• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತಕ್ಕೆ 100ಕ್ಕೂ ಅಧಿಕ ಹೊಸ ವಿಮಾನ ನಿಲ್ದಾಣ, ತೇಜಸ್ ರೈಲು

|
   Union Budget 2020 : ವಿಮಾನ ಯಾನಕ್ಕೆ ಹೆಚ್ಚು ಒತ್ತು ಕೊಟ್ಟ ಮೋದಿ ಸರ್ಕಾರ..? | Airport | Airtrafffic

   ನವದೆಹಲಿ, ಫೆಬ್ರವರಿ 01: ಮೋದಿ 2.0 ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ನಲ್ಲಿ ಮೂಲ ಸೌಕರ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಧಾನಿ ಅವರ ಆಶಯದಂತೆ ಹೆಚ್ಚೆಚ್ಚು ವಿಮಾನ ಹಾಗೂ ರೈಲು ಸಂಚಾರವನ್ನು ಪ್ರಕಟಿಸಲಾಗಿದೆ.

   ನಿರ್ಮಲಾ ಅವರು ತಮ್ಮ ಭಾಷಣದಲ್ಲಿ ಘೋಷಿಸಿದಂತೆ, ಉಡಾನ್ ಯೋಜನೆಯಡಿಯಲ್ಲಿ ದೇಶದ ವಿವಿಧೆಡೆ 100ಕ್ಕೂ ಅಧಿಕ ವಿಮಾನ ನಿಲ್ದಾಣಗಳು ನಿರ್ಮಾಣವಾಗಲಿದೆ, ಸಾರಿಗೆ ಸಂಬಂಧಿಸಿದ ಮೂಲ ಸೌಕರ್ಯ ಕ್ಷೇತ್ರಕ್ಕಾಗಿ 1.7 ಲಕ್ಷ ಕೋಟಿ ರು ಅನುದಾನ ನೀಡಲಾಗಿದೆ.

   Budget 2020 Live: ಆದಾಯ ತೆರಿಗೆ ಪಾವತಿದಾರರಿಗೆ ಭರ್ಜರಿ ಸಿಹಿ ಸುದ್ದಿ

   ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ 1,150 ರೈಲುಗಳನ್ನು ಪಿಪಿಪಿ ಮಾದರಿಯಲ್ಲಿ ಸಂಚರಿಸಲಿದ್ದು, ನಾಲ್ಕು ರೈಲು ನಿಲ್ದಾಣಗಳನ್ನು ಸಂಪೂರ್ಣವಾಗಿ ಪುನರ್ ನಿರ್ಮಿಸಲಾಗುವುದು. ತೇಜಸ್ ಮಾದರಿ ರೈಲುಗಳನ್ನು ಹಳಿಗೆ ಬಿಟ್ಟು ಪ್ರವಾಸಿ ತಾಣಗಳ ಸಂಪರ್ಕ ಸಾಧಿಸಲಾಗುವುದು.

   ರೈಲ್ವೆ ಹಳಿಗಳಿಗೆ ಹೊಂದಿಕೊಂಡಂತೆ ಸೌರಶಕ್ತಿ ಘಟಕಗಳ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

   ಒಟ್ಟಾರೆ, ರಾಷ್ಟ್ರೀಯ ಮೂಲ ಸೌಕರ್ಯ ಪೈಪ್ ಲೈನ್(ಎನ್ ಐಪಿ) ಅಡಿಯಲ್ಲಿ 103 ಲಕ್ಷ ಕೋಟಿ ರುಗಳನ್ನು ಮೂಲ ಸೌಕರ್ಯ ಯೋಜನೆಗಳಿಗೆ ಮೀಸಲಿಡಲಾಗಿದೆ.

   ಬಜೆಟ್ 2020: ಗುಣಮಟ್ಟದ ಶಿಕ್ಷಣಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆ

   ಗೃಹ, ಕುಡಿಯುವ ನೀರು, ಇಂಧನ, ಆರೋಗ್ಯ, ರೈಲ್ವೆ ಆಧುನೀಕರಣ, ವಿಮಾನ ನಿಲ್ದಾಣ, ಮೆಟ್ರೋ, ಬಸ್, ಲಾಜಿಸ್ಟಿಕ್ ಹೊಸ ಯೋಜನೆಗಳಿಗೆ ಎನ್ ಐಪಿಯಡಿಯಲ್ಲಿ ಅನುದಾನ ಬಳಕೆಯಾಗಲಿದೆ.

   ಒಟ್ಟಾರೆ, 9 000 ಕಿ. ಮೀ ಎಕೋ ಡೆವಲಪ್ಮೆಂಟ್ ಕಾರಿಡಾರ್, 200 ಕರಾವಳಿ, ಬಂದರು , 2000 ಕಿ.ಮೀ ಹೆದ್ದಾರಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

   ಪ್ರಧಾನಮಂತ್ರಿ ಕುಸುಮ್ ಯೋಜನೆ ವಿಸ್ತರಣೆ: ರೈತರಿಗೆ ಏನು ಲಾಭ?

   ದೆಹಲಿ- ಮುಂಬೈ ಎಕ್ಸ್ ಪ್ರೆಸ್, ಬೆಂಗಳೂರು-ಚೆನ್ನೈ ಕಾರಿಡಾರ್ 2023ರೊಳಗೆ ಪೂರ್ಣಗೊಳ್ಳಲಿದೆ. 550 ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಒದಗಿಸಲಾಗಿದೆ ಎಂದು ನಿರ್ಮಲಾ ವಿವರಿಸಿದರು.

   English summary
   India to get 100 more airports, more Tejas-type trains. Govt proposes to develop 100 more airports by 2024 under 'Udaan' scheme. Doubling of airplanes through 100 more airports by 2024.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more