ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್, ಜಪಾನ್ ಹಾದಿಯಲ್ಲಿ ಭಾರತ, ತೈಲ ಬೆಲೆ ಇಳಿಕೆಗೆ ಕ್ರಮ

|
Google Oneindia Kannada News

ನವದೆಹಲಿ, ನವೆಂಬರ್ 23: ತೈಲ ಬೆಲೆ ಇಳಿಸುವ ದೃಷ್ಟಿಯಿಂದ ಯುಎಸ್, ಜಪಾನ್ ಕೈಗೊಂಡ ಕ್ರಮವನ್ನೇ ಅನುಸರಿಸಲು ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ. ಭಾರತ ತುರ್ತು ದಾಸ್ತಾನು ಎಂದು ಇರಿಸಿಕೊಂಡಿರುವ 50 ಲಕ್ಷ ಬ್ಯಾರಲ್ ಮೀಸಲು ಕಚ್ಚಾ ತೈಲ ಬಿಡುಗಡೆಗೊಳಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಇದೇ ಮೊದಲ ಬಾರಿಗೆ ಈ ರೀತಿಯ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

ಏಳೆಂಟು ದಿನಗಳಲ್ಲಿ ಇದರಲ್ಲಿ 50 ಲಕ್ಷ ಬ್ಯಾರಲ್ ಕಚ್ಚಾ ತೈಲ ಬಿಡುಗಡೆಗೆ ಯೋಜಿಸಲಾಗಿದೆ, ಭಾರತ 5.33 ಮಿಲಿಯನ್ ಟನ್ ಅಥವಾ 38 ಮಿಲಿಯನ್ ಬ್ಯಾರೆಲ್ ನಷ್ಟು ಕಚ್ಚಾತೈಲವನ್ನು ಹೊಂದಿದೆ. ಭಾರತದ ಪೂರ್ವ ಹಾಗೂ ಪಶ್ಚಿಮ ಕರಾವಳಿಯಲ್ಲಿ ಮೀಸಲು ದಾಸ್ತಾನು ಇರಿಸಲಾಗಿದೆ ಎಂದು ಹೆಸರನ್ನು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ನ. 23: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಲ್ಲಿ ದುಬಾರಿ?ನ. 23: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಲ್ಲಿ ದುಬಾರಿ?

ಈ ಮೂಲಕ ಅಮೆರಿಕ, ಜಪಾನ್ ಸೇರಿದಂತೆ ಇತರೆ ದೊಡ್ಡ ಆರ್ಥಿಕತೆ ಹೊಂದಿರುವ ದೇಶಗಳ ಕ್ರಮವನ್ನು ಭಾರತ ಅನುಸರಿಸಲು ಮುಂದಾಗಿದೆ. ಈ ಮೊದಲೇ ತಿಳಿಸಿದಂತೆ ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಯ ಮೂರು ಪ್ರದೇಶಗಳ ನೆಲದಡಿಯ ಚೇಂಬರ್‌ಗಳಲ್ಲಿ ಸುಮಾರು 3.8 ಕೋಟಿ ಬ್ಯಾರಲ್ ಕಚ್ಚಾ ತೈಲವನ್ನು ಶೇಖರಿಸಿಡಲಾಗಿದೆ.

India to release 5 million barrels of crude oil from strategic reserves

ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್‌ಪಿಎಲ್) ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್(ಎಚ್‌ಪಿಸಿಎಲ್) ಮೂಲಕ ಈ ತೈಲವನ್ನು ಮಾರಾಟ ಮಾಡಲಾಗುತ್ತದೆ. ಈ ಸಂಸ್ಥೆಗಳು ಕಚ್ಚಾ ತೈಲ ದಾಸ್ತಾನು ಪ್ರದೇಶದಿಂದ ಪೈಪ್ ಲೈನ್ ಸಂಪರ್ಕ ಹೊಂದಿವೆ.

''ಮುಂದಿನ ದಿನಗಳಲ್ಲಿ ಮೀಸಲಿರುವ ಮತ್ತಷ್ಟು ಮೀಸಲು ತೈಲ ಬಿಡುಗಡೆ ಬಗ್ಗೆ ಚಿಂತಿಸಬಹುದು''ಎಂದು ಅಧಿಕಾರಿಯೊಬ್ಬರು ಹೇಳಿದ್ದು, ಈ ಕುರಿತಂತೆ ಮಾರ್ಗಸೂಚಿಯುಳ್ಳ ಪ್ರಕಟಣೆಯನ್ನು ಸರ್ಕಾರ ಪ್ರಕಟಿಸಲಿದೆ. ಕಳೆದ ವಾರದಲ್ಲಿ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ರಾಷ್ಟ್ರಗಳಿಗೆ ಯುಎಸ್ ಸರ್ಕಾರ ಮನವಿ ಮಾಡಿಕೊಂಡು, ಮೀಸಲು ಕಚ್ಚಾತೈಲ ರಿಲೀಸ್ ಮಾಡಿ ಎಂದಿತ್ತು. ಈ ಮೂಲಕ ಪೂರೈಕೆ, ಬೇಡಿಕೆ ನಡುವಿನ ಅಂತರ ತಗ್ಗಿಸಿ, ತೈಲ ಬೆಲೆ ಸಮರವನ್ನು ಅಂತ್ಯಗೊಳಿಸುವ ಉದ್ದೇಶ ಹೊಂದಲಾಗಿದೆ.

ಮುಖ್ಯವಾಗಿ ಅತಿ ಹೆಚ್ಚು ತೈಲ ಬಳಕೆ ರಾಷ್ಟ್ರಗಳಾದ ಚೀನಾ, ಭಾರತ ಹಾಗೂ ಜಪಾನ್ ಈ ಕ್ರಮ ಅನುಸರಿಸುವ ಬಗ್ಗೆ ಯುಎಸ್ ಆಶಾವಾದ ಹೊಂದಿತ್ತು. ಅದರಂತೆ ಜಪಾನ್ ಹಾಗೂ ಭಾರತ ಮೀಸಲು ಕಚ್ಚಾತೈಲ ರಿಲೀಸ್ ಮಾಡಲು ಮುಂದಾಗಿವೆ.

India to release 5 million barrels of crude oil from strategic reserves

ಈ ಬೆಳವಣಿಗೆಗೂ ಮುನ್ನ ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆ ಹೆಚ್ಚಳದ ಬಗ್ಗೆ ನಿರಾಸಕ್ತಿ ತೋರಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ತಿಂಗಳ ಲೆಕ್ಕದಂತೆ ರಷ್ಯಾವನ್ನು ಸೇರಿಸಿ ಒಪೆಕ್ ಪ್ಲಸ್ ರಾಷ್ಟ್ರಗಳು ಪ್ರತಿ ದಿನ 4,00,000 ಬ್ಯಾರೆಲ್ ಪ್ರತಿ ದಿನ ಮಾರುಕಟ್ಟೆಗೆ ಬಿಡುತ್ತಿವೆ. ಆದರೆ, ಬೇಡಿಕೆ ಅಧಿಕವಾಗಿದ್ದು, ಅದಕ್ಕೆ ತಕ್ಕ ಪೂರೈಕೆಯಾಗುತ್ತಿಲ್ಲ. ಕಳೆದ ವಾರದಿಂದ ಬ್ರೆಂಟ್ ಕಚ್ಚಾತೈಲ 78 ಯುಎಸ್ ಡಾಲರ್ ಪ್ರತಿ ಬ್ಯಾರೆಲ್ ಗೆ ಕುಸಿದಿದೆ. ಅಕ್ಟೋಬರ್ 26ರಂದು ಗರಿಷ್ಠ 86.40 ಡಾಲರ್ ಗೆ ಏರಿತ್ತು.

Recommended Video

ನಾಯಿಯ ಆಲ್ ರೌಂಡ್ ಆಟಕ್ಕೆ ಮನಸೋತ ಕ್ರಿಕೆಟ್ ದೇವರು ಹೇಳಿದ್ದೇನು? | Oneindia Kannada

ನವೆಂಬರ್ ತಿಂಗಳ ಆರಂಭದಲ್ಲಿ ಭಾರತ ಸರ್ಕಾರ ಇಂಧನದ ಮೇಲಿನ ಸುಂಕ ಇಳಿಕೆ ಮಾಡಿದೆ. ಆದರೆ, 60, 000 ಕೋಟಿ ರು ಆದಾಯದ ಹೊರೆ ಹೊತ್ತುಕೊಂಡಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ 1.33 ಮಿಲಿಯನ್ ಟನ್, ಕರ್ನಾಟಕದ ಮಂಗಳೂರಿನಲ್ಲಿ 1.5 ಮಿಲಿಯನ್ ಟನ್ ಹಾಗೂ ಪಡೂರ್ ಎಂಬಲ್ಲಿ 2.5 ಮಿಲಿಯನ್ ಟನ್ ಮೀಸಲು ಕಚ್ಚಾತೈಲ ಶೇಖರಣೆ ಇದೆ. ಯುಎಸ್ 727 ಮಿಲಿಯನ್ ಬ್ಯಾರೆಲ್, ಜಪಾನ್ 175 ಮಿಲಿಯನ್ ಬ್ಯಾರೆಲ್ ನಷ್ಟು ಮೀಸಲು ಕಚ್ಚಾತೈಲ ಹೊಂದಿವೆ.

English summary
India plans to release about 5 million barrels of crude oil from its emergency stockpile in tandem with the US, Japan and other major economies to cool international oil prices, a top government official said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X