ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021ರಲ್ಲಿ ಭಾರತವು ವೇಗವಾಗಿ ಬೆಳೆಯಲಿರುವ ಏಷ್ಯಾದ ಆರ್ಥಿಕತೆಯಾಗಲಿದೆ!

|
Google Oneindia Kannada News

ನವದೆಹಲಿ, ಡಿಸೆಂಬರ್ 09: ಸತತ ಎರಡು ತ್ರೈಮಾಸಿಕದಲ್ಲಿ ನಕಾರಾತ್ಮಕ ಜಿಡಿಪಿ ಬೆಳವಣಿಗೆಯನ್ನು ಹೊಂದಿರುವ ಭಾರತವು, 2021ರ ಹಣಕಾಸು ವರ್ಷದಲ್ಲಿ ಏಷ್ಯಾದಲ್ಲೇ ಅತ್ಯಂತ ವೇಗದ ಆರ್ಥಿಕತೆಯಾಗಿ ಬೆಳೆಯಲಿದೆ ಎಂದು ನೋಮುರಾ ಭವಿಷ್ಯ ನುಡಿದಿದೆ.

ನೋಮುರಾ ಏಷ್ಯಾ ಔಟ್‌ಲುಕ್ 2021ರ ವರದಿ ಪ್ರಕಾರ ಕ್ಯಾಲೆಂಡರ್ ವರ್ಷ 2021ರಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ಏಷ್ಯಾದ ಆರ್ಥಿಕತೆಯಾಗಿದೆ. ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಯಿಂದ ಅಳೆಯಲ್ಪಟ್ಟಂತೆ, ಭಾರತೀಯ ಆರ್ಥಿಕತೆಯು 2021 ರಲ್ಲಿ ಶೇಕಡಾ 9.9 ಕ್ಕೆ ಏರಿಕೆಯಾಗಲಿದೆ.

ಭಾರತ ಆರ್ಥಿಕ ಹಿಂಜರಿತ ಪ್ರವೇಶಿಸಿದ್ದರೂ ಪ್ರೋತ್ಸಾಹದಾಯಕವಾಗಿದೆ: ಕೆ. ಸುಬ್ರಹ್ಮಣಿಯನ್ಭಾರತ ಆರ್ಥಿಕ ಹಿಂಜರಿತ ಪ್ರವೇಶಿಸಿದ್ದರೂ ಪ್ರೋತ್ಸಾಹದಾಯಕವಾಗಿದೆ: ಕೆ. ಸುಬ್ರಹ್ಮಣಿಯನ್

ಇದೇ ಅವಧಿಯಲ್ಲಿ ಭಾರತದ ಪ್ರತಿಸ್ಪರ್ಧಿ ಚೀನಾ 2021ರ ಜಿಡಿಪಿ ಬೆಳವಣಿಗೆ ಶೇಕಡಾ 9ರಷ್ಟು ಎಂದು ಅಂದಾಜಿಸಲಾಗಿದ್ದು, ಸಿಂಗಾಪುರ ಶೇಕಡಾ 7.5ರಷ್ಟು ತಲುಪಿದೆ ಎನ್ನಲಾಗಿದೆ.

India Would Be Fastest Growing Asian Economy In 2021: Nomura

ನೋಮುರಾ 2021 ರ ಭಾರತದ ಬೆಳವಣಿಗೆ ದೃಷ್ಟಿಕೋನವನ್ನು ಸಕಾರಾತ್ಮಕವಾಗಿ ತಿರುಗಿಸಿದ್ದು ಮತ್ತು ದೇಶವು ಚೇತರಿಕೆಯ ಹಾದಿಯಲ್ಲಿದೆ ಎಂದು ನಂಬಿದೆ. 2018ರಲ್ಲಿ ಬೆಳವಣಿಗೆಯನ್ನು ನಕಾರಾತ್ಮಕವಾಗಿ ತಿರುಗಿಸಿದ್ದ ನೋಮುರಾ, ಎರಡು ವರ್ಷಗಳ ಬಳಿಕ ಸಕಾರಾತ್ಮಕ ವರದಿ ನೀಡಿದೆ.

ಎರಡನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ನಿರೀಕ್ಷೆಗಿಂತ ತೀಕ್ಷ್ಣವಾದ ಬೆಳವಣಿಗೆ ಸಾಧಿಸಿರುವುದು ಹೆಚ್ಚಿನ ವಿಶ್ಲೇಷಕರನ್ನು ಅಚ್ಚರಿಗೊಳಿಸಿದೆ. ಉದಾಹರಣೆಗೆ, ಫಿಚ್ ರೇಟಿಂಗ್ಸ್, ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಶೇಕಡಾ 9.4 ರಷ್ಟಾಗುತ್ತದೆ ಎಂದು ನಿರೀಕ್ಷಿಸಿತ್ತು. ಸೆಪ್ಟೆಂಬರ್ 2020 ರಲ್ಲಿ ಶೇಕಡಾ 10.5ರ ಮುನ್ಸೂಚನೆಯಿಂದ ಸುಮಾರು ಶೇಕಡಾ 1 ಪಾಯಿಂಟ್ (ಪಿಪಿ) ಕಡಿಮೆಯಾಗಿದೆ.

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 7.5ಕ್ಕಿಂತ ಕಡಿಮೆಯಾಗಿದೆ ಎಂದು ಅಧಿಕೃತ ಅಂಕಿ-ಅಂಶಗಳು ಬಿಡುಗಡೆಯಾಗಿದೆ. ಹಿಂದಿನ ತ್ರೈಮಾಸಿಕದಲ್ಲಿ ಕೊರೊನಾವೈರಸ್‌ ಪ್ರೇರಿತ ಲಾಕ್‌ಡೌನ್‌ದಿಂದಾಗಿ ದಾಖಲೆಯ ಶೇಕಡಾ 23.9ರಷ್ಟು ಕುಸಿತ ಕಂಡಿದೆ.

English summary
India could well be the fastest-growing Asian Economy in calendar year 2021 (CY21) if Nomura’s forecasts are to be believed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X