ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೂಡಿಕೆದಾರರಿಗೆ ಆಘಾತ: ಶೀಘ್ರದಲ್ಲಿಯೇ ಭಾರತದಲ್ಲಿ ಬಿಟ್‌ಕಾಯಿನ್ ನಿಷೇಧ?

|
Google Oneindia Kannada News

ನವದೆಹಲಿ, ಮಾರ್ಚ್ 15: ನಿಮ್ಮ ಬಳಿ ಬಿಟ್‌ಕಾಯಿನ್‌ಗಳಿವೆಯೇ? ಅವುಗಳ ಮೇಲೆ ದೊಡ್ಡ ಮೊತ್ತದ ಹೂಡಿಕೆ ಮಾಡಿದ್ದರೆ ಕೈಸುಟ್ಟುಕೊಳ್ಳುವ ದಿನಗಳು ಬಂದರೂ ಅಚ್ಚರಿಯಿಲ್ಲ. ಏಕೆಂದರೆ ಭಾರತ ಸರ್ಕಾರ ದೇಶದಲ್ಲಿ ಕ್ರಿಪ್ಟೋಕರೆನ್ಸಿಗಳ ಬಳಕೆಯನ್ನು ಶೀಘ್ರದಲ್ಲಿಯೇ ಕಾನೂನು ಬಾಹಿರ ಎಂದು ಘೋಷಿಸುವ ಸಾಧ್ಯತೆ ಇದೆ.

ಜಗತ್ತಿನಾದ್ಯಂತ ಕ್ರಿಪ್ಟೋಕರೆನ್ಸಿ ಬಳಕೆ ಹಾಗೂ ಅದರ ಕುರಿತಾದ ಚರ್ಚೆ ತೀವ್ರಗೊಳ್ಳುತ್ತಿದೆ. ಬಿಟ್‌ಕಾಯಿನ್‌ಗಳು ಬಳಕೆ ಹೆಚ್ಚುತ್ತಿರುವ ನಡುವೆಯೇ, ಡಿಜಿಟಲ್ ಹಣವನ್ನು ನಿಷೇಧಿಸುವ ಹಾಗೂ ದೇಶದಲ್ಲಿ ಕ್ರಿಪ್ಟೋಕರೆನ್ಸಿ ಮಾರಾಟದಲ್ಲಿ ತೊಡಗಿದ್ದರೆ ಅವರಿಗೆ ದಂಡವಿಧಿಸುವ ಹೊಸ ಕಠಿಣ ಮಸೂದೆಯನ್ನು ಜಾರಿಗೆ ತರುವ ಬಗ್ಗೆ ಪ್ರಸ್ತಾಪಿಸಲು ಉದ್ದೇಶಿಸಲಾಗುತ್ತಿದೆ. ಈ ಮಸೂದೆಯಡಿ ಅಂತಹ ಡಿಜಿಟಲ್ ಸಂಪತ್ತನ್ನು ಇರಿಸಿಕೊಳ್ಳುವುದು ಕೂಡ ಅಪರಾಧವಾಗಲಿದೆ.

ದಾಖಲೆ ಮಟ್ಟಕ್ಕೇರಿ ಮಾರ್ಚ್ 15ರಂದು ಕುಸಿತ ಕಂಡ ಬಿಟ್ ಕಾಯಿನ್ದಾಖಲೆ ಮಟ್ಟಕ್ಕೇರಿ ಮಾರ್ಚ್ 15ರಂದು ಕುಸಿತ ಕಂಡ ಬಿಟ್ ಕಾಯಿನ್

ಈ ಮಸೂದೆಯು ಬಿಟ್‌ಕಾಯಿನ್, ಡೋಜ್ ಕಾಯಿನ್ ಮತ್ತು ಇತರೆ ಕ್ರಿಪ್ಟೋ ಹಣ ಹೂಡಿಕೆದಾರರಿಗೆ ಸಂಕಷ್ಟ ತಂದೊಡ್ಡಲಿದೆ. ಕ್ರಿಪ್ಟೋ ಸಂಪತ್ತುಗಳನ್ನು ಹೊಂದುವುದು, ವಿತರಣೆ ಮಾಡುವುದು, ಕೂಡಿಡುವುದು, ವ್ಯಾಪಾರ ಮಾಡುವುದು, ವರ್ಗಾವಣೆ ಮಾಡುವುದು ಮುಂತಾದ ಚಟುವಟಿಕೆಗಳನ್ನು ನಡೆಸುವುದನ್ನು ಈ ಹೊಸ ಮಸೂದೆ ಅಪರಾಧ ಎಂದು ಪರಿಗಣಿಸಲಿದೆ.

ಹೂಡಿಕೆದಾರರಿಗೆ ಚಿಂತೆ

ಹೂಡಿಕೆದಾರರಿಗೆ ಚಿಂತೆ

ಕ್ರಿಪ್ಟೋ ಕರೆನ್ಸಿಗಳ ವಿರುದ್ಧ ಕ್ರಮಕ್ಕೆ ಸರ್ಕಾರ ಕಳೆದ ಹಲವು ತಿಂಗಳಿಂದ ಚಿಂತನೆ ನಡೆಸಿತ್ತು. ಆದರೆ ಇತ್ತೀಚೆಗೆ ಸರ್ಕಾರ ಅದರ ಬಗ್ಗೆ ಉದಾರ ನೀತಿ ತೋರುವ ಬಗ್ಗೆ ನೀಡಿದ್ದ ಹೇಳಿಕೆಗಳು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿತ್ತು. ಈ ನಡುವೆ ಸರ್ಕಾರ ಕ್ರಿಪ್ಟೋಕರೆನ್ಸಿಗಳ ವಿರುದ್ಧ ಸಮರಕ್ಕೆ ಮುಂದಾಗುವ ಸುಳಿವು ನೀಡಿದೆ. ಒಂದು ವೇಳೆ ಹೊಸ ಮಸೂದೆ ಕಾನೂನಾಗಿ ಜಾರಿಯಾದರೆ ಹೂಡಿಕೆದಾರರಿಗೆ ಭಾರಿ ತೊಂದರೆ ಉಂಟಾಗಲಿದೆ.

ಮೊದಲ ಆರ್ಥಿಕತೆ ಎನಿಸಲಿದೆ

ಮೊದಲ ಆರ್ಥಿಕತೆ ಎನಿಸಲಿದೆ

ಭಾರತವು ಕ್ರಿಪ್ಟೋಕರೆನ್ಸಿ ಕಾನೂನುಬಾಹಿರ ಎಂದು ಘೋಷಿಸುವ ಮೊದಲ ಪ್ರಮುಖ ಆರ್ಥಿಕತೆ ಎಂದೆನಿಸಿಕೊಳ್ಳಲಿದೆ. ಚೀನಾ ಕೂಡ ಕ್ರಿಪ್ಟೀಕರೆನ್ಸಿಗಳ ಮೈನಿಂಗ್ ಮತ್ತು ವ್ಯಾಪಾರವನ್ನು ನಿಷೇಧಿಸಿದೆ. ಆದರೆ ಅವುಗಳನ್ನು ಹೊಂದಿದ್ದರೆ ದಂಡ ವಿಧಿಸುತ್ತಿಲ್ಲ.

ಆರು ತಿಂಗಳ ಸಮಯಾವಕಾಶ

ಆರು ತಿಂಗಳ ಸಮಯಾವಕಾಶ

ಹೂಡಿಕೆದಾರರಿಗೆ ತಮ್ಮ ಕ್ರಿಪ್ಟೋಕರೆನ್ಸಿ ಸಂಪತ್ತಿನ ವಹಿವಾಟನ್ನು ಸ್ಥಗಿತಗೊಳಿಸಲು ಆರು ತಿಂಗಳ ಸಮಯದೊಂದಿಗೆ ಗವಾಕ್ಷಿಯೊಂದನ್ನು ನೀಡಲಾಗುತ್ತದೆ. ಅದರ ಬಳಿಕವೂ ಅವರು ಕ್ರಿಪ್ಟೋಕರೆನ್ಸಿ ಹೊಂದಿದ್ದರೆ ಅದಕ್ಕೆ ದಂಡ ತೆರಬೇಕಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

70 ಲಕ್ಷಕ್ಕೂ ಅಧಿಕ ಮಂದಿಯ ಹೂಡಿಕೆ

70 ಲಕ್ಷಕ್ಕೂ ಅಧಿಕ ಮಂದಿಯ ಹೂಡಿಕೆ

ದೇಶದಲ್ಲಿ 70 ಲಕ್ಷಕ್ಕೂ ಅಧಿಕ ಜನರು ಈ ವರೆಗೂ 1 ಬಿಲಿಯನ್ ಡಾಲರ್‌ಗೂ ಹೆಚ್ಚಿನ ಹಣವನ್ನು ಕ್ರಿಪ್ಟೋಕರೆನ್ಸಿ ಮೇಲೆ ಹೂಡಿಕೆ ಮಾಡಿದ್ದಾರೆ ಎಂದು ನಂಬಲಾಗಿದೆ. ಈ ಕಾನೂನು ಜಾರಿಯಾಗುವ ಮುನ್ನ ಅವರು ಹೂಡಿಕೆ ಮೇಲಿನ ಮೊತ್ತವನ್ನು ಮರಳಿ ಪಡೆಯಲು ಅವಕಾಶ ಸಿಗಲಿದೆ ಎಂಬ ಭರವಸೆ ಹೊಂದಿದ್ದಾರೆ. ಸರ್ಕಾರವು ಈ ವಹಿವಾಟಿನ ಮೇಲೆ ಸಂಪೂರ್ಣ ನಿಷೇಧ ವಿಧಿಸುವುದಿಲ್ಲ. ಬದಲಾಗಿ ವ್ಯಾಪಾರವನ್ನು ನಿಯಂತ್ರಿಸಬಹುದಷ್ಟೇ ಎಂದು ಉದ್ಯಮ ವಿಶ್ವಾಸ ವ್ಯಕ್ತಪಡಿಸಿದೆ.

English summary
Indian govrnment is set to propose a new bill to ban Bitcoin, Dogecoin and other crypto money and make it illegal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X