ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ನೀತಿಗೆ ಭಾರತೀಯ ಐಟಿ ಕ್ಷೇತ್ರ ತತ್ತರ

ಭಾರತದ ಸಾಫ್ಟ್ ವೇರ್ ಉದ್ಯೋಗಿಗಳಿಗೆ ಅಮೆರಿಕಕ್ಕೆ ಹಾರಲು ವರವಾಗಿದ್ದ ಎಚ್1- ಬಿ ವೀಸಾವನ್ನು ತೆಗೆದು ಹಾಕುವ ಸಾಧ್ಯತೆ ಹೆಚ್ಚಿದೆ. ಇದರಿಂದಾಗಿ ಸುಮಾರು 150 ಬಿಲಿಯನ್ ಡಾಲರ್ ಐಟಿ ಸೇವಾ ಕ್ಷೇತ್ರ ಆತಂಕದಲ್ಲಿದೆ.

By Mahesh
|
Google Oneindia Kannada News

ಬೆಂಗಳೂರು, ನವೆಂಬರ್ 29: ಅಮೆರಿಕ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ವೈಖರಿ ಭಾರತೀಯ ಐಟಿ ಕ್ಷೇತ್ರಕ್ಕೆ ಮುಳುವಾಗುವ ಸಾಧ್ಯತೆ ಕಂಡು ಬಂದಿದೆ. ವೀಸಾ ನೀತಿ, ಸ್ಥಳೀಯರಿಗೆ ಮಾತ್ರ ಉದ್ಯೋಗ ಯೋಜನೆಗಳನ್ನು ಜಾರಿಗೊಳಿಸಿದರೆ ಟಿಸಿಎಸ್, ಇನ್ಫೋಸಿಸ್ ಹಾಗೂ ವಿಪ್ರೋಗೆ ಭಾರಿ ಹೊಡೆತ ಬೀಳಲಿದೆ.

ಭಾರತದ ಸಾಫ್ಟ್ ವೇರ್ ಉದ್ಯೋಗಿಗಳಿಗೆ ಅಮೆರಿಕಕ್ಕೆ ಹಾರಲು ವರವಾಗಿದ್ದ ಎಚ್1- ಬಿ ವೀಸಾವನ್ನು ತೆಗೆದು ಹಾಕುವ ಸಾಧ್ಯತೆ ಹೆಚ್ಚಿದೆ. ಇದರಿಂದಾಗಿ ಸುಮಾರು 150 ಬಿಲಿಯನ್ ಡಾಲರ್ ಐಟಿ ಸೇವಾ ಕ್ಷೇತ್ರ ಆತಂಕದಲ್ಲಿದೆ.[ಇನ್ಫಿ, ಟಿಸಿಎಸ್ ವಿರುದ್ಧ ತನಿಖೆಗೆ ಮುಂದಾದ ಅಮೆರಿಕ]

Indian IT firms to expedite acquisitions, local recruitment in U.S.

ಇದರ ಜತೆಗೆ ಸ್ಥಳೀಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಅಮೆರಿಕದಲ್ಲೇ ಕ್ಯಾಂಪಸ್ ಸಂದರ್ಶನ ನಡೆಸಲು ಸೂಚನೆ ನೀಡುವ ಸಾಧ್ಯತೆಯಿದೆ. ಈಗಾಗಲೇ ಅಲ್ಲಿನ ಕಾಲೇಜುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಂಪಸ್ ಇಂಟರ್ ವ್ಯೂ ನಡೆಸಲು ಮುಂದಾಗಿವೆ.[ಎಚ್ 1 ಬಿ ಉಳ್ಳ ದಂಪತಿಗೆ ವರ್ಕ್ ಪರ್ಮಿಟ್]

2014-15ರ ಅವಧಿಯಲ್ಲಿ ಎಚ್1-ಬಿ ವೀಸಾದ ಅಡಿಯಲ್ಲಿ ಟಿಸಿಎಸ್, ವಿಪ್ರೋ, ಇನ್ಫೋಸಿಸ್ ಕಂಪೆನಿಗಳು ಒಟ್ಟು 86 ಸಾವಿರದಷ್ಟು ಟೆಕ್ಕಿಗಳನ್ನು ಅಮೆರಿಕಕ್ಕೆ ಕಳುಹಿಸಿತ್ತು. ಆದರೆ, ಈಗ ಸ್ಕಿಲ್ಡ್ ವರ್ಕರ್ ವೀಸಾ ಸಂಪೂರ್ಣ ಸ್ಥಗಿತಗೊಂಡರೆ ಏನು ಗತಿ ಎಂಬ ಆತಂಕ ಮೂಡಿದೆ.

ಯೂರೋಪಿಯನ್ ಒಕ್ಕೂಟದಿಂದ ಹೊರಹೋಗುವ ಬ್ರಿಟನ್ ನಿರ್ಧಾರದಿಂದ ಭಾರತದ ಐಟಿ ವಲಯಕ್ಕೆ ಭಾರಿ ಹೊಡೆತ ಉಂಟಾಗಿದೆ. ಅಮೆರಿಕ ಹಾಗೂ ಬ್ರಿಟನ್ನಿನ ಬ್ಯಾಂಕ್ ಹಾಗೂ ವಿಮಾದಾರರು ಭಾರತದ ಪ್ರಮುಖ ಗ್ರಾಹಕರಾಗಿದ್ದಾರೆ ಎಂಬುದನ್ನು ಮರೆಯುವಂತಿಲ್ಲ.[ವಾರ್ಷಿಕ ಸಂಬಳ 1 ಡಾಲರ್ ಮಾತ್ರ ಪಡೆಯುವೆ: ಟ್ರಂಪ್]

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಇನ್ಫೋಸಿಸ್ ನ ಸಿಒಒ ಪ್ರವೀಣ್ ರಾವ್ ಪ್ರತಿಕ್ರಿಯಿಸಿ, ವಿದೇಶಕ್ಕೆ ಪ್ರತಿಭಾವಂತ ಉದ್ಯೋಗಿಗಳನ್ನು ಕಳುಹಿಸುವುದು ಸಹಜ ಪ್ರಕ್ರಿಯೆ. ಆದರೆ, ಈಗ ಗೊಂದಲ ಉಂಟಾಗಿರುವುದರಿಂದ ಈ ಬಗ್ಗೆ ಚರ್ಚೆ ನಡೆಯಬೇಕಿದೆ. ನಾವು ವಿಶ್ವವಿದ್ಯಾಲಯಕ್ಕೆ ತೆರಳಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ನಿಲ್ಲಿಸುವುದಿಲ್ಲ ಎಂದಿದ್ದಾರೆ.

English summary
Anticipating a more protectionist U.S. technology visa programme under a Donald Trump administration, India's $150 billion IT services sector will speed up acquisitions in the United States and recruit more heavily from college campuses there reports Reuters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X