ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಿಸ್ ಬ್ಯಾಂಕ್ ಆದಾಯ ಏರಿಕೆ, ಭಾರತೀಯರ ಹೂಡಿಕೆ ಇಳಿಕೆ

By Mahesh
|
Google Oneindia Kannada News

ಜ್ಯೂರಿಚ್, ಜೂ.19: ಸ್ವಿಟ್ಜರ್ಲೆಂಡ್ ನ ವಿವಿಧ ಬ್ಯಾಂಕ್ ಗಳಲ್ಲಿ ಭಾರತೀಯ ಮೂಲದ ವ್ಯಕ್ತಿಗಳು ಹೂಡಿಕೆ ಮಾಡುವ ಪ್ರಮಾಣ ಶೇ 10ರಷ್ಟು ತಗ್ಗಿದೆ ಎಂದು ವರದಿ ಬಂದಿದೆ.

ಸ್ವಿಟ್ಜರ್ಲೆಂಡ್ ನ ಬ್ಯಾಂಕ್‌ಗಳಲ್ಲಿ ಭಾರತೀಯರು ಇರಿಸಿರುವ ಕಪ್ಪು ಹಣದ ಮೊತ್ತ ಕಳೆದ ವರ್ಷ 10 ಶೇ.ದಷ್ಟು ಕಡಿಮೆಯಾಗಿದೆ.
ಭಾರತೀಯರು ಇರಿಸಿದ ಹಣ 203 ಕೋಟಿ ಸ್ವಿಸ್ ಫ್ರಾಂಕ್‌ನಿಂದ 181.5 ಕೋಟಿ ಸ್ವಿಸ್ ಫ್ರಾಂಕ್ (ಸುಮಾರು 12,615 ಕೋಟಿ ರೂ.)ಗೆ ಕುಸಿದಿದ್ದು, 21.5 ಕೋಟಿ ಸ್ವಿಸ್ ಫ್ರಾಂಕ್ ನಷ್ಟು ಕಡಿಮೆಯಾಗಿದೆ ಎಂದು ಆ ದೇಶದ ಕೇಂದ್ರೀಯ ಬ್ಯಾಂಕ್ ಎಸ್‌ಎನ್‌ಬಿ ಬಿಡುಗಡೆ ಮಾಡಿದ ಹೊಸ ಅಂಕಿಅಂಶಗಳು ಹೇಳಿವೆ.

ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರು ಹೊಂದಿರುವ ಎರಡನೆ ಅತಿ ಕನಿಷ್ಠ ಮೊತ್ತವಾಗಿದೆ. 2013ರಲ್ಲಿ ಈ ಮೊತ್ತ 40 ಶೇ.ದಷ್ಟು ಏರಿಕೆಯಾಗಿತ್ತು.

Indian money in Swiss banks falls by 10.6%: SNB

ಇತರೆ ದೇಶಗಳ ಜನರು ಸ್ವಿಸ್ ಬ್ಯಾಂಕ್‌ಗಳಲ್ಲಿ ಇರಿಸಿರುವ ಹಣ 2013ರ ಕೊನೆಯ ವೇಳೆಗೆ ಇದ್ದ 90ಲಕ್ಷ ಕೋಟಿ ರೂ.ಯಿಂದ 2014ರಲ್ಲಿ 103 ಲಕ್ಷ ಕೋಟಿ ರೂ.ಗೆ ಏರಿದೆ. 2012ರಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿನ ಭಾರತೀಯ ಠೇವಣಿ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚು ಕಡಿಮೆಯಾಗಿತ್ತು. ಅಂದರೆ, 8,530 ಕೋಟಿ ರೂ. ಠೇವಣಿ ಆ ವರ್ಷ ಇತ್ತು ಹಾಗೂ ಅದು ಅತ್ಯಂತ ಕನಿಷ್ಠ ಮೊತ್ತವಾಗಿದೆ.

ಆದಾಯ ಏರಿಕೆ: 2014ರಲ್ಲಿ ಸ್ವಿಸ್ ಬ್ಯಾಂಕ್‌ಗಳ ಆದಾಯದಲ್ಲಿ ಭಾರೀ ಏರಿಕೆಯಾಗಿದೆ. ಸ್ವಿಟ್ಜರ್ಲೆಂಡ್ ನ 275 ಬ್ಯಾಂಕ್‌ಗಳ ಪೈಕಿ 246 ಬ್ಯಾಂಕ್‌ಗಳು ವಾರ್ಷಿಕ ಲಾಭ ದಾಖಲಿಸಿವೆ ಎಂದು ದೇಶದ ಕೇಂದ್ರೀಯ ಬ್ಯಾಂಕ್ ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್‌ಎನ್‌ಬಿ) ಪ್ರಕಟಿಸಿದೆ. ಈ ಬ್ಯಾಂಕ್‌ಗಳ ಒಟ್ಟು ಲಾಭ 2013ರಲ್ಲಿ ಇದ್ದ 1190 ಕೋಟಿ ಸ್ವಿಸ್ ಫ್ರಾಂಕ್‌ನಿಂದ 2014ರಲ್ಲಿ 1420 ಕೋಟಿ ಸ್ವಿಸ್ ಫ್ರಾಂಕ್‌ಗೆ ಏರಿಕೆಯಾಗಿದೆ.

ಉಳಿದ 29 ಬ್ಯಾಂಕ್‌ಗಳು ವಾರ್ಷಿಕ ನಷ್ಟವನ್ನು ದಾಖಲಿಸಿವೆ. ಇವುಗಳ ಒಟ್ಟು ನಷ್ಟ 2013ರಲ್ಲಿದ್ದ 140 ಕೋಟಿ ಸ್ವಿಸ್ ಫ್ರಾಂಕ್‌ನಿಂದ 680 ಕೋಟಿ ಸ್ವಿಸ್ ಫ್ರಾಂಕ್‌ಗೆ ಏರಿದೆ.

ಕಪ್ಪು ಹಣ ಕುರಿತಂತೆ ದಾಖಲೆ ಒದಗಿಸುವಂತೆ ಎಸ್ ಎನ್ ಬಿಗೆ ಭಾರತ ಮತೊಮ್ಮೆ ಮನವಿ ಸಲ್ಲಿಸಿದೆ. ಭಾರತದ ವಿಶೇಷ ತನಿಖಾ ದಳ ತನಿಖೆ ತೀವ್ರಗೊಳಿಸಿದ್ದರಿಂದ ಹೂಡಿಕೆ ಪ್ರಮಾಣ ತಗ್ಗಿದೆ. 2012 ಹಾಗೂ 2011ರಲ್ಲಿ ಹೂಡಿಕೆಯಲ್ಲಿ ಭಾರತೀಯರೇ ಮುಂದಿದ್ದರು.

English summary
Money held by Indians in Swiss banks fell by over 10 per cent last year to 1.8 billion Swiss franc (about ₹12,615 crore), amid an enhanced clampdown against the famed secrecy wall of Switzerland’s banking system by Indian and other governments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X