ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಸೂಲಾಗದ ಸಾಲದಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೆ 1.76 ಲಕ್ಷ ಕೋಟಿ ನಷ್ಟ

|
Google Oneindia Kannada News

ನವದೆಹಲಿ, ಅಕ್ಟೋಬರ್ 10: ವಸೂಲಾಗದ ಸಾಲ (ಎನ್‌ಪಿಎ) ಬ್ಯಾಂಕಿಂಗ್ ಕ್ಷೇತ್ರಕ್ಕೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ. ಎನ್‌ಪಿಎ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನಗಳು ಸಫಲವಾಗಿಲ್ಲ. ಇದರಿಂದ 416 ಮಂದಿ/ಸಂಸ್ಥೆಗಳು ತಲಾ 100 ಕೋಟಿ ಅಥವಾ ಅದಕ್ಕೂ ಹೆಚ್ಚಿನ ಸಾಲವನ್ನು ಬಾಕಿ ಉಳಿಸಿಕೊಂಡಿದ್ದು, ಕಳೆದ ಮೂರು ವರ್ಷಗಳಲ್ಲಿ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು 1.76 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿವೆ.

ಮಾಹಿತಿಹಕ್ಕು ಕಾಯ್ದೆಯಡಿ ಪಡೆದುಕೊಂಡಿರುವ ದಾಖಲೆಗಳ ಆಧಾರದಲ್ಲಿ ಸಿಎನ್‌ಬಿಸಿ18 ಸುದ್ದಿವಾಹಿನಿ ಎನ್‌ಪಿಎ ಮಾಹಿತಿಯನ್ನು ಪ್ರಕಟಿಸಿದೆ. ವಸೂಲಾಗದ ಸಾಲದ ಮೊತ್ತವು ಪ್ರತಿ ಸಾಲಗಾರನಿಗೆ ಸರಾಸರಿ 424 ಕೋಟಿ ರೂ. ದಷ್ಟಿದೆ ಎಂದು ಅದು ತಿಳಿಸಿದೆ.

ಜ.1 ರೊಳಗೆ KYC ಅಪ್ಡೇಟ್ ಮಾಡದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಸ್ಥಗಿತ!ಜ.1 ರೊಳಗೆ KYC ಅಪ್ಡೇಟ್ ಮಾಡದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಸ್ಥಗಿತ!

2015-2018ರ ಅವಧಿಯಲ್ಲಿ ವಾಣಿಜ್ಯ ಬ್ಯಾಂಕುಗಳಿಂದ 2.17 ಲಕ್ಷ ಕೋಟಿ ರೂ. ಮೊತ್ತದ ಕೆಟ್ಟಸಾಲವನ್ನು ಗುರುತಿಸಲಾಗಿದೆ.

Indian Banking Write Off NPA Rs 1.76 Lakh Crore

109 ವಿಶಿಷ್ಟ ಸಾಲಗಾರರ 40,798 ಕೋಟಿ ಸಾಲದ ಮೊತ್ತವನ್ನು ಬರ್ಖಾಸ್ತುಗೊಳಿಸಲಾಗಿತ್ತು (ರೈಟ್ ಆಫ್). ಈ ಸಂಖ್ಯೆ 2016ರ ಮಾರ್ಚ್‌ನಲ್ಲಿ 199ಕ್ಕೆ ಏರಿತ್ತು, ಜತೆಗೆ 69,976 ಕೋಟಿ ಮೊತ್ತದ ವಸೂಲಾಗದ ಸಾಲವನ್ನು ಬರ್ಖಾಸ್ತುಗೊಳಿಸಲಾಗಿದೆ.

ಬ್ಯಾಂಕುಗಳನ್ನು ಮುಚ್ಚುವ ವದಂತಿ ನಂಬಬೇಡಿ: ಆರ್‌ಬಿಐ ಮನವಿಬ್ಯಾಂಕುಗಳನ್ನು ಮುಚ್ಚುವ ವದಂತಿ ನಂಬಬೇಡಿ: ಆರ್‌ಬಿಐ ಮನವಿ

ಕಳೆದ ಎರಡು ವರ್ಷಗಳಲ್ಲಿ ಅಪನಗದೀಕರಣದ ಬಳಿಕ ಈ ಸಂಖ್ಯೆ ಶೇ 72ರಷ್ಟು ಹೆಚ್ಚಾಗಿ 343ಕ್ಕೆ ತಲುಪಿದೆ. ಹಾಗೆಯೇ ಬರ್ಖಾಸ್ತುಗೊಳಿಸಿದ ವಸೂಲಾಗದ ಸಾಲದ ಪ್ರಮಾಣ ಈ ಅವಧಿಯಲ್ಲಿ 69,926 ಕೋಟಿಯಿಂದ 1,27,797 ಕೋಟಿ ರೂ.ಗೆ ತಲುಪಿದೆ. 2018ರಲ್ಲಿ ಬರ್ಖಾಸ್ತು ಮಾಡಲಾದ ಸಾಲದ ಮೊತ್ತವು 2,17,121 ಕೋಟಿ ರೂ.ಗೆ ಏರಿದೆ. ಹಾಗೆಯೇ ವಿಶಿಷ್ಟ ಸಾಲಗಾರರ ಸಂಖ್ಯೆ 525ಕ್ಕೆ ಹೆಚ್ಚಾಗಿದೆ.

ಎಸ್‌ಬಿಐ 2019ರ ಮಾರ್ಚ್ ಅಂತ್ಯದ ವೇಳೆಗೆ 100 ಕೋಟಿಗೂ ಮೀರಿದ ಒಟ್ಟು 76,610.98 ಅನುತ್ಪಾದಕ ಸಾಲವನ್ನು ಬರ್ಖಾಸ್ತುಗೊಳಿಸಿದ್ದರೆ, 500 ಕೋಟಿಗಿಂತ ಕಡಿಮೆ ಮೊತ್ತದ 37,708.06 ಕೋಟಿ ರೂ. ಸಾಲವನ್ನು ಬರ್ಖಾಸ್ತುಮಾಡಿದೆ.

400 ಜಿಲ್ಲೆಗಳಲ್ಲಿ ಬ್ಯಾಂಕ್‌ಗಳಿಂದ ಸಾಲ ಮೇಳ: ನಿರ್ಮಲಾ ಸೀತಾರಾಮನ್400 ಜಿಲ್ಲೆಗಳಲ್ಲಿ ಬ್ಯಾಂಕ್‌ಗಳಿಂದ ಸಾಲ ಮೇಳ: ನಿರ್ಮಲಾ ಸೀತಾರಾಮನ್

ರಾಜ್ಯದ ಕೆನರಾ ಬ್ಯಾಂಕ್ 19,991.17 ಕೋಟಿ ಮೊತ್ತದ 100 ಕೋಟಿಗಿಂತ ಅಧಿಕ ಸಾಲವನ್ನು ಹಾಗೂ 500 ಕೋಟಿಗಿಂತ ಕಡಿಮೆ ಮೌಲ್ಯದ 7,391.09 ಕೋಟಿ ರೂ. ಸಾಲವನ್ನು ಬರ್ಖಾಸ್ತುಗೊಳಿಸಿದೆ.

2015ರಿಂದ 2018ರ ಅವಧಿಯಲ್ಲಿ ಬರ್ಖಾಸ್ತುಗೊಳಿಸಿದ ಅಂದರೆ ಸಾಲಮನ್ನಾಕ್ಕೆ ಹೋಲುವ ಕ್ರಮದಿಂದ ಸಾಲ ವಸೂಲಿ ಮಾಡಲಾಗುವುದಿಲ್ಲ ಎಂದು ತೀರ್ಮಾನಿಸಿದ ಮೊತ್ತದ ಪ್ರಮಾಣವು ಗಣನೀಯವಾಗಿ ಏರಿಕೆಯಾಗಿದೆ.

English summary
Indian Banking system has lost Rs 1.76 lakh crore in the last three years due to write off of Non-Performing loans (NPAs).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X