India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರವೇ ಭಾರತ 30 ಟ್ರಿಲಿಯನ್ ಡಾಲರ್‌ ಆರ್ಥಿಕತೆಯಾಗಲಿದೆ: ಪಿಯೂಷ್‌ ಗೋಯಲ್‌

|
Google Oneindia Kannada News

ನವದೆಹಲಿ, ಜೂ. 26: ಭಾರತವು ಈಗ ಎಲ್ಲಾ ಕ್ಷೇತ್ರಗಳಲ್ಲಿ ವಿಶ್ವ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಬಯಸಿದ್ದು, ದೇಶವು ಪ್ರಸ್ತುತ 3 ಟ್ರಿಲಿಯನ್ ಡಾಲರ್ ಮಟ್ಟದಿಂದ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಅತ್ಯಂತ ಶೀಘ್ರವಾಗಿ ಮುಂಬರಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ದೇಶೀಯ ಜವಳಿ ಉದ್ಯಮವು ಮುಂಬರುವ ವರ್ಷಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಕೇಂದ್ರವು ವಿವಿಧ ದೇಶಗಳೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜವಳಿ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯಲ್‌ ಹೇಳಿದರು.

ಈ ವರ್ಷ ಭಾರತದ ಅಭಿವೃದ್ಧಿ ಶೇ. 8.2: ಐಎಂಎಫ್ ಹೊಸ ಅಂದಾಜುಈ ವರ್ಷ ಭಾರತದ ಅಭಿವೃದ್ಧಿ ಶೇ. 8.2: ಐಎಂಎಫ್ ಹೊಸ ಅಂದಾಜು

ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಗೋಯಲ್, "ಕೇಂದ್ರವು ಹತ್ತಿ ಮತ್ತು ಮಾನವ ನಿರ್ಮಿತ ಜವಳಿ ಕ್ಷೇತ್ರವನ್ನು ಉತ್ತೇಜಿಸುತ್ತಿದೆ. ಇದರಿಂದಾಗಿ ಅದು ವಿಶ್ವ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲನ್ನು ಪಡೆಯುತ್ತದೆ. ಇದರಿಂದಾಗಿ ಉದ್ಯೋಗಾವಕಾಶಗಳು ಮತ್ತು ಹೂಡಿಕೆಯನ್ನು ಹೆಚ್ಚಿಸುತ್ತದೆ," ಎಂದು ತಿಳಿಸಿದರು.

 ಮುಕ್ತ ವ್ಯಾಪಾರ ಒಪ್ಪಂದ ಅಂತಿಮ

ಮುಕ್ತ ವ್ಯಾಪಾರ ಒಪ್ಪಂದ ಅಂತಿಮ

ಎಲ್ಲಾ ಕ್ಷೇತ್ರಗಳಲ್ಲಿ ನಾವು ಜಾಗತಿಕ ಉದ್ಯಮವಾಗಲು ಬಯಸುತ್ತೇವೆ. ನಾವು ವಿಶ್ವ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಬಯಸುತ್ತೇವೆ. ಪ್ರಧಾನ ಮಂತ್ರಿಗಳ ಮಾರ್ಗದರ್ಶನದಲ್ಲಿ ಕೇಂದ್ರವು ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ವಿವಿಧ ದೇಶಗಳೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ವಿಶ್ವ ಮಾರುಕಟ್ಟೆಯಲ್ಲಿ ಜವಳಿ ವಲಯಕ್ಕೆ ಶೂನ್ಯ ಸುಂಕದ ಪ್ರವೇಶವನ್ನು ನೀಡಿ ವಿಶ್ವ ನಾಯಕರೊಂದಿಗಿನ ಪ್ರಧಾನಿಯವರ ಉತ್ತಮ ಸಂಬಂಧದಿಂದಾಗಿ ಭಾರತ ಇಂದು ಜಾಗತಿಕ ಗೌರವವನ್ನು ಪಡೆಯುತ್ತಿದೆ ಎಂದರು. ಕೊಯಮತ್ತೂರಿನಲ್ಲಿ ಸಿಮಾ ಟೆಕ್ಸ್‌ಫೇರ್‌ 2022 ಅನ್ನು ಉದ್ಘಾಟಿಸಿದ ಗೋಯಲ್ ಕೇಂದ್ರವು ಹತ್ತಿ ಮತ್ತು ಮಾನವ ನಿರ್ಮಿತ ಜವಳಿ ಕ್ಷೇತ್ರವನ್ನು ಉತ್ತೇಜಿಸುತ್ತಿದೆ. ಮಾರುಕಟ್ಟೆ ಆ ಮೂಲಕ ಉದ್ಯೋಗಾವಕಾಶಗಳು ಹಾಗೂ ಹೂಡಿಕೆಯನ್ನು ಹೆಚ್ಚಿಸಲಾಗುವುದು ಎಂದು ಒತ್ತಿ ಹೇಳಿದರು.

ಡಿಸೆಂಬರ್ ತ್ರೈಮಾಸಿಕದಲ್ಲಿ ಚೀನಾವನ್ನು ಮೀರಿಸಿ ಭಾರತದ ಆರ್ಥಿಕತೆ ಶೇ.5.4ರಷ್ಟು ಬೆಳವಣಿಗೆಡಿಸೆಂಬರ್ ತ್ರೈಮಾಸಿಕದಲ್ಲಿ ಚೀನಾವನ್ನು ಮೀರಿಸಿ ಭಾರತದ ಆರ್ಥಿಕತೆ ಶೇ.5.4ರಷ್ಟು ಬೆಳವಣಿಗೆ

 440 ಶತಕೋಟಿ ಡಾಲರ್ ಮೌಲ್ಯದ ರಫ್ತು

440 ಶತಕೋಟಿ ಡಾಲರ್ ಮೌಲ್ಯದ ರಫ್ತು

ಜವಳಿ, ಪಂಪ್‌ಗಳು, ವೆಟ್ ಗ್ರೈಂಡರ್‌ಗಳು, ನಿರ್ಣಾಯಕ ಘಟಕಗಳ ತಯಾರಿಕೆ ಇತ್ಯಾದಿಗಳಿಗೆ ತಮಿಳುನಾಡು ವಿಶ್ವದ ಅತಿದೊಡ್ಡ ಕೇಂದ್ರವಾಗಲಿದೆ. ರಾಷ್ಟ್ರದ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. 440 ಶತಕೋಟಿ ಡಾಲರ್ ಮೌಲ್ಯದ ರಫ್ತುಗಳನ್ನು ಸಾಧಿಸಲು ಸರ್ಕಾರವು ಕೈಗೊಂಡ ವಿವಿಧ ನೀತಿ ಉಪಕ್ರಮಗಳು ಮತ್ತು ಉದ್ಯಮವು ಮಾಡಿದ ಕಠಿಣ ಪರಿಶ್ರಮವನ್ನು ಗೋಯಲ್ ಸ್ಮರಿಸಿದರು.

 ಎಲ್ಲಾ ರಚನಾತ್ಮಕ ಸಮಸ್ಯೆಗಳ ಪರಿಹಾರ

ಎಲ್ಲಾ ರಚನಾತ್ಮಕ ಸಮಸ್ಯೆಗಳ ಪರಿಹಾರ

ದೇಶವು ಶೀಘ್ರದಲ್ಲೇ 3 ಟ್ರಿಲಿಯನ್ ಆರ್ಥಿಕತೆಯ ಮಟ್ಟದಿಂದ 30 ಟ್ರಿಲಿಯನ್ ಆರ್ಥಿಕತೆಯನ್ನು ತಲುಪಲಿದೆ. ತೆರಿಗೆಯ ಅಡೆತಡೆಗಳು, ತೆರಿಗೆಯಲ್ಲಿನ ಸಮಸ್ಯೆಗಳು, ಜಾಗತಿಕ ಸ್ಪರ್ಧಾತ್ಮಕತೆ ಇತ್ಯಾದಿ ಸೇರಿದಂತೆ ಎಲ್ಲಾ ರಚನಾತ್ಮಕ ಸಮಸ್ಯೆಗಳನ್ನು ಸರ್ಕಾರವು ಪರಿಣಾಮಕಾರಿಯಾಗಿ ಪರಿಹರಿಸುತ್ತಿದೆ. ಮೌಲ್ಯ ಸರಪಳಿಯಲ್ಲಿನ ಎಲ್ಲಾ ಪಾಲುದಾರರು ಕಠಿಣವಾಗಿ ಶ್ರಮಿಸಲಿ ಒಗ್ಗಟ್ಟಿನಿಂದ ನಿಲ್ಲಬೇಕು . ಆ ಮೂಲಕ ವಿಶ್ವದ ಅತಿದೊಡ್ಡ ಉತ್ಪಾದನಾ ದೇಶವಾಗಬೇಕು. ಎಲ್ಲಾ ಯುವ ಮತ್ತು ಮಹಿಳಾ ಉದ್ಯಮಿಗಳಿಗೆ ಹೂಡಿಕೆ ಮಾಡಲು ಮತ್ತು ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡಲು ಮುಂದೆ ಬರುವಂತೆ ಅವರು ಆಹ್ವಾನಿಸಿದರು.

 ರಕ್ಷಣಾ ಸಂಬಂಧಿತ ಉತ್ಪನ್ನಗಳ ತಯಾರಿಕೆ

ರಕ್ಷಣಾ ಸಂಬಂಧಿತ ಉತ್ಪನ್ನಗಳ ತಯಾರಿಕೆ

ಭಾರತದಲ್ಲಿ ರಕ್ಷಣಾ ಸಿಬ್ಬಂದಿಗೆ ಸಮವಸ್ತ್ರವನ್ನು ತಯಾರಿಸುವ ಯೋಜನೆಗಳನ್ನು ಹಂಚಿಕೊಂಡ ಸಚಿವರು, ನಾವು ಸಿತ್ರಾ (ಗ್ರಾಮೀಣ ಕುಶಲಕರ್ಮಿಗಳಿಗೆ ಸುಧಾರಿತ ಟೂಲ್-ಕಿಟ್‌ಗಳ ಪೂರೈಕೆ) ಅನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ. ಇದರಿಂದಾಗಿ ಅವರು ಗಡಿಯಲ್ಲಿ ನಮ್ಮ ಯೋಧರಿಗೆ ಸಹಾಯ ಮಾಡುವ ಹೆಚ್ಚಿನ ರಕ್ಷಣಾ ಸಂಬಂಧಿತ ಉತ್ಪನ್ನಗಳನ್ನು ಉತ್ಪಾದಿಸಬಹುದು. ಸಮವಸ್ತ್ರಗಳನ್ನು ಆಮದು ಮಾಡಿಕೊಳ್ಳುವ ಬದಲು ಭಾರತದಲ್ಲಿಯೇ ತಯಾರಿಸಲಾಗುವುದು. ಕೆಲವು ಉತ್ಪನ್ನಗಳಿಗೆ ಕೆಲವು ಕ್ಲಿನಿಕಲ್ ಪ್ರಯೋಗಗಳ ಅಗತ್ಯವಿದೆ. ರಾಷ್ಟ್ರೀಯ ತಾಂತ್ರಿಕ ಜವಳಿ ಮಿಷನ್ ಅಡಿಯಲ್ಲಿ ಇದನ್ನು ಬೆಂಬಲಿಸಲು ನಾನು ಒಪ್ಪಿಕೊಂಡಿದ್ದೇನೆ. ಅವರು ಶೀಘ್ರದಲ್ಲೇ ಪ್ರಸ್ತಾವನೆಯನ್ನು ಸಲ್ಲಿಸುತ್ತಾರೆ ಎಂದು ಹೇಳಿದರು.

English summary
India is now seeking to conquer the world market in all sectors and the country will soon become a $ 30 trillion economy from the current level of $ 3 trillion, Union Minister Piyush Goyal said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X