ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ 25 ವರ್ಷಗಳಲ್ಲಿ ಭಾರತಕ್ಕೆ ಅತಿದೊಡ್ಡ ಆರ್ಥಿಕತೆಯಾಗುವ ಸಾಮರ್ಥ್ಯವಿದೆ: ಪಿಯೂಷ್ ಗೋಯಲ್

|
Google Oneindia Kannada News

ನವದೆಹಲಿ, ಡಿಸೆಂಬರ್ 16: ಮುಂದಿನ 25 ವರ್ಷಗಳಲ್ಲಿ ವಿಶ್ವದ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದು ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಅವರು ಹೇಳಿದ್ದಾರೆ.

ಭಾರತೀಯ ಕೈಗಾರಿಕಾ ಒಕ್ಕೂಟ(ಐಸಿಸಿ)ದ ವಾರ್ಷಿಕ ಸಭೆ ವೇಳೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತದ ವ್ಯಾಪಾರಿಗಳು, ವಾಣಿಜ್ಯೋದ್ಯಮಗಳಿಗಳು, ನುರಿತ ಮಾನವಶಕ್ತಿ ಮತ್ತು ಸ್ಟಾರ್ಟ್‌ಅಪ್‌ಗಳ ಸಾಮರ್ಥ್ಯದೊಂದಿಗೆ, 2047ರಲ್ಲಿ ನಾವು 100 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುವ ಸಂದರ್ಭದಲ್ಲಿ ನಮ್ಮ ದೇಶವನ್ನು ವಿಶ್ವದ ನಂಬರ್‍ ಒನ್‍ ಆರ್ಥಿಕ ರಾಷ್ಟ್ರವಾಗಿರುವುದನ್ನು ಎಲ್ಲರೂ ನೋಡಬೇಕಿದೆ ಎಂದಿದ್ದಾರೆ.

 20 ವರ್ಷದಲ್ಲಿ ವಿಶ್ವದ ಟಾಪ್ 3 ಆರ್ಥಿಕತೆಯಲ್ಲಿ ಭಾರತವೂ ಒಂದಾಗಿರಲಿದೆ: ಅಂಬಾನಿ 20 ವರ್ಷದಲ್ಲಿ ವಿಶ್ವದ ಟಾಪ್ 3 ಆರ್ಥಿಕತೆಯಲ್ಲಿ ಭಾರತವೂ ಒಂದಾಗಿರಲಿದೆ: ಅಂಬಾನಿ

ಇದರ ಜೊತೆಗೆ 2025 ರ ವೇಳೆಗೆ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು ಕೈಗಾರಿಕೆ ಮತ್ತು ಸರ್ಕಾರ ಸಹಭಾಗಿತ್ವವನ್ನು ಹೊಂದಿರಬೇಕು. ಭಾರತವನ್ನು ಪ್ರಪಂಚದ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವಾಗಿ ನೋಡುವ ಸಮಯ ಇದಾಗಿದೆ. ಮುಂದಿನ 25-30 ವರ್ಷಗಳಲ್ಲಿ ಭಾರತವನ್ನು ಜಾಗತಿಕವಾಗಿ ಉನ್ನತ ಆರ್ಥಿಕತೆಯನ್ನಾಗಿ ಮಾಡಬಲ್ಲ ವ್ಯಾಪಾರ ಸಮುದಾಯದ ಸಾಮರ್ಥ್ಯಗಳು ಮತ್ತು ಆರಂಭಿಕ ಉದ್ಯಮಗಳ ಬಗ್ಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

India To Become $5 Trillion Economy By 2025: Piyush Goyal

'ಆತ್ಮನಿರ್ಭರ್‍ ಭಾರತ್' ನಮ್ಮ ಮಂತ್ರ, ನಮ್ಮ ಸ್ಫೂರ್ತಿ, ನಮ್ಮ ಗುರಿಯಾಗಿದೆ. ಇದನ್ನು ಸಕಾರಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

English summary
The industry and government have to partner to achieve the target of India becoming a $5 trillion economy by 2025, Union Minister Piyush Goyal said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X