ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರ ವೇಳೆಗೆ ಭಾರತದಲ್ಲಿ 100 ಕೋಟಿ ಮೊಬೈಲ್ ಬಳಕೆದಾರರು!

ಮೊಬೈಲ್ ಫೋನ್ ಗಳ ಬೆಲೆಗಳಲ್ಲಿನ ಇಳಿಕೆ, ನೆಟ್ ವರ್ಕ್ ಕವರೇಜ್ ಉತ್ತಮ ಆಗುತ್ತಿರುವುದರಿಂದ ಭಾರತದಲ್ಲಿ 2020ರ ವೇಳೆಗೆ ನೂರು ಕೋಟಿ ಮೊಬೈಲ್ ಬಳಕೆದಾರರು ಆಗಲಿದ್ದಾರೆ ಎಂದು ಹೊಸ ಅಧ್ಯಯನವೊಂದರ ವರದಿ ತಿಳಿಸಿದೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಅಕ್ಟೋಬರ್ 27: ಮೊಬೈಲ್ ಫೋನ್ ಗಳ ಬೆಲೆಗಳಲ್ಲಿನ ಇಳಿಕೆ, ನೆಟ್ ವರ್ಕ್ ಕವರೇಜ್ ಉತ್ತಮ ಆಗುತ್ತಿರುವುದರಿಂದ ಭಾರತದಲ್ಲಿ 2020ರ ವೇಳೆಗೆ ನೂರು ಕೋಟಿ ಮೊಬೈಲ್ ಬಳಕೆದಾರರು ಆಗಲಿದ್ದಾರೆ ಎಂದು ಹೊಸ ಅಧ್ಯಯನವೊಂದರ ವರದಿ ತಿಳಿಸಿದೆ. ಜೂನ್ 2016ರ ಲೆಕ್ಕಾಚಾರದ ಪ್ರಕಾರ 61.60 ಕೋಟಿ ಮೊಬೈಲ್ ಬಳಕೆದಾರರು ಭಾರತದಲ್ಲಿದ್ದಾರೆ.

ದೇಶವು ಜಗತ್ತಿನಲ್ಲೇ ಎರಡನೇ ಅತಿ ದೊಡ್ಡ ಮೊಬೈಲ್ ಫೋನ್ ನ ಮಾರುಕಟ್ಟೆಯಂತೆ. 'ಈಗ ದೇಶದ ಅರ್ಧದಷ್ಟು ಜನ ಮೊಬೈಲ್ ಸೇವೆ ಬಳಸುತ್ತಿದ್ದಾರೆ. ಮೊಬೈಲ್ ಫೋನ್ ಗಳ ಬೆಲೆಗಳಲ್ಲಿನ ಇಳಿಕೆ, ನೆಟ್ ವರ್ಕ್ ಕವರೇಜ್ ಉತ್ತಮ ಆಗುತ್ತಿರುವುದರಿಂದ 2020ರ ವೇಳೆಗೆ ಇನ್ನೂ 33 ಕೋಟಿ ಈಗಿನ ಸಂಖ್ಯೆಗೆ ಸೇರ್ಪಡೆಯಾಗಬಹುದು' ಎಂದು ವರದಿಯಲ್ಲಿ ಹೇಳಲಾಗಿದೆ.[ಐಫೋನ್ ಗಾಗಿ ಚಲಿಸುವ ರೈಲಿನಿಂದ ಹಾರಿದ ವಿದ್ಯಾರ್ಥಿ]

India to have 100 crore mobile subscribers by 2020

ಜಿಎಸ್ ಎಂಎ ಮೊಬೈಲ್ ಬಳಸುವ ವ್ಯಕ್ತಿಯನ್ನು ಇಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಬಳಸುವ ಸಾಧ್ಯತೆಯೂ ಇದೆ. 2020ರ ವೇಳೆಗೆ 3ಜಿ, 4ಜಿ ಮೊಬೈಲ್ ಬ್ರಾಡ್ ಬ್ಯಾಂಡ್ ಬಳಕೆದಾರರ ಸಂಖ್ಯೆ 67 ಕೋಟಿಗೂ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಈ ಅವಧಿಯಲ್ಲಿ 4ಜಿ ನೆಟ್ ವರ್ಕ್ ಬಳಕೆ ಮಾಡುವವರ ಸಂಖ್ಯೆ 28 ಕೋಟಿ ತಲುಪುವ ಅಂದಾಜಿದೆ. 2015ರಲ್ಲಿ ಈ ಸಂಖ್ಯೆ 30 ಲಕ್ಷ ಇತ್ತು. ಇನ್ನು 2016-2020ರ ಮಧ್ಯೆ ಟೆಲಿಕಾಂ ವಲಯದಲ್ಲಿ 2.3 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.[ಮೈಸೂರಿನ ಸಂಪೂರ್ಣ ಮಾಹಿತಿ ಈಗ ಅಂಗೈಯಲ್ಲಿ!]

2015ರಲ್ಲಿ ಭಾರತದ ಜಿಡಿಪಿಗೆ ಮೊಬೈಲ್ ಫೋನ್ ಇಂಡಸ್ಟ್ರಿ ಕೊಡುಗೆ ಶೇ 6.5ರಷ್ಟು. ಅಂದರೆ 9 ಲಕ್ಷ ಕೋಟಿ ರುಪಾಯಿ. ಇದು 2020ರ ವೇಳೆಗೆ 14 ಲಕ್ಷ ಕೋಟಿ ರುಪಾಯಿ ಆಗಲಿದೆ ಎಂದು ಅಂದಾಜಿಸಲಾಗಿದೆ. ಇಲ್ಲಿ ಮೊಬೈಲ್ ಇಂಡಸ್ಟ್ರಿ ನೇರ ಹಾಗೂ ಪರೋಕ್ಷವಾಗಿ ನೀಡುತ್ತಿರುವ ಕೊಡುಗೆಯ ಮೊತ್ತವನ್ನು ಕೊಡಲಾಗಿದೆ.

ಮೊಬೈಲ್ ಆಪರೇಟರ್ ಗಳು ಹಾಗೂ ಪರಿಸರ ವ್ಯವಸ್ಥೆಯು ಅಂದಾಜು 22 ಲಕ್ಷ ಮಂದಿಗೆ ನೇರವಾಗಿ ಉದ್ಯೋಗ ನೀಡಿದೆ. ಇನ್ನು ಹೆಚ್ಚುವರಿ 18 ಲಕ್ಷ ಉದ್ಯೋಗವನ್ನು ಮೊಬೈಲ್ ಇಂಡಸ್ಟ್ರಿ ಮೇಲೆ ಅವಲಂಬಿತವಾಗಿರುವ ಇತರ ಚಟುವಟಿಕೆಗಳು ಒದಗಿಸುತ್ತಿವೆ. ಒಟ್ಟಾರೆ 2015ರಲ್ಲಿ ಮೊಬೈಲ್ ಇಂಡಸ್ಟ್ರಿ 40 ಲಕ್ಷ ಉದ್ಯೋಗ ನೀಡಿದೆ.

English summary
Falling prices of mobile devices, network coverage improvement, India is expected to have hundred crore mobile subscribers by 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X