾಣ 45
27 ತ್ರಿಪುರ 19
28 ಉತ್ತರ ಪ್ರದೇಶ 762
29 ಉತ್ತರಾಖಂಡ್ 24
30 ಪಶ್ಚಿಮ ಬಂಗಾಳ 498

English summary
Indian Railways has commissioned Wi-Fi at 6,000th Railway station.The Wi-Fi facility at Railway Stations meets the objectives of the aspiring Digital India Program of Government of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X