ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿನ್ನಿಸ್ ದಾಖಲೆ: ಒಂದೇ ಉಂಗುರದಲ್ಲಿ 7,801 ನೈಸರ್ಗಿಕ ವಜ್ರಗಳ ಬಳಕೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 19: ಹೈದರಾಬಾದ್‍ನಲ್ಲಿರುವ ದಿ ಡೈಮಂಡ್ ಸ್ಟೋರ್ ಬೈ ಚಂದೂಭಾಯ್(ಹಾಲ್‍ಮಾರ್ಕ್ ಜುವೆಲರ್ಸ್‍ನ ಘಟಕ)ನ ಮಾಲೀಕರಾದ ಕೊಟ್ಟಿ ಶ್ರೀಕಾಂತ್ ಅವರು ಒಂದು ಉಂಗುರದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ವಜ್ರಗಳನ್ನು ಅಳವಡಿಸಿ ನೂತನ ಗಿನ್ನಿಸ್ ದಾಖಲೆಯ ಸಾಧನೆ ಗೈದಿದ್ದಾರೆ. 'ದಿ ಡಿವೈನ್ - 7801 ಬ್ರಹ್ಮವಜ್ರ ಕಮಲಂ' ಎಂಬ ಹೆಸರಿನ ಉಂಗುರವನ್ನು ತಯಾರಿಸುವಲ್ಲಿ ಒಟ್ಟು 7801 ನೈಸರ್ಗಿಕ ವಜ್ರಗಳನ್ನು ಬಳಸಲಾಗಿದೆ. ಅವರ ಮಳಿಗೆಯಲ್ಲಿ ಇಂದು ಈ ಉಂಗುರವನ್ನು ಅನಾವರಣಗೊಳಿಸಲಾಗಿದೆ.

ಪವಿತ್ರ ಎಂದು ಪರಿಗಣಿಸಲಾಗಿರುವ ಮತ್ತು ಹಿಮಾಲಯದಲ್ಲಿ ಕಂಡು ಬರುವ ಅಪರೂಪದ ಹೂವಾದ ಬ್ರಹ್ಮಕಮಲದಿಂದ ಈ ಉಂಗುರದ ಹೆಸರು ಸ್ಫೂರ್ತಿ ಪಡೆದಿದೆ. ಈ ಹೂವು ವೈದ್ಯಕೀಯ ಗುಣಗಳನ್ನೂ ಹೊಂದಿರುತ್ತದೆ ಎಂದು ಪರಿಗಣಿಸಲಾಗಿದೆ. ಸಂಸ್ಕೃತ, ತೆಲುಗು ಹಾಗೂ ಕನ್ನಡದಲ್ಲಿ ಡೈಮಂಡ್ ಅನ್ನು ವಜ್ರ ಎಂದು ಕರೆಯಲಾಗುತ್ತದೆ. ದಿ ಡಿವೈನ್ ರಿಂಗ್(ದೈವೀಕ ಉಂಗುರ) ವಿನ್ಯಾಸಕ್ಕಾಗಿ ಆರಿಸಲಾದ ಹೂವು ಅತ್ಯಂತ ನೈಸರ್ಗಿಕ ಮತ್ತು ಪರಿಶುದ್ಧ ರೂಪದಲ್ಲಿ ಸಾಮಾನ್ಯ ಪೂಜೆಯ ಅರ್ಪಣೆಯಾಗಿರುತ್ತದೆ.

ಸೆಪ್ಟೆಂಬರ್ 2018ರಲ್ಲಿ ಈ ಉಂಗುರದ ಚಿಂತನೆಯನ್ನು ರೂಪಿಸಲಾಗಿದ್ದು, ಅದನ್ನು ಪೂರ್ಣಗೊಳಿಸಲು 11 ತಿಂಗಳುಗಳ ಸಮರ್ಪಿತ ಕಲಾತ್ಮಕ ಪ್ರಯತ್ನ ಮತ್ತು ಕರಕುಶಲತೆ ಅಗತ್ಯವಾಯಿತು. ಎಂಟು ದಳಗಳೊಂದಿಗೆ ಆರು ಪದರಗಳನ್ನು ಇದು ಹೊಂದಿದ್ದು, ಅತ್ಯಂತ ಮೇಲ್ಭಾಗದ ಪದರ ಆರು ದಳಗಳನ್ನು ಹೊಂದಿರುವುದರ ಜೊತೆಗೆ ಕೇಂದ್ರ ಭಾಗದಲ್ಲಿ ಮೂರು ಪುಷ್ಪರೇಣುಗಳನ್ನು ಹೊಂದಿರುತ್ತದೆ.

Indian Jeweller Achieves Guinness World Record For Most Diamonds Set in One Ring!

ಗಿನ್ನಿಸ್ ವಿಶ್ವ ದಾಖಲೆಗಳಿಗಾಗಿ ಆಗಸ್ಟ್ 2019ರಲ್ಲಿ ಇದನ್ನು ಸಲ್ಲಿಸಲಾಗಿತ್ತು. ಹಲವಾರು ಸುತ್ತುಗಳ ಪರಿಶೀಲನೆ ಮತ್ತು ಸಾಕ್ಷಿ ವಿನಿಮಯಗಳ ನಂತರ ಸೆಪ್ಟೆಂಬರ್ 2020ರಲ್ಲಿ ಒಂದು ಉಂಗುರದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ವಜ್ರಗಳನ್ನು ಅಳವಡಿಸಿದ್ದಕ್ಕಾಗಿ' ಗಿನ್ನಿಸ್ ವಿಶ್ವ ದಾಖಲೆ ಪ್ರಶಸ್ತಿಯನ್ನು ನೀಡಲಾಯಿತು. ಈ ಉಂಗುರ ತಯಾರಿಸುವಲ್ಲಿ ಕಡ್ಡಾಯವಾಗಿ ಸಂಘರ್ಷ ಮುಕ್ತವಾದ ನೈಸರ್ಗಿಕ ವಜ್ರಗಳನ್ನು ಬಳಸಲಾಗಿದೆ ಎಂಬುದು ಗಿನ್ನಿಸ್ ವಿಶ್ವ ದಾಖಲೆ ಅಧಿಕಾರಿಗಳಿಗೆ ಸ್ಪಷ್ಟವಾಗಿತ್ತು. ಗಣಿಯಿಂದ ಆರಂಭವಾಗಿ ಉಂಗುರದವರೆಗಿನ ಸಂಪೂರ್ಣವಾದ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದರಿಂದ ಹಾಗೂ ಸಂಸ್ಥೆಯ ಪರಂಪರೆಯ ಹಿನ್ನೆಲೆಯಲ್ಲಿ ಇದು ದೊಡ್ಡ ಸವಾಲೇನೂ ಆಗಿರಲಿಲ್ಲ.

ಈ ಉಂಗುರದ ಸೃಷ್ಟಿಕರ್ತರಾದ ಕೊಟ್ಟಿ ಶ್ರೀಕಾಂತ್ ಅವರು ಮಾತನಾಡಿ, ''ಆಭರಣಗಳಲ್ಲಿ ಅತ್ಯಂತ ಅನನ್ಯ ಕಲಾವಸ್ತುಗಳನ್ನು ಸೃಷ್ಟಿಸುವ ನನ್ನ ಭಾವೋದ್ವೇಗವನ್ನು ಗುರುತಿಸಿರುವುದಕ್ಕೆ ನಾನು ಗಿನ್ನಿಸ್ ವಿಶ್ವ ದಾಖಲೆ ಸಂಸ್ಥೆಗೆ ವಂದನೆ ಸಲ್ಲಿಸುತ್ತೇನೆ ಮತ್ತು ನನಗಿದು ಅತ್ಯಂತ ಗೌರವದ ವಿಷಯವಾಗಿದೆ. ನಾನು ಸೃಷ್ಟಿಸಿದ ಶ್ರೇಷ್ಟ ಕಲಾಕೃತಿಗೆ ಜಾಗತಿಕ ಮಟ್ಟದಲ್ಲಿ ಪ್ರಶಸ್ತಿ ಲಭಿಸಿರುವುದು ಅಪಾರ ಹರ್ಷವನ್ನು ನನಗೆ ತಂದಿದೆ. ಇದು ನಮಗೆ ಅತ್ಯಂತ ದೊಡ್ಡ ಮೈಲುಗಲ್ಲಾಗಿದೆ. ಈ ಉಂಗುರವನ್ನು ಗ್ರಾಹಕರಿಗೆ ಹರಾಜು ಮಾಡುವ ಮೂಲಕ ಈ ಯಶಸ್ಸನ್ನು ಹಂಚಿಕೊಳ್ಳಲು ನಾವು ಬಯಸುತ್ತೇವೆ'' ಎಂದರು.

ಕೊಟ್ಟಿ ಶ್ರೀಕಾಂತ್ ಅವರು ಪರಿಣತ ಆಭರಣ ವಿನ್ಯಾಸಕಾರರಾಗಿರುವುದಲ್ಲದೆ, ಮಾನವ ಹಸ್ತ ವಿನ್ಯಾಸದಲ್ಲಿ ಡಿಪ್ಲೊಮಾ, ಕಂಪ್ಯೂಟರ್ ನೆರವಿನ ಆಭರಣ ವಿನ್ಯಾಸ ಡಿಪ್ಲೊಮಾಗಳನ್ನು ಮುಂಬಯಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಜ್ಯುವೆಲರಿಯಿಂದ ಪಡೆದಿರುತ್ತಾರೆ. ಜೊತೆಗೆ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಂಬಿಎ ಪದವೀಧರರಾಗಿರುತ್ತಾರೆ. ಜೊತೆಗೆ ಅವರು ಜೆಮಾಲಾಜಿಕಲ್ ಇನ್‍ಸ್ಟಿಟ್ಯೂಟ್ ಆಫ್ ಅಮೇರಿಕಾ(ಜಿಐಎ)ದಿಂದ ಪ್ರಾಮಾಣೀಕೃತ ಡೈಮಂಡ್ ಗ್ರ್ಯಾಜುಯೇಟ್ ಆಗಿರುತ್ತಾರೆ. ತಮ್ಮ ತಂದೆ ಚಂದ್ರಪ್ರಕಾಶ್ ಅವರಿಂದ ತಮಗೆ ಈ ಆಭರಣಗಳನ್ನು ಕುರಿತಾದ ಪ್ರೀತಿ ಬಳುವಳಿಯಾಗಿ ಬಂದಿದೆ ಎಂದು ಅವರು ಹೇಳುತ್ತಾರೆ. ಅವರ ತಂದೆಯ ಅಡಿಯಲ್ಲಿ ಕೊಟ್ಟಿ ಶ್ರೀಕಾಂತ್ ಅವರು ಕೆಲಸ ಮಾಡಿ ಈ ವಹಿವಾಟಿನ ಸೂಕ್ಷ್ಮತೆಗಳನ್ನು ಕಲಿತಿರುತ್ತಾರೆ.

Indian Jeweller Achieves Guinness World Record For Most Diamonds Set in One Ring!

ಡೈಮಂಡ್ ಸ್ಟೋರ್ ಕುರಿತು :
ಚಂದೂಭಾಯ್ ಎಂದೂ ಜನಪ್ರಿಯತೆ ಗಳಿಸಿರುವ ಚಂದ್ರಪ್ರಕಾಶ್ ಅವರು 50 ವರ್ಷಗಳ ಅನುಭವವನ್ನು ಆಭರಣ ವಹಿವಾಟಿನಲ್ಲಿ ಹೊಂದಿರುವುದಲ್ಲದೆ, ಆಭರಣಗಳ ವ್ಯವಹಾರದಲ್ಲಿ ಎರಡನೇ ಪೀಳಿಗೆಯವರಾಗಿರುತ್ತಾರೆ. ಭಾರತದಲ್ಲಿ ಚಿನ್ನದ ಆಭರಣಗಳಿಗೆ ಹಾಲ್‍ಮಾರ್ಕ್ ಚಿಹ್ನೆ ಕೊಡುವ ಪದ್ಧತಿಯನ್ನು ತರುವಲ್ಲಿ ಅವರು ಮುಂಚೂಣಿಯ ವ್ಯಕ್ತಿಗಳಲ್ಲಿ ಒಬ್ಬರು ಮಾತ್ರವಲ್ಲದೇ, ಭಾರತದ ಪ್ರಥಮ ಹಾಲ್‍ಮಾರ್ಕ್ ಪ್ರಾಮಾಣೀಕೃತ ಆಭರಣ ಉತ್ಪಾದಕರಾಗಿದ್ದಾರೆ.

2009ರಲ್ಲಿ ಈ ತಂದೆ ಮತ್ತು ಮಗ(ಶ್ರೀಕಾಂತ್) ಅವರ ಜೋಡಿ ಹಾಲ್‍ಮಾರ್ಕ್ ಆಭರಣ ವ್ಯವಹಾರವನ್ನು ಸ್ಥಾಪಿಸಿದ್ದರಲ್ಲದೆ 2017ರಲ್ಲಿ ಡೈಮಂಡ್ ಸ್ಟೋರ್ ಬೈ ಚಂದೂಭಾಯ್ ಅನ್ನು ಆರಂಭಿಸಿದ್ದರು. ತಮ್ಮಲ್ಲಿನ ವಿನ್ಯಾಸಗಳು ಮತ್ತು ಸೂಕ್ಷ್ಮ ಕರಕುಶಲತೆ ಜೊತೆಗೆ ಹೈದ್ರಾಬಾದ್‍ನ ವಜ್ರಾಭರಣ ಪ್ರೇಮಿಗಳ ನಡುವೆ ತಮ್ಮದೇ ಆದ ಛಾಪನ್ನು ಈ ಮಳಿಗೆ ಈಗಾಗಲೇ ಸೃಷ್ಟಿಸಿಕೊಂಡಿದೆ. ಗಿನ್ನಿಸ್ ವಿಶ್ವ ದಾಖಲೆ ಹೊಂದಿರುವುದು ಅವರ ಸೃಜನಾತ್ಮಕ ಶಕ್ತಿಯನ್ನು ಸ್ಥಾಪಿಸಿರುವುದಲ್ಲದೆ, ಕಲಾತ್ಮಕ ಆಭರಣಗಳ ಸೃಷ್ಟಿಕರ್ತರಾಗಿ ಅವರ ಪ್ರಯಾಣದಲ್ಲಿ ನೂತನ ಅಧ್ಯಾಯದ ಆರಂಭವನ್ನು ಇದು ಗುರುತಿಸುತ್ತದೆ.

English summary
Indian Jeweller Kotti Srikanth of The Diamond Store Chandubhai has achieved Guinness World Record For Most Diamonds Set in One Ring!.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X