ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100 ಜಿಬಿಪಿಎಸ್ ವೇಗದ ಇಂಟರ್ನೆಟ್ ಸಾಧ್ಯ : ಇಸ್ರೋ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 25: ಇಸ್ರೋ 2019 ರಲ್ಲಿ ಉಡಾಯಿಸಲಿರುವ 4 ಉಪಗ್ರಹಗಳ ನೆರವಿನಿಂದ ದೇಶದ ಇಂಟರ್ನೆಟ್ ವೇಗ ಹೆಚ್ಚಲಿದೆ. ಈ ಉಪಗ್ರಹಗಳಿಂದ ಪ್ರತಿ ಸೆಕೆಂಡ್​ಗೆ 100 ಗಿಗಾ ಬೈಟ್(Gbps) ಸ್ಪೀಡ್​ನಲ್ಲಿ ಇಂಟರ್ನೆಟ್​ ಲಭ್ಯವಾಗಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.

ಇಸ್ರೋದಿಂದ ಎರಡು ವಿದೇಶಿ ಉಪಗ್ರಹಗಳ ಯಶಸ್ವಿ ಉಡಾವಣೆ ಇಸ್ರೋದಿಂದ ಎರಡು ವಿದೇಶಿ ಉಪಗ್ರಹಗಳ ಯಶಸ್ವಿ ಉಡಾವಣೆ

ಕಳೆದ ವರ್ಷ ಜಿ ಸ್ಯಾಟ್-19 ಉಪಗ್ರಹವನ್ನು ಉಡಾವಣೆ ಮಾಡಿದ ಇಸ್ರೋ ಸಂಸ್ಥೆ ಇದೇ ನವೆಂಬರ್​ನಲ್ಲಿ ಜಿ ಸ್ಯಾಟ್-29 ಉಪಗ್ರಹದ ಉಡಾವಣೆಗೆ ತಯಾರಿ ನಡೆಸುತ್ತಿದೆ. ಡಿಸೆಂಬರ್​ನಲ್ಲಿ ಜಿ ಸ್ಯಾಟ್​-11ನ್ನು ಅಂತರಿಕ್ಷಕ್ಕೆ ಕಳುಹಿಸಲು ಇಸ್ರೋ ಮುಂದಾಗಿದೆ. ಇದಲ್ಲದೆ, ಸ್ಯಾಟ್-20ನ್ನು 2019ರಲ್ಲಿ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲು ಇಸ್ರೋ ಸಿದ್ದವಾಗಿದೆ. ಈ ನಾಲ್ಕು ಉಪಗ್ರಹಗಳಿಂದಾಗಿ ಭಾರತದ ಇಂಟರ್ನೆಟ್ ಹೊಸ​ ವೇಗ ಪಡೆದುಕೊಳ್ಳಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದರು.

ಇದೇ ಮೊದಲ ಬಾರಿಗೆ ಇಸ್ರೋದಿಂದ ರಾತ್ರಿ ವೇಳೆ ಉಪಗ್ರಹ ಉಡಾವಣೆ ಇದೇ ಮೊದಲ ಬಾರಿಗೆ ಇಸ್ರೋದಿಂದ ರಾತ್ರಿ ವೇಳೆ ಉಪಗ್ರಹ ಉಡಾವಣೆ

ಭಾರತದಲ್ಲಿ 500 ಮಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದರೂ, ಮೊಬೈಲ್ ಇಂಟರ್ನೆಟ್ ವೇಗದಲ್ಲಿ 109ನೇ ಸ್ಥಾನದಲ್ಲಿದೆ. ವಿಶ್ವದ ಇಂಟರ್ನೆಟ್ ಬಳಕೆದಾರರಲ್ಲಿ 2ನೇ ಸ್ಥಾನ ಪಡೆದಿರುವ ಭಾರತೀಯರ ಇಂಟರ್ನೆಟ್ ವೇಗವನ್ನು ಹೆಚ್ಚಿಸುವ ಸಲುವಾಗಿ ಅನೇಕ ಸಂಶೋಧನೆಗಳು ನಡೆಯುತ್ತಿದೆ.

India to have 100 Gbps internet speed by next year, says ISRO chief

ಸ್ಮಾರ್ಟ್ ಫೋನಿಗೂ ದೇಶಿ ಜಿಪಿಎಸ್ 'ನಾವಿಕ್' : ಇಸ್ರೋ ಸ್ಮಾರ್ಟ್ ಫೋನಿಗೂ ದೇಶಿ ಜಿಪಿಎಸ್ 'ನಾವಿಕ್' : ಇಸ್ರೋ

ಭಾರತದಲ್ಲಿ ಮೊಬೈಲ್ ಇಂಟರ್ನೆಟ್ ವೇಗವು ಗರಿಷ್ಠ 8.8 ಎಂಬಿಪಿಎಸ್ ಹಾಗೂ ಬ್ರಾಡ್​ಬ್ಯಾಂಡ್ ವೇಗ ಗರಿಷ್ಠ 18.82 ಎಂಬಿಪಿಎಸ್ ಹೊಂದಿದೆ. ವಿಶ್ವದಲ್ಲಿ ಅತಿ ವೇಗದ ಇಂಟರ್ನೆಟ್ ಸೌಲಭ್ಯವನ್ನು ನಾರ್ವೆ ದೇಶ ಒದಗಿಸುತ್ತಿದ್ದು, ಇಲ್ಲಿ 62 ಎಂಬಿಪಿಎಸ್ ವೇಗದಲ್ಲಿ ಮೊಬೈಲ್​ನಲ್ಲಿ ಡೌನ್​ಲೋಡ್ ಮಾಡಬಹುದಾಗಿದೆ. ಅದೇ ರೀತಿ 153 ಎಂಬಿಪಿಎಸ್ ಬ್ರಾಡ್​ಬ್ಯಾಂಡ್ ವೇಗ ಹೊಂದಿರುವ ಸಿಂಗಪುರ ಕೂಡ ಇಂಟರ್ನೆಟ್​ ಮೂಲಕ ಕ್ರಾಂತಿ ಉಂಟು ಮಾಡಿದೆ.

English summary
India will have a superfast broadband connectivity of 100 Gbps after the launch of three major satellites as early as next year. As per Speedtest, India ranks 76 in terms of fixed downloading broadband speed of 24.56 Mbps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X