ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

50 ಸಾವಿರ ಪಾಯಿಂಟ್ ದಾಟಿದ ಸೂಚ್ಯಂಕ, ಹೂಡಿಕೆದಾರರು ಸಂತಸ

|
Google Oneindia Kannada News

ಮುಂಬೈ, ಜನವರಿ 21: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕ ಹೊಸ ದಾಖಲೆ ಬರೆದಿದೆ. ಜನವರಿ 21, 2021ರಂದು ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್ 50 ಸಾವಿರ ಪಾಯಿಂಟ್ ಗಳ ಗಡಿ ದಾಟಿದೆ. ಅಮೆರಿಕದಲ್ಲಿ ಜೋಸೆಫ್ ಬೈಡನ್ 46ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮದ ನಂತರ ಯುಎಸ್ ಷೇರುಪೇಟೆ ಚೇತರಿಕೆ ಕಂಡ ಬೆನ್ನಲ್ಲೇ ಏಷ್ಯನ್ ಷೇರುಪೇಟೆಯೂ ಹೊಸ ದಾಖಲೆ ಬರೆಯುವ ಹಾದಿಯಲ್ಲಿದೆ.

ಈ ಸಮಯಕ್ಕೆ ಸೆನ್ಸೆಕ್ಸ್ 281.12 ಪಾಯಿಂಟ್ ಗಳ ಏರಿಕೆ ಕಂಡು, 50,073.26 ಪಾಯಿಂಟ್ ಗಳಲ್ಲಿ ವಹಿವಾಟು ಆಗುತ್ತಿತ್ತು. ಇನ್ನು ನಿಫ್ಟಿ 82.40 ಪಾಯಿಂಟ್ ಗಳು ಮೇಲೇರಿ, 14,727.10 ಪಾಯಿಂಟ್ ಗಳಲ್ಲಿ ವ್ಯವಹಾರ ನಡೆಸುತ್ತಿದೆ.

2019ರಲ್ಲಿ ಮೋದಿ ಅಧಿಕಾರಕ್ಕೇರಿದ ಸಂದರ್ಭದಲ್ಲಿ ಮೇ 23, 2019ರಂದು ಸೂಚ್ಯಂಕ 40, 000 ಪಾಯಿಂಟ್ಸ್ ಕ್ಕೇರಿ ದಾಖಲೆ ಬರೆದಿತ್ತು. ಇಂದು ಬಿಎಸ್ಇಯಲ್ಲಿ ಸುಮಾರು 30 ಕಂಪನಿಗಳ ಷೇರುಗಳು 300ಕ್ಕೂ ಅಧಿಕ ಪಾಯಿಂಟ್ಸ್ ಏರಿಕೆ ಕಂಡಿವೆ. ಬಹುತೇಕ ಐಟಿ ಕಂಪನಿ ಷೇರುಗಳು ಲಾಭ ಪಡೆದುಕೊಂಡಿದ್ದು, ಹೂಡಿಕೆದಾರರಿಗೆ ಸಂತಸ ಮೂಡಿಸಿದೆ. ಕೊವಿಡ್ 19 ಪರಿಣಾಮ ಷೇರುಪೇಟೆ ಹೆಚ್ಚಿನ ಸಂಭ್ರಮದ ಸ್ಥಿತಿಯಲ್ಲಿರಲಿಲ್ಲ.

Indian equity benchmark Sensex hits 50,000

ಗಳಿಕೆ: ಬಜಾಜ್ ಆಟೋ, ಬಜಾಬ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಎಚ್ ಸಿಎಲ್ ಟೆಕ್, ರಿಲಯನ್ಸ್ ಇಂಡಸ್ಟ್ರೀಸ್, ಏಷ್ಯನ್ ಪೈಂಟ್ಸ್ ಹೆಚ್ಚಿನ ಲಾಭ ಗಳಿಸಿವೆ.

ಫೆಬ್ರವರಿ 1ರಂದು ಕೇಂದ್ರ ಬಜೆಟ್ 2021 ಮಂಡನೆಯಾಗಲಿದ್ದು, ಹೂಡಿಕೆದಾರರು ಉತ್ತಮ ನಿರೀಕ್ಷೆಯೊಂದಿಗೆ ಷೇರುಪೇಟೆ ವ್ಯವಹಾರದಲ್ಲಿ ತೊಡಗಿದ್ದಾರೆ. ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಎಚ್ ಸಿಎಲ್ ಹೊಸ ನೇಮಕಾತಿ, ಹೊಸ ಒಪ್ಪಂದದ ಬಗ್ಗೆ ಘೋಷಣೆ ಮಾಡಿವೆ. ಇವೆಲ್ಲವೂ ಷೇರುಪೇಟೆ ಮೇಲೆ ಪರಿಣಾಮ ಬೀರಿವೆ ಎನ್ನಬಹುದು.

English summary
Indian equity benchmark Sensex hits 50,000 points for the first time on Jan 21, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X