ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4 ಲಕ್ಷಕೋಟಿ ಮೀರಿ ಬೆಳೆಯಲಿದೆ ಭಾರತದ ಮಾಧ್ಯಮ-ಮನರಂಜನೆ ಉದ್ಯಮ

|
Google Oneindia Kannada News

ನವದೆಹಲಿ, ಜೂನ್ 23: ಕೋವಿಡ್‌ನಿಂದ ಹಿನ್ನಡೆ ಕಂಡಿದ್ದ ಭಾರತದ ಮಾಧ್ಯಮ ಮತ್ತು ಮನರಂಜನೆ ಉದ್ಯಮ ಮತ್ತೆ ಗರಿಗೆದರಿ ನಿಂತಿದೆ. ಬಹಳ ಕ್ಷಿಪ್ರಗತಿಯಲ್ಲಿ ಈ ಉದ್ಯಮ ಬೆಳೆಯಲಿದೆ ಎಂದು ಹೇಳಲಾಗುತ್ತಿದೆ.

ಪ್ರೈಸ್ ವಾಟರ್‌ಹೌಸ್ ಕೂಪರ್ಸ್ (PwC- Price Waterhouse Coopers) ಎಂಬ ಜಾಗತಿಕ ಕನ್ಸಲ್ಟೆನ್ಸಿ ಸಂಸ್ಥೆಯ ವರದಿಯೊಂದರ ಪ್ರಕಾರ 2026ರಷ್ಟರಲ್ಲಿ ಭಾರತೀಯ ಮಾಧ್ಯಮ ಮತ್ತು ಮನರಂಜನೆ ಉದ್ಯಮದ ಮೌಲ್ಯ 4.30 ಲಕ್ಷ ಕೋಟಿ ರೂ ಮುಟ್ಟಬಹುದು ಎಂದು ಅಂದಾಜಿಸಲಾಗಿದೆ. ಈ ಉದ್ಯಮ ಶೇ. 8.8 ಸಿಎಜಿಆರ್ ದರದಲ್ಲಿ ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ. ಸಿಎಜಿಆರ್ ಎಂಬುದು ವಾರ್ಷಿಕ ಬೆಳವಣಿಗೆಯ ಲೆಕ್ಕಾಚಾರವಾಗಿದೆ.

ಐಪಿಎಲ್ ಮಾಧ್ಯಮ ಹಕ್ಕು ಸ್ಟಾರ್, ವಯಾಕಾಮ್ 18, ಟೈಮ್ಸ್ ಇಂಟರ್‌ನಟ್‌ ಪಾಲು: 48,390 ಕೋಟಿ ರೂ.ಗೆ ಮಾರಾಟಐಪಿಎಲ್ ಮಾಧ್ಯಮ ಹಕ್ಕು ಸ್ಟಾರ್, ವಯಾಕಾಮ್ 18, ಟೈಮ್ಸ್ ಇಂಟರ್‌ನಟ್‌ ಪಾಲು: 48,390 ಕೋಟಿ ರೂ.ಗೆ ಮಾರಾಟ

ಪಿಡಬ್ಲ್ಯೂಸಿ ಪ್ರಕಟಿಸಿದ 2022-2026ರವರೆಗಿನ ಜಾಗತಿಕ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಅವಲೋಕನದ ವರದಿಯಲ್ಲಿ ಭಾರತದ ಉದ್ಯಮದ ವಿವರವನ್ನು ನೀಡಲಾಗಿದೆ.

ಭಾರತದ ಮಾಧ್ಯಮ ಮತ್ತು ಮನರಂಜನಾ ಉದ್ಯಮ 2022ರಲ್ಲಿ ಶೇ. 11.4ರಷ್ಟು ಬೆಳವಣಿಗೆ ಸಾಧಿಸಲಿದ್ದು, ಉದ್ಯಮದ ಮೌಲ್ಯ 3.14 ಲಕ್ಷ ಕೋಟಿ ರೂ ತಲುಪಲಿದೆ ಎಂದು ಪ್ರೈಸ್ ವಾಟರ್‌ಹವಸ್ ಕೂಪರ್ಸ್‌ನ ಈ ವರದಿ ಹೇಳುತ್ತದೆ.

 ಟಿವಿ ಜಾಹೀರಾತು ಆದಾಯ

ಟಿವಿ ಜಾಹೀರಾತು ಆದಾಯ

ಭಾರತದಲ್ಲಿ ಟಿವಿ ಜಾಹೀರಾತು ಕ್ಷೇತ್ರ ಕೂಡ ಭರಪೂರ ಬೆಳವಣಿಗೆ ಸಾಧಿಸಲಿದೆಯಂತೆ. 2023ರಷ್ಟರಲ್ಲಿ ಇದು 43 ಸಾವಿರ ಕೋಟಿ ರೂ ತಲುಪುವ ನಿರೀಕ್ಷೆ ಇದೆ. ಇಷ್ಟು ಮಟ್ಟಕ್ಕೆ ಏರಿದರೆ ಭಾರತದ ಟಿವಿ ಜಾಹೀರಾತು ಮಾರುಕಟ್ಟೆ ಜಾಗತಿಕವಾಗಿ ಐದನೇ ಸ್ಥಾನ ಪಡೆಯಲಿದೆ. ಅಂದರೆ ಅಮೆರಿಕ, ಜಪಾನ್, ಚೀನಾ ಮತ್ತು ಬ್ರಿಟನ್ ಬಿಟ್ಟರೆ ಭಾರತವೇ ಅತಿ ದೊಡ್ಡ ಟಿವಿ ಜಾಹೀರಾಟು ಮಾರುಕಟ್ಟೆಯಾಗಲಿದೆ.

ಕುತೂಹಲವೆಂದರೆ ಭಾರತದ ಒಟ್ಟಾರೆ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಪ್ರಗತಿಯಲ್ಲಿ ಡಿಜಿಟಲ್ ಮೀಡಿಯಾ ಮತ್ತು ಜಾಹೀರಾತು ಪ್ರಮುಖ ಪಾತ್ರ ವಹಿಸಲಿವೆ. ಭಾರತದಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಎಲ್ಲರನ್ನೂ ತಲುಪುತ್ತಿರುವುದು ಇದಕ್ಕೆ ಕಾರಣ.

ಭಾರತದಲ್ಲಿ ಓಟಿಟಿ ಪ್ಲಾಟ್‌ಫಾರ್ಮ್‌ನ ವಿಡಿಯೋ ಸೇವೆಗಳ ಮಾರುಕಟ್ಟೆ ಇನ್ನು ನಾಲ್ಕು ವರ್ಷಗಳಲ್ಲಿ 21 ಸಾವಿರ ಕೋಟಿ ರೂನಷ್ಟು ಬೆಳೆಯುವ ನಿರೀಕ್ಷೆ ಇದೆ. ಇದರಲ್ಲಿ ಓಟಿಟಿ ಸಬ್ಸ್‌ಕ್ರಿಪ್ಷನ್‌ಗಳಿಂದಲೇ 19,973 ಕೋಟಿ ರೂ ಬರಬಹುದು ಎಂದು ಪಿಡಬ್ಲ್ಯೂಸಿಯ ಈ ವರದಿ ಅಭಿಪ್ರಾಯಪಟ್ಟಿದೆ.

 ಪ್ರೀಮಿಯರ್ ಲೀಗ್‌ಗಿಂತಲೂ ದುಬಾರಿಯಾಯ್ತು IPL... NFL ಒಂದೇ ಬಾಕಿ ಪ್ರೀಮಿಯರ್ ಲೀಗ್‌ಗಿಂತಲೂ ದುಬಾರಿಯಾಯ್ತು IPL... NFL ಒಂದೇ ಬಾಕಿ

 ಪತ್ರಿಕೋದ್ಯಮ ಆದಾಯ

ಪತ್ರಿಕೋದ್ಯಮ ಆದಾಯ

ಭಾರತದಲ್ಲಿ ಪತ್ರಿಕಾ ಕ್ಷೇತ್ರ ಅವನತಿಯ ಹಾದಿಯಲ್ಲಿದೆ ಎಂದು ಹಲವರು ಹೇಳುವುದನ್ನು ಕೇಳಿರುತ್ತೇವೆ. ಆದರೆ, ಪಿಡಬ್ಲ್ಯೂಸಿ ವರದಿ ಪ್ರಕಾರ ಬಾರತದಲ್ಲಿ ಪತ್ರಿಕೋದ್ಯಮದ ಆದಾಯ ಶೇ. 2.7ರ ದರದಲ್ಲಿ ಹೆಚ್ಚಾಗಲಿದೆ. 2021ರಲ್ಲಿ 26,328 ಕೋಟಿ ರೂ ಇರುವ ಪತ್ರಿಕೋದ್ಯಮ ಆದಾಯ 2026ರಷ್ಟರಲ್ಲಿ 29,945 ಕೋಟಿ ರೂಗೆ ಬೆಳೆಯಲಿದೆಯಂತೆ.

ವಿಶ್ವದ ಇತರೆಡೆಯ ಪತ್ರಿಕೋದ್ಯಮಕ್ಕೆ ಈ ಭಾಗ್ಯ ಇಲ್ಲ. ಇನ್ನು ನಾಲ್ಕು ವರ್ಷಗಳಲ್ಲಿ ಭಾರತ ವಿಶ್ವದ ಐದನೇ ಅತಿ ದೊಡ್ಡ ಪತ್ರಿಕೋದ್ಯಮ ಮಾರುಕಟ್ಟೆಯನ್ನು ಹೊಂದಿರಲಿದೆ. ಇನ್ನು ಮೂರು ವರ್ಷದಲ್ಲಿ ಚೀನಾವನ್ನು ಭಾರತ ಹಿಂದಿಕ್ಕಲಿದೆ. ಹಾಗೆಯೇ, ಪತ್ರಿಕೋದ್ಯಮ ಐದು ವರ್ಷ ಸತತವಾಗಿ ಆದಾಯ ಹೆಚ್ಚಳ ಕಾಣುವುದು ಭಾರತದಲ್ಲಿ ಮಾತ್ರವಂತೆ. ದಿನಪತ್ರಿಕೆಯ ಸಂಖ್ಯೆಯೂ ಪ್ರತೀ ವರ್ಷ ಹೆಚ್ಚಾಗುವುದು ಇಲ್ಲಿ ಮಾತ್ರ ಎಂದು ಪ್ರೈಸ್ ವಾಟರ್‌ಹೌಸ್ ಕೂಪರ್ಸ್ ಸಂಸ್ಥೆಯ ಈ ವರದಿ ಹೇಳುತ್ತಿದೆ.

 ಸಿನಿಮಾ ಉದ್ಯಮದ ಆದಾಯ

ಸಿನಿಮಾ ಉದ್ಯಮದ ಆದಾಯ

ಭಾರತೀಯ ಚಿತ್ರೋದ್ಯಮ ಕೂಡ ಮುಂಬರುವ ದಿನಗಳಲ್ಲಿ ಸಂತಸದಿಂದ ತೇಲಾಡಬಹುದು. 2026ರಷ್ಟರಲ್ಲಿ ಭಾರತೀಯ ಚಿತ್ರೋದ್ಯಮದ ಆದಾಯ 16,198 ಕೋಟಿ ರೂ ತಲುಪುವ ನಿರೀಕ್ಷೆ ಇದೆ. ಇದರಲ್ಲಿ ಬಹುತೇಕ ಆದಾಯ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳಿಂದಲೇ ಬರಲಿದೆ. ಜಾಹೀರಾತುಗಳಿಂದ 349 ಕೋಟಿ ಮಾತ್ರ ಬರಬಹುದು.

ಚೀನಾ ಮತ್ತು ಅಮೆರಿಕ ಬಿಟ್ಟರೆ ಭಾರತವೇ ಸಿನಿಮಾಗೆ ಅತಿದೊಡ್ಡ ಮಾರುಕಟ್ಟೆಯಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಭಾರೀ ವೇಗದಲ್ಲಿ ಭಾರತೀಯ ಸಿನಿಮೋದ್ಯಮ ಬೆಳೆಯಲಿದೆಯಂತೆ.

2021ರಲ್ಲಿ ಭಾರತದಲ್ಲಿ 37.9 ಕೋಟಿಗೂ ಹೆಚ್ಚು ಸಿನಿಮಾ ಟಿಕೆಟ್‌ಗಳು ಮಾರಾಟವಾಗಿದ್ದವು. ಇದು ಅಮೆರಿಕದಕ್ಕಿಂತಲೂ ಹೆಚ್ಚು. ಕೋವಿಡ್ ಸಾಂಕ್ರಾಮಿಕ ಉದ್ಭವವಾಗುವ ಮುನ್ನ, ಅಂದರೆ 2020ಕ್ಕೆ ಮುನ್ನ ಭಾರತದಲ್ಲಿ ಒಂದು ವರ್ಷದಲ್ಲಿ 190 ಕೋಟಿ ಟಿಕೆಟ್‌ಗಳು ಮಾರಾಟವಾಗಿದ್ದವಂತೆ. ಅದಾದ ಬಳಿಕ ಚಿತ್ರೋದ್ಯಮ ಚೇತರಿಕೆ ಕಾಣುತ್ತಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ಇಷ್ಟು ಮಟ್ಟ ಮೀರಿ ಬೆಳೆಯುವ ನಿರೀಕ್ಷೆ ಇದೆ.

 ಸಂಗೀತ, ರೇಡಿಯೋ

ಸಂಗೀತ, ರೇಡಿಯೋ

ಮ್ಯೂಸಿಕ್, ರೇಡಿಯೋ ಮತ್ತು ಪೋಡ್‌ಕ್ಯಾಸ್ಟ್ ಕ್ಷೇತ್ರ 2021ರಲ್ಲಿ ಶೇ. 18ರಷ್ಟು ಬೆಳೆದಿದ್ದು ಅದರ ಮೌಲ್ಯ 7,216 ಕೋಟಿ ರೂ ಇದೆ. 2026ರಲ್ಲಿ ಇದರ ಮೌಲ್ಯ 11,536 ಕೋಟಿ ರೂಗೆ ಹೆಚ್ಚಾಗುವ ನಿರೀಕ್ಷೆ ಇದೆ.

ರೆಕಾರ್ಡೆಡ್ ಮ್ಯೂಸಿಕ್ ಉದ್ಯಮ ಒಳ್ಳೆಯ ರೀತಿಯಲ್ಲಿ ಬೆಳೆಯುತ್ತಿದೆ. ವಿಡಿಯೋ ಮತ್ತು ಇಸ್ಪೋರ್ಟ್ಸ್‌ನ ಆದಾಯ ಶೇ. 18.3 ದರದಲ್ಲಿ ಬೆಳೆಯುತ್ತಿದ್ದು 2026ರಷ್ಟರಲ್ಲಿ 27,535 ಕೋಟಿ ರೂ ತಲುಪುವ ಸಾಧ್ಯತೆ ಇದೆ ಎಂದು ಪಿಡಬ್ಲ್ಯೂಸಿಯ ವರದಿ ಹೇಳುತ್ತಿದೆ.

ವಿಡಿಯೋ ಗೇಮ್ ಮಾರುಕಟ್ಟೆಯಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಭಾರತಕ್ಕೆ ಮೂರನೇ ಸ್ಥಾನ ಇದೆ. ಕುತೂಹಲವೆಂದರೆ ಈ ವಿಚಾರದಲ್ಲಿ ಟರ್ಕಿ ಮತ್ತು ಪಾಕಿಸ್ತಾನ ಮೊದಲೆರಡು ಸ್ಥಾನದಲ್ಲಿವೆ.

(ಒನ್ಇಂಡಿಯಾ ಸುದ್ದಿ)

Recommended Video

Shivsena ಉರುಳೋಕೆ ಕೌಂಟ್ ಡೌನ್ ಸ್ಟಾರ್ಟ್: ಸೇನೆ ಮುಗಿಸೋಕೆ ಇಬ್ಬರಷ್ಟೇ ಸಾಕು| | *India | OneIndia Kannada

English summary
The Indian media and entertainment industry is likely to grow by 8.8% and reach a valuation of Rs. 4.30 lakh crore by 2026, says a report by PwC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X