ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಪಟಾಕಿ ಹಚ್ಚಿದ್ರೆ, ಚೀನಾದಲ್ಲಿ ಈ ಸಲ ಬೆಂಕಿ ಬೀಳುತ್ತೆ!

|
Google Oneindia Kannada News

ಗಾಲ್ವಾನ್ ಸಂಘರ್ಷದ ನಂತರ ಚೀನಾ ವಿರುದ್ಧ ಭಾರತ ಆರ್ಥಿಕ ಸಮರ ಸಾರಬೇಕು ಎಂಬ ಕೂಗು ಬಲವಾಗಿ ಉದ್ಯಮ ವಲಯದಿಂದಲೂ ಕೇಳಿ ಬಂದಿದ್ದು ನೆನಪಿರಬಹುದು. ಮೊದಲ ಹೆಜ್ಜೆಯಾಗಿ ಚೀನಾದಿಂದ ಆಮದಾಗುವ ಉತ್ಪನ್ನಗಳ ಮೇಲೆ ಭಾರಿ ಪ್ರಮಾಣದ ಅಬಕಾರಿ ಸುಂಕ ವಿಧಿಸಲಾಯಿತು. ಅನೇಕ ಸ್ಥಳೀಯ ಉದ್ಯಮಿಗಳು ಚೀನಿ ವಸ್ತು ಆಮದು ನಿರಾಕರಿಸಲು ಆರಂಭಿಸಿದರು. ಇದೆಲ್ಲದ್ದರ ಪರಿಣಾಮ ಈ ಬಾರಿ ದೀಪಾವಳಿ ಹಬ್ಬದ ವೇಳೆಗೆ ಕಾಣಬಹುದು. ದೀಪಾವಳಿ ಸಂದರ್ಭದಲ್ಲಿ ಭಾರತದಲ್ಲಿ ದೀಪ, ಪಟಾಕಿ ಹಚ್ಚಿದರೆ, ಚೀನಾದಲ್ಲಿ ಉರಿ, ಕಿಚ್ಚು, ನಷ್ಟ, ಆಘಾತ ಕಾಣಿಸಲಿದೆ.

ನವರಾತ್ರಿ, ದೀಪಾವಳಿ ಹೀಗೆ ಭಾರತದ ಹಬ್ಬಗಳ ಮೇಲೆ ಚೀನಾದ ಅನೇಕ ಉತ್ಪದನಾ ಸಂಸ್ಥೆಗಳು ಅವಲಂಬಿತವಾಗಿದ್ದವು. ಈಗ ಚೀನಿ ವಸ್ತುಗಳ ಮೇಲಿನ ನಿರ್ಬಂಧ, ನಿಷೇಧಕ್ಕೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಮುಂದಾಗಿದ್ದು, ಇದರಿಂದ ಚೀನಾ ಭಾರಿ ನಷ್ಟ ಅನುಭವಿಸಲಿದೆ.

ಚೀನಾಕ್ಕೆ ಭಾರಿ ಪೆಟ್ಟು, ಆಮದು ಶುಲ್ಕ ಹೆಚ್ಚಳಕ್ಕೆ ಸರ್ಕಾರ ಚಿಂತನೆಚೀನಾಕ್ಕೆ ಭಾರಿ ಪೆಟ್ಟು, ಆಮದು ಶುಲ್ಕ ಹೆಚ್ಚಳಕ್ಕೆ ಸರ್ಕಾರ ಚಿಂತನೆ

ಭಾರತದ ಒಟ್ಟು ಆಮದು ಪ್ರಮಾಣದಲ್ಲಿ ಚೀನಾ ಶೇ 14ರಷ್ಟು ಪಾಲು ಹೊಂದಿದೆ. ಏಪ್ರಿಲ್ 2019ರಿಂದ ಫೆಬ್ರವರಿ 2020ರ ಅವಧಿಯಲ್ಲಿ ಭಾರತವು ಸುಮಾರು 62.4 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ. ಇದೇ ಅವಧಿಯಲ್ಲಿ ಭಾರತದಿಂದ 15.5 ಬಿಲಿಯನ್ ಡಾಲರ್ ನಷ್ಟು ಮೌಲ್ಯದ ಉತ್ಪನ್ನ ರಫ್ತಾಗಿದೆ. ಆದರೆ, ನಿಷೇಧ, ನಿರ್ಬಂಧದಿಂದಾಗಿ ಚೀನಾಕ್ಕೆ ಸುಮಾರು 40, 000 ಕೋಟಿ ರು ನಷ್ಟವಾಗಲಿದೆ ಎಂದು ಅಂದಾಜು ಮಾಡಲಾಗಿದೆ.

 ಚೀನಾದಿಂದ ಆಮದು ಪ್ರಮಾಣ ಅಧಿಕ

ಚೀನಾದಿಂದ ಆಮದು ಪ್ರಮಾಣ ಅಧಿಕ

ಚೀನಾಕ್ಕೆ ಭಾರತ ರಫ್ತು ಮಾಡುವ ಪ್ರಮಾಣದ 7 ಪಟ್ಟು ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಜನವರಿ 2020ರಲ್ಲಿ 429.55 ಬಿಲಿಯನ್ ಮೌಲ್ಯದ ಸರಕು ಆಮದಾಗಿತ್ತು. ಫೆಬ್ರವರಿಯಲ್ಲಿ 317.64 ಬಿಲಿಯನ್ ಗೆ ಇಳಿಕೆಯಾಗಿದೆ. 2018-19ರಲ್ಲಿ ಚೀನಾಕ್ಕೆ ರಫ್ತು ಪ್ರಮಾಣ 16.7 ಬಿಲಿಯನ್ ಡಾಲರ್ ನಷ್ಟಿತ್ತು. ಆದರೆ, ಆಮದು ಮೌಲ್ಯ 70.3 ಬಿಲಿಯನ್ ಡಾಲರ್ ನಷ್ಟಿತ್ತು. 2020ರಲ್ಲಿ ಭಾರತದ ಒಟ್ಟಾರೆ ರಫ್ತು ಪ್ರಮಾಣ ಮೇ ತಿಂಗಳಲ್ಲಿ 19.05 ಬಿಲಿಯನ್ ಡಾಲರ್ ನಷ್ಟಿದೆ. ಆಮದು ಪ್ರಮಾಣ 22.20 ಬಿಲಿಯನ್ ಡಾಲರ್ ನಷ್ಟಿದೆ.

 ಚೀನಾದಿಂದ ಏನಿಲ್ಲ ಖರೀದಿ?

ಚೀನಾದಿಂದ ಏನಿಲ್ಲ ಖರೀದಿ?

ಎಲೆಕ್ಟ್ರಾನಿಕ್ ಕಚ್ಚಾವಸ್ತು, ವಾಚ್, ಗಡಿಯಾರ, ಸಂಗೀತ ಉಪಕರಣ, ಆಟಿಕೆ, ಕ್ರೀಡಾ ಸಾಧನ, ಪೀಠೋಪಕರಣ, ನೆಲಹಾಸು, ಪ್ಲಾಸ್ಟಿಕ್ ಉತ್ಪನ್ನಗಳು, ಎಲೆಕ್ಟ್ರಿಕಲ್ ಮಷಿನ್, ರಾಸಾಯನಿಕ ಕಚ್ಚಾವಸ್ತು, ಕಬ್ಬಿಣ, ಉಕ್ಕು, ರಸಗೊಬ್ಬರ, ಲೋಹದ ವಸ್ತು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಶೇ 73ರಷ್ಟು ಚೀನಾ ಮೂಲದ ಶಿಯೋಮಿ, ಒಪ್ಪೋ, ಒನ್ ಪ್ಲಸ್ ಒನ್, ರಿಯಲ್ ಮಿ, ವಿವೋ ಫೋನ್ ಗಳು ಸೇಲ್ ಆಗಿವೆ. ಭಾರತದ ಪ್ರಮುಖ 30 ಬಿಲಿಯನ್ ಡಾಲರ್ ಸ್ಟಾರ್ ಅಪ್ ಕಂಪನಿಗಳ ಪೈಕಿ 18ರಲ್ಲಿ ಚೀನಾ ಹೂಡಿಕೆ ಹೊಂದಿದೆ ಆಟೋಮೊಬೈಲ್ ಕ್ಷೇತ್ರದಲ್ಲಿ ಶೇ 30ರಷ್ಟು, ಬೊಂಬೆ, ಆಟಿಕೆ, ಟಾಯ್ಸ್ ಗೇಮ್ಸ್ ಕ್ಷೇತ್ರದಲ್ಲಿ ಶೇ 90ರಷ್ಟು ಪಾಲು, ಬೈಸಿಕಲ್ ನಿರ್ಮಾಣಕ್ಕೆ ಶೇ 50ರಷ್ಟು ಚೀನಾ ಪಾಲು ಅಗತ್ಯ. ಎಚ್ ಸಿಕ್ಯೂ ತಯಾರಿಕೆಗೆ ಬೇಕಾದ Active Pharmaceutical Ingredients (APIs), ಪಿಪಿಇ ಕಿಟ್ಸ್ ಚೀನಾದಿಂದ ಮಾತ್ರ ಪೂರೈಕೆಯಾಗುತ್ತಿದೆ

 ಚೀನಾಕ್ಕೆ ಬಿಸಿಮುಟ್ಟಿಸಲು ವ್ಯಾಪಾರಿಗಳ ನಿರ್ಧಾರ

ಚೀನಾಕ್ಕೆ ಬಿಸಿಮುಟ್ಟಿಸಲು ವ್ಯಾಪಾರಿಗಳ ನಿರ್ಧಾರ

ಈ ಮೂಲಕ ಪ್ರಧಾನಿ ಮೋದಿ ಕರೆ ನೀಡಿದಂತೆ ಆತ್ಮ ನಿರ್ಭರ ಭಾರತ, ವೋಕಲ್ ಫಾರ್ ಲೋಕಲ್, ಮೇಕ್ ಇನ್ ಇಂಡಿಯಾ ಯೋಜನೆಗಳನ್ನು ಸಾಧಿಸಿ ಜೊತೆಗೆ ಚೀನಾಗೂ ಬಿಸಿ ಮುಟ್ಟಿಸಲು ವರ್ತಕರ ಸಂಘ ನಿರ್ಧರಿಸಿದೆ. ಹೀಗಾಗಿ, ಹಬ್ಬದ ಸೀಸನ್ ನಲ್ಲಿ ಚೀನಿ ಉತ್ಪನ್ನಗಳ ಬದಲಿಗೆ ಸ್ಥಳೀಯ ಉತ್ಪನ್ನಗಳನ್ನು ಮಾರಾಟ ಮಾಡಲು ನಿರ್ಧರಿಸಿವೆ. ಚೀನಾದಿಂದ ಎಫ್ ಡಿಐ ಮೂಲಕ ಶೇ 25 ಹಾಗೂ ಯುಎಸ್ ನಿಂದ ಶೇ 10ರಷ್ಟು ಮಾತ್ರ ಭಾರತಕ್ಕೆ ದಕ್ಕುತ್ತಿದೆ. ಈ ನೀತಿ ಬದಲಾಗಬೇಕಿದೆ ಎಂದು ಕೈಗಾರಿಕಾ ಮಂಡಳಿಗಳು ಕೂಡಾ ವ್ಯಾಪಾರಿಗಳಿಗೆ ಬೆಂಬಲ ವ್ಯಕ್ತಪಡಿಸಿವೆ.

 ಹಬ್ಬದ ಸೀಸನ್ 70, 000 ಕೋಟಿ ವಹಿವಾಟು

ಹಬ್ಬದ ಸೀಸನ್ 70, 000 ಕೋಟಿ ವಹಿವಾಟು

ಭಾರತದಲ್ಲಿ ದೀಪಾವಳಿ ಹಬ್ಬದ ಸೀಸನ್ ನಲ್ಲಿ ಸುಮಾರು 70, 000 ಕೋಟಿ ವಹಿವಾಟು ನಡೆಸಲಾಗುತ್ತದೆ. ಈ ಹಿಂದಿನ ವರ್ಷಗಳಲ್ಲಿ ಚೀನಾದಿಂದ ಸುಮಾರು 40, 000 ಕೋಟಿ ರು ಮೌಲ್ಯದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು ಎಂದು ಸಿಎಐಟಿ ಅಧ್ಯಕ್ಷ ಬಿ.ಸಿ ಭಾರ್ತಿಯಾ ಹಾಗೂ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ. ಚೀನಾದಿಂದ ಬಂದ ದೀಪಗಳು, ಆಟಿಕೆ, ಪಟಾಕಿ, ಎಲೆಕ್ಟ್ರಾನಿಕ್ ವಸ್ತುಗಳಿಗೆ ಭಾರಿ ಬೇಡಿಕೆ ಇದೆ. ಆದರೆ, ಈ ಬಾರಿ ಭಾರತೀಯ ಮೂಲದ ಉತ್ಪನ್ನಗಳು ಮಾರಾಟವಾಗಲಿದ್ದು, ಈ ಮೂಲಕ ಚೀನಾಕ್ಕೆ ಆರ್ಥಿಕ ಪೆಟ್ಟು ಕೊಡಲಾಗುತ್ತಿದೆ.

ರೆಡ್ ಸೀಸ್ ವರದಿ ಪ್ರಕಾರ ಅಕ್ಟೋಬರ್ ತಿಂಗಳಿನಲ್ಲಿ ಆನ್ ಲೈನ್ ಶಾಪಿಂಗ್ ಪ್ರಮಾಣ ಶೇ 70 ರಷ್ಟು ವೃದ್ಧಿಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 28 ಮಿಲಿಯನ್ ವಹಿವಾಟು ನಡೆದಿತ್ತು. ಈ ಬಾರಿ 45-50 ಮಿಲಿಯನ್ ವಹಿವಾಟು ಆಗಿದೆ. ಮಾರುಕಟ್ಟೆ ಮೌಲ್ಯ 2.7 ಬಿಲಿಯನ್ ಡಾಲರ್ ನಿಂದ 4 ಬಿಲಿಯನ್ ಡಾಲರ್ ನಷ್ಟು ಏರಿಕೆಯಾಗಲಿದೆ.

English summary
Indian Festive Season: Amid boycott call by local sellers Chinese exporters may incur Rs 40k crore loss during Navaratri and Deepavali season.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X