ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗಿಗಳಿಗೆ ಶೇಕಡ 10 ರಷ್ಟು ವೇತನ ಹೆಚ್ಚಳಕ್ಕೆ ಮುಂದಾದ ಭಾರತದ ಕಂಪನಿಗಳು

|
Google Oneindia Kannada News

ಭಾರತೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ 2023ರಲ್ಲಿ ಬಂಪರ್ ಸಿಗುವ ಸಾಧ್ಯತೆ ಇದೆ. ಭಾರತದ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ 2023ರಲ್ಲಿ ಶೇಕಡಾ 10 ರಷ್ಟು ಸಂಬಳ ಹೆಚ್ಚಿಸುವ ನಿರೀಕ್ಷೆ ಇದೆ. ಇದು ವಿಶ್ವದ ಇತರ ದೇಶಗಳಿಗಿಂತ ಹೆಚ್ಚು ಎಂದು ವಿಲ್ಲೀಸ್ ಟವರ್ಸ್ ವ್ಯಾಟ್ಸನ್ ಅವರ ಸಂಬಳ ಬಜೆಟ್ ಪ್ಲಾನಿಂಗ್ ವರದಿ ತಿಳಿಸಿದೆ.

ಇದು ಕಳೆದ ವರ್ಷ ಇಂಡಿಯಾ ಇಂಕ್ ತನ್ನ ಉದ್ಯೋಗಿಗಳಿಗೆ ನೀಡಿದ 9.5 ಶೇಕಡಾ ಹೆಚ್ಚಳಕ್ಕಿಂತ ಹೆಚ್ಚು. ಕಾರ್ಮಿಕರ ಕೊರತೆ ಹೆಚ್ಚುತ್ತಿರುವ ಸಂಕೀರ್ಣ ಸಂದರ್ಭದಲ್ಲಿ ಉದ್ಯೋಗಿಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಸಂಬಳ ಹೆಚ್ಚು ಮಾಡುವ ಕ್ರಮಕ್ಕೆ ಕಂಪನಿಗಳು ಮುಂದಾಗಿವೆ ಎಂದು ವರದಿ ಹೇಳಿದೆ.

ಆರನೇ ವೇತನ ಆಯೋಗದ ಅವಧಿ ಅಂತ್ಯ: ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳ ಯಾವಾಗ?ಆರನೇ ವೇತನ ಆಯೋಗದ ಅವಧಿ ಅಂತ್ಯ: ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳ ಯಾವಾಗ?

ಭಾರತದಲ್ಲಿ ಶೇಕಡಾ 58 ರಷ್ಟು ಉದ್ಯೋಗದಾತರು ಕಳೆದ ವರ್ಷಕ್ಕಿಂತ ಹೆಚ್ಚಿನ ಸಂಬಳ ನೀಡಲು ಸಿದ್ದರಾಗಿದ್ದಾರೆ. ಶೇಕಡಾ 25 ರಷ್ಟು ಉದ್ಯೋಗದಾತರು ಮಾತ್ರ ತಮ್ಮ ಉದ್ಯೋಗಿಗಳ ಸಂಬಳಕ್ಕೆ ಮೀಸಲಿಡುವ ಬಜೆಟ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಶೇಕಡಾ 5.4 ರಷ್ಟು ಮಂದಿ ಮಾತ್ರ ಕಳೆದ ಬಾರಿಗಿಂತ ಈ ಬಾರಿ ಬಜೆಟ್ ಕಡಿಮೆ ಮಾಡಿದ್ದಾರೆ ಎಂದು ಹೇಳಿದೆ.

 ಚೀನಾ, ಹಾಂಗ್‌ಕಾಂಗ್‌ ದೇಶಕ್ಕಿಂತೆ ಹೆಚ್ಚು ವೇತನ ಹೆಚ್ಚಳ

ಚೀನಾ, ಹಾಂಗ್‌ಕಾಂಗ್‌ ದೇಶಕ್ಕಿಂತೆ ಹೆಚ್ಚು ವೇತನ ಹೆಚ್ಚಳ

ಭಾರತದ ಕಂಪನಿಗಳು ನೀಡಲು ಉದ್ದೇಶಿಸಿರುವ ಶೇಕಡಾ 10 ರಷ್ಟು ವೇತನ ಹೆಚ್ಚಳ, ಏಷ್ಯಾ ಪೆಸಿಫಿಕ್ ವಲಯದಲ್ಲಿಯೇ ಅತ್ಯಧಿಕ ವೇತನ ಹೆಚ್ಚಳವಾಗಲಿದೆ. 2023ರಲ್ಲಿ ಚೀನಾ ಶೇಕಡಾ 6, ಹಾಂಗ್ ಕಾಂಗ್ ಶೇಕಡಾ 4 ಮತ್ತು ಸಿಂಗಾಪುರ ಶೇಕಡಾ 4 ರಷ್ಟು ಸಂಬಳ ಹೆಚ್ಚು ಮಾಡಲಿವೆ ಎಂದು ವರದಿ ತಿಳಿಸಿದೆ.


ಈ ವರದಿಯು ಏಪ್ರಿಲ್ ಮತ್ತು ಮೇ 2022 ರಲ್ಲಿ 168 ದೇಶಗಳಲ್ಲಿ ನಡೆಸಿದ ಸಮೀಕ್ಷೆಯನ್ನು ಆಧರಿಸಿದೆ, ಇದು ಭಾರತದಲ್ಲಿನ 590 ಸಂಸ್ಥೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.

 ಹಲವು ವಲಯಗಳಲ್ಲಿ ಹೆಚ್ಚಿನ ಉದ್ಯೋಗ

ಹಲವು ವಲಯಗಳಲ್ಲಿ ಹೆಚ್ಚಿನ ಉದ್ಯೋಗ

ಭಾರತದಲ್ಲಿ ಸುಮಾರು 42 ಪ್ರತಿಶತದಷ್ಟು ಕಂಪನಿಗಳು ಮುಂದಿನ 12 ತಿಂಗಳವರೆಗೆ ಸಕಾರಾತ್ಮಕ ವ್ಯವಹಾರ ಆದಾಯವನ್ನು ನಿರೀಕ್ಷಿಸಿವೆ, ಆದರೆ 7.2 ಪ್ರತಿಶತದಷ್ಟು ಮಾತ್ರ ನಷ್ಟ ಅನುಭವಿಸುವ ಅಂದಾಜಿನಲ್ಲಿವೆ.

ಮಾಹಿತಿ ತಂತ್ರಜ್ಞಾನ (ಶೇ. 65.5), ಇಂಜಿನಿಯರಿಂಗ್ (ಶೇ. 52.9), ಮಾರಾಟ (ಶೇ. 35.4), ತಾಂತ್ರಿಕವಾಗಿ ನುರಿತ ವ್ಯಾಪಾರಗಳು (ಶೇ. 32.5) ಮತ್ತು ಹಣಕಾಸು (ಶೇ. 17.5) ವಲಯದಲ್ಲಿ ಮುಂದಿನ 12 ತಿಂಗಳವರೆಗೆ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿದೆ.

 ಈ ವಲಯದ ನೌಕರರಿಗೆ ಹೆಚ್ಚಿನ ವೇತನ

ಈ ವಲಯದ ನೌಕರರಿಗೆ ಹೆಚ್ಚಿನ ವೇತನ

ಹಣಕಾಸು ಸೇವೆಗಳು, ಬ್ಯಾಂಕಿಂಗ್, ಮಾಧ್ಯಮ ಮತ್ತು ಗೇಮಿಂಗ್ ವಿಭಾಗಗಳ ಉದ್ಯೋಗಿಗಳು ಅತ್ಯಧಿಕ ವೇತನ ಹೆಚ್ಚಳದ ಲಾಭ ಪಡೆಯುತ್ತಾರೆ.

"ತಂತ್ರಜ್ಞಾನ ಆಧಾರಿತ ಬೆಳವಣಿಗೆಯ ಮೇಲೆ ಹೆಚ್ಚಿನ ಗಮನಹರಿಸುವುದರೊಂದಿಗೆ, ಡಿಜಿಟಲ್ ಕೌಶಲ್ಯಗಳನ್ನು ಹೊಂದಿರುವ ಟೆಕ್ ಪ್ರತಿಭೆಗಳಿಗೆ, ಅದರಲ್ಲೂ ವಿಶೇಷವಾಗಿ ತಂತ್ರಜ್ಞಾನ, ಮಾಧ್ಯಮ ಮತ್ತು ಗೇಮಿಂಗ್, ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಕ್ಷೇತ್ರಗಳಲ್ಲಿನ ಉದ್ಯೋಗಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವೇತನ ಹೆಚ್ಚು ಮಾಡುತ್ತಿವೆ" ಎಂದು ವರದಿ ತಿಳಿಸಿದೆ.

 ಕೋವಿಡ್ ಸಂಕಷ್ಟದ ನಂತರ ಹೆಚ್ಚಿನ ಉದ್ಯೋಗ ಸೃಷ್ಟಿ

ಕೋವಿಡ್ ಸಂಕಷ್ಟದ ನಂತರ ಹೆಚ್ಚಿನ ಉದ್ಯೋಗ ಸೃಷ್ಟಿ

ಎರಡು ವರ್ಷಗಳ ಕಾಲ ಕೋವಿಡ್ ಸಾಂಕ್ರಾಮಿಕದಲ್ಲಿ ಸಂಕಷ್ಟ ಅನುಭವಿಸಿದ ನಂತರ ಕಾರ್ಪೊರೇಟ್‌ ವಲಯ ಚೇತರಿಕೆ ಕಾಣುತ್ತಿದೆ. ಇದರಿಂದ ತಮ್ಮ ಉದ್ಯೋಗಿಗಳ ವೇತನ ಪರಿಷ್ಕರಣೆ ಮಾಡುತ್ತಿದ್ದಾರೆ.

ವರದಿಯೊಂದರ ಪ್ರಕಾರ ಭಾರತದಲ್ಲಿ ಉದ್ಯೋಗ ನೇಮಕಾತಿ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಭಾರತದ ಅಗ್ರ 8 ಕಂಪನಿಗಳು 2022ರ ಆರ್ಥಿಕ ವರ್ಷದಲ್ಲಿ 3 ಲಕ್ಷ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿವೆ ಎಂದು ಹೇಳಿದೆ. ರಿಲಯನ್ಸ್ ಇಂಡಸ್ಟ್ರೀಸ್ ಒಂದೇ 1 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ. ಅದರಲ್ಲೂ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ.

Recommended Video

ನಾನು ಬೆಂಕಿ ಅಂತಾ Ishan Kishan BCCI ಗೆ ಬಿಸಿ‌ ಮುಟ್ಟಿಸಿದ್ದು ಯಾಕೆ? |*Cricket | OneIndia Kannada

English summary
Indian companies are expected to give a salary hike of 10 per cent in 2023, The salary hike will be the highest in the Asia Pacific region. China is projected to see an increase of 6 percent, Hong Kong at 4 percent and Singapore at 4 percent for next year. The report was based on a survey across 168 countries in April and May 2022, which includes 590 organizations in India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X