ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫಿಯಿಂದ ಶುಭ ಸುದ್ದಿ, 45 ಸಾವಿರಕ್ಕೂ ಅಧಿಕ ಫ್ರೆಶರ್ಸ್ ನೇಮಕಾತಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 15: ಬೆಂಗಳೂರು ಮೂಲದ ಐಟಿ ದಿಗ್ಗಜ ಇನ್ಫೋಸಿಸ್ ತನ್ನ ನೇಮಕಾತಿ ಪ್ರಕ್ರಿಯೆ ಮುಂದುವರೆಸುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲೇ 45 ಸಾವಿರಕ್ಕೂ ಅಧಿಕ ಫ್ರೆಶರ್ಸ್ ನೇಮಕಾತಿಯನ್ನು ಘೋಷಿಸಿದೆ.

ದೇಶದ ಎರಡನೇ ಅತಿ ದೊಡ್ಡ ಐಟಿ ಸಂಸ್ಥೆ ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ಹೊರಹಾಕಿದೆ. ಇದರ ಬೆನ್ನಲ್ಲೇ ಪ್ರಸಕ್ತ ಸಾಲಿನ ಫ್ರೆಶರ್ಸ್ ನೇಮಕಾತಿ ಸಂಖ್ಯೆಯನ್ನು 35,000 ದಿಂದ 45,000ಕ್ಕೇರಿಸಿರುವುದಾಗಿ ಪ್ರಕಟಿಸಿದೆ ಎಂದು ಲೈವ್ ಮಿಂಟ್ ವರದಿ ಮಾಡಿದೆ.

ಇನ್ಫೋಸಿಸ್‌ಗೆ 2ನೇ ತ್ರೈಮಾಸಿಕದಲ್ಲಿ ಭರ್ಜರಿ ನಿವ್ವಳ ಲಾಭಇನ್ಫೋಸಿಸ್‌ಗೆ 2ನೇ ತ್ರೈಮಾಸಿಕದಲ್ಲಿ ಭರ್ಜರಿ ನಿವ್ವಳ ಲಾಭ

"ಮಾರುಕಟ್ಟೆ ಅವಕಾಶದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ಸಲುವಾಗಿ, ನಾವು ನಮ್ಮ ಕಾಲೇಜು ಪದವೀಧರರ ನೇಮಕಾತಿ ಕಾರ್ಯಕ್ರಮವನ್ನು ಮುಂದುವರೆಸುತ್ತಿದ್ದು, ವಾರ್ಷಿಕ 45,000 ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅದೇ ಸಮಯದಲ್ಲಿ, ನಾವು ಆರೋಗ್ಯ ಮತ್ತು ಕ್ಷೇಮ ಕ್ರಮಗಳು, ಪುನಶ್ಚೇತನ ಕಾರ್ಯಕ್ರಮಗಳು, ಸೂಕ್ತ ಪರಿಹಾರ ಮಧ್ಯಸ್ಥಿಕೆಗಳು ಮತ್ತು ವರ್ಧಿತ ವೃತ್ತಿ ಬೆಳವಣಿಗೆ ಅವಕಾಶಗಳನ್ನು ಒಳಗೊಂಡಂತೆ ಉದ್ಯೋಗಿಗಳ ಮೌಲ್ಯ ಪ್ರತಿಪಾದನೆಯನ್ನು ಬಲಪಡಿಸುವುದನ್ನು ಮುಂದುವರಿಸುತ್ತೇವೆ,'' ಎಂದು ಸಿಒಒ ಪ್ರವೀಣ್ ರಾವ್ ಪ್ರತಿಕ್ರಿಯಿಸಿದ್ದಾರೆ.

Indian IT giant Infosys to hire 45,000 Freshers this fiscal

ಪ್ರಮುಖ ಐಟಿ ಕಂಪನಿಗಳ ಪೈಕಿ ಇನ್ಫೋಸಿಸ್ ಅತಿ ಹೆಚ್ಚು ಆಟ್ರಿಷನ್ ದರ ಹೊಂದಿದೆ. 12.8 % ಇದ್ದ ಆಟ್ರಿಷನ್ ದರ 20.1 % ಕ್ಕೇರಿದ್ದು, ಸೆಪ್ಟೆಂಬರ್ 30ರ ಅಂತ್ಯಕ್ಕೆ 2,79,617 ಉದ್ಯೋಗಿಗಳನ್ನು ಹೊಂದಿದೆ.
ಬುಧವಾರ ಪ್ರಕಟವಾದ ವರದಿಯಂತೆ ಐಟಿ ಸಂಸ್ಥೆಗೆ ಈ ತ್ರೈಮಾಸಿಕದಲ್ಲಿ ಶೇ 11.9 ರಷ್ಟು ನಿವ್ವಳ ಲಾಭ ಗಳಿಸಿದೆ. ವರ್ಷದಿಂದ ವರ್ಷಕ್ಕೆ ಲೆಕ್ಕದಂತೆ ಶೇ 4.4 ರಷ್ಟು ಅಥವಾ 5,195 ಕೋಟಿ ರು ಹೆಚ್ಚಿನ ಲಾಭ ಪಡೆದುಕೊಂಡಿದೆ.

ಈ ಹಿಂದಿನ ತ್ರೈಮಾಸಿಕದಲ್ಲಿ 27,896 ಕೋಟಿ ರು ಆದಾಯ ಗಳಿಕೆಗೆ ಹೋಲಿಸಿದರೆ ಈ ಅವಧಿಯಲ್ಲಿ ಕ್ರೋಢಿಕೃತ ಆದಾಯವು 29,602 ಕೋಟಿ ರು ಗೆ ಏರಿಕೆಯಾಗಿದೆ., ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 6.1% ಅನುಕ್ರಮ ಬೆಳವಣಿಗೆ ಮತ್ತು 20.5% ಬೆಳವಣಿಗೆ ಜೊತೆಗೆ 24,570 ಕೋಟಿ ರು ಆದಾಯ ಗಳಿಸಿತ್ತು.

ತೈಮಾಸಿಕ ವರದಿ ಉತ್ತಮವಾಗಿ ಫಲಿತಾಂಶ ಹೊರ ಬಂದಿರುವುದರಿಂದ ಕಂಪನಿಯು ಮಧ್ಯಂತರ ಲಾಭಾಂಶವನ್ನು 15 ರು / ಪ್ರತಿ ಷೇರು ಡಿವಿಡೆಂಡ್ ಘೋಷಿಸಿದೆ.

ಕಳೆದ ಆಗಸ್ಟ್ ತಿಂಗಳಿನಲ್ಲಿ ಇನ್ಫೋಸಿಸ್ 100 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಕ್ಲಬ್ಬಿಗೆ ಎಂಟ್ರಿ ಕೊಟ್ಟ ನಾಲ್ಕನೇ ಭಾರತೀಯ ಕಂಪನಿ ಎನಿಸಿಕೊಂಡಿದೆ.

1 ಲಕ್ಷಕ್ಕೂ ಅಧಿಕ ಹೊಸ ನೇಮಕಾತಿ:
ಮುಂದಿನ ಆರ್ಥಿಕ ವರ್ಷದಲ್ಲಿ ಪ್ರಮುಖ ಐಟಿ ಕಂಪನಿಗಳು ಸುಮಾರು 1 ಲಕ್ಷಕ್ಕೂ ಅಧಿಕ ಹೊಸ ನೇಮಕಾತಿ ಘೋಷಿಸಿವೆ. ಕಳೆದ ಆರ್ಥಿಕ ವರ್ಷದಲ್ಲಿ 21,00 ಫ್ರೆಶರ್ಸ್ ನೇಮಕ ಮಾಡಿಕೊಳ್ಳಲಾಗಿದೆ ಎಂದು ಇನ್ಫೋಸಿಸ್ ಪ್ರಕಟಿಸಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಇನ್ಫೋಸಿಸ್, ವಿಪ್ರೋ ಸಂಸ್ಥೆಗಳು ಕಳೆದ ಆರ್ಥಿಕ ವರ್ಷದಲ್ಲಿ ಬೇರೆ ಐಟಿ ಕಂಪನಿಗಳಿಗೆ ಹೋಲಿಸಿದರೆ ಶೇ 45ರಷ್ಟು ಅಧಿಕ ನೇಮಕಾತಿ ಮಾಡಿಕೊಂಡಿವೆ. ಕೊರೊನಾ ಕಾಲದಲ್ಲಿಸರ್ಕಾರಿ ಸಂಸ್ಥೆಗಳು ಸೇರಿದಂತೆ ಅನೇಕ ಸಂಸ್ಥೆಗಳು ಡಿಜಿಟಲ್ ಸೇವೆಗೆ ಹೆಚ್ಚಿನ ಬೇಡಿಕೆ ಒಡ್ಡಿದ್ದರಿಂದ ಟಾಪ್ 3 ಸಂಸ್ಥೆಗಳಲ್ಲಿ ಹೆಚ್ಚಿನ ನೇಮಕಾತಿ ನಡೆದಿದೆ.

Recommended Video

ಕಾಂಗ್ರೆಸ್ ಜೆಡಿಎಸ್ ಮಧ್ಯೆ ಮಾತಿನ ಚಕಮಕಿ! | Oneindia Kannada

ಪ್ರಸಕ್ತ ವರ್ಷದಲ್ಲಿ ಈ ಟಾಪ್ 3 ಕಂಪನಿಗಳಲ್ಲದೆ ಎಚ್‌ಸಿಎಲ್ ಟೆಕ್ ಸೇರಿದಂತೆ ಸುಮಾರು 1 ಲಕ್ಷ ಫ್ರೆಶರ್ಸ್ ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿವೆ. 2021-22ರ ಆರ್ಥಿಕ ವರ್ಷದಲ್ಲಿ 40 ಸಾವಿರ ಹೊಸ ನೇಮಕಾತಿಯನ್ನು ಟಿಸಿಎಸ್ ಘೋಷಿಸಿದೆ ಅಲ್ಲದೆ, ಕೆಲ ತಿಂಗಳುಗಳಲ್ಲೇ ಒಟ್ಟಾರೆ ಉದ್ಯೋಗಿಗಳ ಸಂಖ್ಯೆಯನ್ನು ದಾಖಲೆಯ 5 ಲಕ್ಷ ಸಂಖ್ಯೆಗೇರಿಸಿಕೊಂಡಿದೆ.

English summary
Indian IT giant Infosys is expanding its hiring program for freshers. Infosys said that it plans to hire 45,000 college graduates this fiscal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X