ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ವರ್ಷದಲ್ಲಿ ವಿಶ್ವದ ಟಾಪ್ 3 ಆರ್ಥಿಕತೆಯಲ್ಲಿ ಭಾರತವೂ ಒಂದಾಗಿರಲಿದೆ: ಅಂಬಾನಿ

|
Google Oneindia Kannada News

ನವದೆಹಲಿ, ಡಿಸೆಂಬರ್ 15: ಭಾರತವು ಮುಂದಿನ ಎರಡು ದಶಕದಲ್ಲಿ ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಿರುತ್ತದೆ ಮತ್ತು ತಲಾದಾಯವು ದುಪ್ಪಟ್ಟಿಗಿಂತ ಹೆಚ್ಚಾಗಿರುತ್ತದೆ ಎಂದು ಏಷ್ಯಾದ ಶ್ರೀಮಂತ ವ್ಯಕ್ತಿ, ರಿಲಯನ್ಸ್‌ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮಂಗಳವಾರ ಹೇಳಿದ್ದಾರೆ.

ಫ್ಯುಯೆಲ್ ಫಾರ್ ಇಂಡಿಯಾ 2020 ಕಾರ್ಯಕ್ರಮದಲ್ಲಿ ಫೇಸ್ ಬುಕ್ ಮುಖ್ಯಸ್ಥ ಮಾರ್ಕ್ ಝುಕರ್ ಬರ್ಗ್ ಜತೆಗಿನ ಸಂವಾದದಲ್ಲಿ ಅವರು ಮಾತನಾಡಿ, ಭಾರತದ ಮಧ್ಯಮ ವರ್ಗವು ದೇಶದ ಒಟ್ಟಾರೆ ಕುಟುಂಬಗಳ ಪೈಕಿ ಶೇಕಡಾ 50ರಷ್ಟಿದೆ. ಅದು ವರ್ಷಕ್ಕೆ ಮೂರರಿಂದ ನಾಲ್ಕು ಪರ್ಸೆಂಟ್ ಏರಿಕೆ ಆಗುತ್ತದೆ ಎಂದರು.

ಭಾರತ ಬಂದ್‌ಗೂ ಮುನ್ನ ಪಂಜಾಬ್ ಸಿಎಂ ಹಾಗೂ ಮುಖೇಶ್ ಅಂಬಾನಿ ಭೇಟಿಯಾಗಿದ್ದರೇ?ಭಾರತ ಬಂದ್‌ಗೂ ಮುನ್ನ ಪಂಜಾಬ್ ಸಿಎಂ ಹಾಗೂ ಮುಖೇಶ್ ಅಂಬಾನಿ ಭೇಟಿಯಾಗಿದ್ದರೇ?

"ನಾನು ತುಂಬ ಬಲವಾಗಿ ನಂಬುತ್ತೇನೆ, ಮುಂದಿನ ಎರಡು ದಶಕದಲ್ಲಿ ಭಾರತವು ವಿಶ್ವದ ಟಾಪ್ ಮೂರು ಆರ್ಥಿಕತೆಯಾಗಿ ಬೆಳೆಯಲಿದೆ," ಎಂದು ಅಂಬಾನಿ ಹೇಳಿದ್ದಾರೆ. ಜೊತೆಗೆ ಇದಕ್ಕಿಂತ ಹೆಚ್ಚಾಗಿ ಡಿಜಿಟಲ್ ಸಮಾಜ ಸೃಷ್ಟಿ ಆಗಲಿದೆ. ಯುವಜನರು ಅದರ ಮುಂಚೂಣಿಯಲ್ಲಿ ಇರಲಿದ್ದಾರೆ. ನಮ್ಮ ತಲಾದಾಯವು 1800, 2000 ಯುಎಸ್ ಡಿಯಿಂದ 5000 ಯುಎಸ್ ಡಿ ಆಗಲಿದೆ ಎಂದು ಹೇಳಿದರು.

India Will Grow To Be Among Top 3 Economies In 2 Decades: Mukesh Ambani

ಫೇಸ್ ಬುಕ್ ಮತ್ತು ವಿಶ್ವದ ಹಲವು ಇತರ ಕಂಪೆನಿಗಳು ಹಾಗೂ ಉದ್ಯಮಿಗಳಿಗೆ ಭಾರತದಲ್ಲಿ ಸುವರ್ಣಾವಕಾಶ ಇದೆ. ಮುಂದಿನ ದಶಕಗಳಲ್ಲಿ ಇಲ್ಲಿ ಆಗಲಿರುವ ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆಯ ಭಾಗವಾಗಬಹುದು ಎಂದು ಅವರು ಹೇಳಿದರು.

English summary
Reliance industries chairman mukesh ambani says india will grow to be among top 3 economies in 2 decades.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X